Indian Premier League 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಈ ಋತುವಿನ ಮೊದಲ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
Indian Premier League 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಈ ಋತುವಿನ ಮೊದಲ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಟೂರ್ನಿಯ ಚುಟುಕು ಕದನವನ್ನ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ ಎರಡು ತಿಂಗಳಿಗೂ ಹೆಚ್ಚು ಕಾಲ ಒಂದರ ನಂತರ ಒಂದರಂತೆ ರೋಮಾಂಚಕ ಪಂದ್ಯಗಳನ್ನು ವೀಕ್ಷಿಸುವ ಭಾಗ್ಯ ಸಿಗಲಿದೆ. ಇಲ್ಲಿಯವರೆಗೆ ಈ ಲೀಗ್‌ನಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ಗಳ ಪ್ರಾಬಲ್ಯ ಕಂಡುಬಂದಿದೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಐಪಿಎಲ್‌ನಲ್ಲಿ ಇದುವರೆಗೆ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಅವರು ಈ ಲೀಗ್‌ನಲ್ಲಿ 252 ಪಂದ್ಯಗಳ 244 ಇನ್ನಿಂಗ್ಸ್‌ಗಳಲ್ಲಿ 38.66 ಸರಾಸರಿಯಲ್ಲಿ 8,004 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 131.97 ಆಗಿದೆ. ಅವರು ಈ ಲೀಗ್‌ನಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳನ್ನು ಗಳಿಸಿದ್ದಾರೆ.
ಪಟ್ಟಿಯಲ್ಲಿರುವ ಎರಡನೇ ಹೆಸರು ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್. ಈ ಲೀಗ್‌ನಲ್ಲಿ ಧವನ್ 222 ಪಂದ್ಯಗಳ 221 ಇನ್ನಿಂಗ್ಸ್‌ಗಳಲ್ಲಿ 35.25 ಸರಾಸರಿಯಲ್ಲಿ 6,729 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 127.14 ಆಗಿದೆ. ಅವರು ಈ ಲೀಗ್‌ನಲ್ಲಿ 2 ಶತಕಗಳು ಮತ್ತು 51 ಅರ್ಧಶತಕ ಇನ್ನಿಂಗ್ಸ್‌ಗಳ ಆಡಿದ್ದಾರೆ.
ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಲೀಗ್‌ನಲ್ಲಿ ರೋಹಿತ್ ಇದುವರೆಗೆ 257 ಪಂದ್ಯಗಳ 252 ಇನ್ನಿಂಗ್ಸ್‌ಗಳಲ್ಲಿ 29.2 ಸರಾಸರಿಯಲ್ಲಿ 6,628 ರನ್ ಗಳಿಸಿದ್ದಾರೆ. ಅವರು 131.14 ಸ್ಟ್ರೈಕ್ ರೇಟ್‌ನಲ್ಲಿ ರನ್‌ಗಳನ್ನು ಗಳಿಸಿದ್ದಾರೆ. ಈ ಲೀಗ್‌ನಲ್ಲಿ ಅವರು ಇಲ್ಲಿಯವರೆಗೆ 2 ಶತಕಗಳು ಮತ್ತು 43 ಅರ್ಧಶತಕಗಳನ್ನು ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 184 ಪಂದ್ಯಗಳ 184 ಇನ್ನಿಂಗ್ಸ್‌ಗಳಲ್ಲಿ 40.52 ಸರಾಸರಿಯಲ್ಲಿ 6,565 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 139.77 ಆಗಿದ್ದು, ಈ ಲೀಗ್‌ನಲ್ಲಿ 4 ಶತಕಗಳು ಮತ್ತು 62 ಅರ್ಧಶತಕಗಳನ್ನು ಗಳಿಸಿದ್ದಾರೆ.
ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುರೇಶ್ ರೈನಾ, 205 ಪಂದ್ಯಗಳ 200 ಇನ್ನಿಂಗ್ಸ್‌ಗಳಲ್ಲಿ 32.51 ಸರಾಸರಿಯಲ್ಲಿ 4,043 ರನ್ ಗಳಿಸಿದ್ದಾರೆ. ಅವರು ಈ ಎಲ್ಲಾ ರನ್‌ಗಳನ್ನು 136.73 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದರು. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು 39 ಅರ್ಧಶತಕ ಇನ್ನಿಂಗ್ಸ್‌ಗಳನ್ನು ಗಳಿಸಿದ್ದಾರೆ.