IPL 2025: ʼಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಎಂದರೇನು? ತಂಡಗಳು ಇದ್ದನ್ನ ಹೇಗೆ ಬಳಸಿಕೊಳ್ಳುತ್ತವೆ?

Indian Premier League 2025: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಿಕ ಇದು ಪ್ಲೇಯಿಂಗ್ 11ರ ಬದಲಾಗಿ ಪ್ಲೇಯಿಂಗ್ 12 ಎನ್ನುವಂತಾಗಲಿದೆ. ಆಟದ ಮಧ್ಯದಲ್ಲಿ ಒಬ್ಬ ಆಟಗಾರನ ಬದಲಾಗಿ ಇನ್ನೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಅನುಮತಿ ನೀಡುತ್ತದೆ. 

What is the 'Impact Player' rule?: ಹದಿನೆಂಟನೇ ಆವೃತ್ತಿಯ ಅಂದರೆ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿ ಅದ್ಧೂರಿಯಾಗಿ ಶುರುವಾಗಿದೆ. ಈಗಾಗಲೇ 7 ಪಂದ್ಯಗಳು ನಡೆದಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗುತ್ತಿವೆ. ವಿಶಾಖಪಟ್ಟಣಂನಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್‌ ಮತ್ತು ಲಕ್ನೋ ಸೂಪರ್‌ ಜೇಂಟ್ಸ್‌ ನಡುವಿನ 4ನೇ ಪಂದ್ಯ ಬಹಳ ಚರ್ಚೆಗೆ ಗ್ರಾಸವಾಯಿತು. ಬಹುತೇಕ ಸೋಲುವ ಹಂತಕ್ಕೆ ತಲುಪಿದ್ದ ಈ ಪಂದ್ಯದಲ್ಲಿ ದೆಹಲಿ ವಿರುದ್ಧ ಲಕ್ನೋ 1 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಲಕ್ನೋ ನೀಡಿದ್ದ 210 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ್ದ ದೆಹಲಿ 65 ರನ್‌ ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಬಂದ ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ 31 ಎಸೆತಗಳಲ್ಲಿ 5 ಸಿಕ್ಸರ್‌ ಮತ್ತು 5 ಬೌಂಡರಿ ಇದ್ದ ಅಜೇಯ 66 ರನ್‌ ಗಳಿಸಿದ ದೆಹಲಿಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯದ ಬಳಿಕ ʼಇಂಪ್ಯಾಕ್ಟ್ ಪ್ಲೇಯರ್ʼ ನಿಯಮದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /5

2025ರ ಐಪಿಎಲ್‌ನಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಲಿವೆ. ಈ ಪೈಕಿ ʼಇಂಪ್ಯಾಕ್ಟ್ ಪ್ಲೇಯರ್ʼ ನಿಯಮವು ಒಂದು. ಇದು 2023ರಲ್ಲಿಯೇ ಜಾರಿಗೆ ಬಂದಿದೆ. ದೇಶೀಯ ಕ್ರಿಕೆಟ್ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮ ಜಾರಿ ಮಾಡಿದ್ದ ಬಿಸಿಸಿಐ ಅಲ್ಲಿ ಯಶಸ್ವಿಯಾದ ಬಳಿಕ ಐಪಿಎಲ್‌ನಲ್ಲೂ ಈ ನಿಯಮವನ್ನು ಪರಿಚಯಿಸಿದೆ. ಹಾಗಾದ್ರೆ ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಇದರಿಂದ ತಂಡಗಳಿಗೆ ಹೇಗೆ ಅನುಕೂಲ? ಈ ನಿಯಮದಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಲ್ಲಾ ತಂಡಗಳು ಈ ನಿಯಮವನ್ನು ಪರಿಗಣಿಸಿಯೇ ಮಿನಿ ಹರಾಜಿನಲ್ಲಿ ಹಲವು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿವೆ.

2 /5

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಿಕ ಇದು ಪ್ಲೇಯಿಂಗ್ 11ರ ಬದಲಾಗಿ ಪ್ಲೇಯಿಂಗ್ 12 ಎನ್ನುವಂತಾಗಲಿದೆ. ಆಟದ ಮಧ್ಯದಲ್ಲಿ ಒಬ್ಬ ಆಟಗಾರನ ಬದಲಾಗಿ ಇನ್ನೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಅನುಮತಿ ನೀಡುತ್ತದೆ. ಈ ಮೊದಲು ಸಹ ಆಟಗಾರನೊಬ್ಬ ಗಾಯಗೊಂಡರೆ, ಆತನ ಬದಲಾಗಿ ಇನ್ನೊಬ್ಬ ಆಟಗಾರನಿಗೆ ಆಡಲು ಅನುಮತಿ ನೀಡಲಾಗುತ್ತಿತ್ತು. ಆದರೆ ಆ ಬದಲೀ ಆಟಗಾರನಿಗೆ ಬೌಲಿಂಗ್ ಮಾಡಲು ಅಥವಾ ಬ್ಯಾಟಿಂಗ್ ಮಾಡಲು ಅನುಮತಿ ಸಿಗುತ್ತಿರಲಿಲ್ಲ.

3 /5

ಆದರೆ ಹೊಸ ನಿಯಮದ ಪ್ರಕಾರ ʼಇಂಪ್ಯಾಕ್ಟ್ ಪ್ಲೇಯರ್ʼ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಇದು ಆಟದಲ್ಲಿ ಮತ್ತಷ್ಟು ರೋಚಕತೆ ತರುತ್ತದೆ ಎಂದು ನಂಬಲಾಗಿದೆ. ಟಾಸ್‌ನ ನಂತರ ಪ್ಲೇಯಿಂಗ್ 11 ಹೆಸರಿಸುವಾಗ ಐದು ಇಂಪ್ಯಾಕ್ಟ್ ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಪಂದ್ಯದ ಆರಂಭದ 14 ಓವರ್‌ಗಳಿಗೆ ಮೊದಲು ಆಡುವ ಬಳಗದಲ್ಲಿ ಒಬ್ಬ ಆಟಗಾರನ ಬದಲಾಗಿ ಇಂಪ್ಯಾಕ್ಟ್ ಆಟಗಾರರ ಪಟ್ಟಿಯಲ್ಲಿ ಒಬ್ಬನ ಜೊತೆ ಬದಲಾಯಿಸಬಹುದು.

4 /5

ತಂಡದ ನಾಯಕ ಮೊದಲು ಹೋಗಿ ಅಂಪೈರ್‌ಗೆ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಅಂಪೈರ್ ಸೂಚನೆ ನೀಡಿದ ಬಳಕೆ ʼಇಂಪ್ಯಾಕ್ಟ್ ಪ್ಲೇಯರ್ʼ ಮೈದಾನಕ್ಕೆ ಬರುತ್ತಾನೆ. ಉದಾಹರಣೆಗೆ ಮೊದಲು ಬೌಲಿಂಗ್ ಮಾಡುತ್ತಿರುವ ತಂಡದಲ್ಲಿ ಒಬ್ಬ ಬೌಲರ್ 4 ಓವರ್ ಬೌಲ್ ಮಾಡಿದ ನಂತರ, 14ನೇ ಓವರ್ ಬಳಿಕ ಇನ್ನೊಬ್ಬ ಬೌಲರ್ ಬದಲಿಯಾಗಿ ಒಳಗೆ ಬರಬಹುದು ಆತನಿಗೂ 4 ಓವರ್ ಬೌಲಿಂಗ್ ಮಾಡಲು ಅವಕಾಶ ಇರುತ್ತದೆ. ಬ್ಯಾಟಿಂಗ್ ಮಾಡುವ ತಂಡ ಸಹ ಮತ್ತೊಬ್ಬ ಬ್ಯಾಟರ್‌ಗೆ ಬದಲಾವಣೆ ಮಾಡಬಹುದು.

5 /5

ಈ ನಿಯಮಕ್ಕೆ ಕೆಲವು ಷರತ್ತುಗಳು ಸಹ ಇವೆ. ಮೊದಲನೆಯದಾಗಿ ಇದು ಭಾರತದ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ. ವಿದೇಶಿ ಆಟಗಾರರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬೇಕಾದರೆ ಪ್ಲೇಯಿಂಗ್ 11ರಲ್ಲಿ ಮೂವರು ವಿದೇಶಿ ಆಟಗಾರರು ಮಾತ್ರ ಇರಬೇಕು. ನಂತರ ನಾಲ್ಕನೇ ವಿದೇಶಿ ಆಟಗಾರ ʼಇಂಪ್ಯಾಕ್ಟ್ ಪ್ಲೇಯರ್ʼ ಆಗಿ ಬರಬಹುದು. ವಿದೇಶಿ ಆಟಗಾರನಿಗೆ ಬದಲಾಗಿ ಭಾರತೀಯ ಆಟಗಾರ ʼಇಂಪ್ಯಾಕ್ಟ್ ಪ್ಲೇಯರ್ʼ ಆಗಬಹುದು. ಒಮ್ಮೆ ʼಇಂಪ್ಯಾಕ್ಟ್ ಪ್ಲೇಯರ್ʼ ಆಗಿ ಬಂದ ಆಟಗಾರನನ್ನು ಮತ್ತೆ ಬದಲಿಸಲು ಯಾವುದೇ ಅವಕಾಶವಿಲ್ಲ. ಈ ನಿಯಮವನ್ನು ಈಗಾಗಲೇ ಎಲ್ಲಾ ತಂಡಗಳು ಬಳಸಿಕೊಳ್ಳುತ್ತಿವೆ. ಏನೇ ಇರಲಿ ʼಇಂಪ್ಯಾಕ್ಟ್ ಪ್ಲೇಯರ್ʼ ಚೆನ್ನಾಗಿ ಆಡಿದರೆ ಮಾತ್ರ ತಂಡ ಗೆಲ್ಲುತ್ತದೆ, ಆ ಆಟಗಾರ ಬೌಲರ್‌ ಆದರೆ ಹೆಚ್ಚು ರನ್‌ ಬಿಟ್ಟುಕೊಡಬಾರದು, ಬ್ಯಾಟ್ಸ್‌ಮನ್‌ ಆದರೆ ಸೊನ್ನೆ ಸುತ್ತಬಾರದು ಅಥವಾ ಕಳಪೆ ಬ್ಯಾಟಿಂಗ್‌ ಮಾಡಬಾರದು.