IPL 2022: ಈ 5 ಸ್ಟಾರ್ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗಲಿದ್ದಾರೆ!

Wed, 22 Dec 2021-10:48 pm,

2022ರ ಐಪಿಎಲ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿಲ್ಲ. ಅವರು 2015ರಿಂದ ಮುಂಬೈ ಪರ ಐಪಿಎಲ್ ಆಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅವರ ಮೇಲೆ ದೊಡ್ಡ ಬಿಡ್ ಆಗಬಹುದು. ಹಾರ್ದಿಕ್ ಅಪಾಯಕಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಪರಿಣತರು. ಅವರ ಸಿಕ್ಸರ್‌ಗಳನ್ನು ಹೊಡೆಯುವ ಕಲೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅವರು ಡೆತ್ ಓವರ್‌ಗಳಲ್ಲಿ ಅಪಾಯಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಹಾರ್ದಿಕ್ ಐಪಿಎಲ್‌ನಲ್ಲಿ 92 ಪಂದ್ಯಗಳಲ್ಲಿ 1,476 ರನ್ ಗಳಿಸಿದ್ದಾರೆ. ಅವರು ಯಾವುದೇ ತಂಡಕ್ಕೆ ಉಪಯುಕ್ತವಾಗಬಹುದು.

ಟೀಂ ಇಂಡಿಯಾ ಪರ ಆಡುತ್ತಿರುವ ಶಿಖರ್ ಧವನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಧವನ್ ಡೆಲ್ಲಿ ಕ್ಯಾಪಿಟಲ್ಸ್‌ ಗಾಗಿ ಹಲವು ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ಗಳನ್ನು ಆಡಿದ್ದಾರೆ. ಧವನ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಮೈದಾನದ ಎಲ್ಲಾ ಕಡೆ ಸ್ಟ್ರೋಕ್ ಮಾಡಬಹುದು. ಅವರು 192 ಪಂದ್ಯಗಳಲ್ಲಿ 5,728 ರನ್ ಗಳಿಸಿದ್ದಾರೆ. ಈ ಹಿಂದೆ ಹೈದರಾಬಾದ್ ತಂಡದ ನಾಯಕರಾಗಿಯೂ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಧವನ್ ಬ್ಯಾಟಿಂಗ್ ಜೊತೆಗೆ ನಾಯಕತ್ವಕ್ಕೂ ಸೂಕ್ತವಾಗಿದ್ದಾರೆ. ಹೀಗಾಗಿ ಇವರ ಮೇಲೆ ದೊಡ್ಡ ಬಿಡ್‌ ನಡೆಯಬಹುದು.

RCB ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಹರ್ಷಲ್ ಪಟೇಲ್ ಮೇಲೆ ಇದೀಗ ಎಲ್ಲರ ಕಣ್ಣಿದೆ. ತಮ್ಮ ಅದ್ಭುತ ಆಟದಿಂದ ಎಲ್ಲರ ಮನ ಗೆದ್ದಿದ್ದಾರೆ. ಈ ಬೌಲರ್ ಐಪಿಎಲ್ 2021ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ ಮತ್ತು ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ನಿಧಾನಗತಿಯ ಎಸೆತಗಳಲ್ಲಿ ವಿಕೆಟ್ ಕಬಳಿಸುವ ಇವರ ಕಲೆ ಎಲ್ಲರಿಗೂ ತಿಳಿದಿದೆ. ಈ ಬೌಲರ್‌ನನ್ನು ಆರ್‌ಸಿಬಿ ಉಳಿಸಿಕೊಂಡಿಲ್ಲ. ಹೊಸದಾಗಿ ಸೇರ್ಪಡೆಗೊಂಡಿರುವ 2 ತಂಡಗಳು ಈ ಬೌಲರ್ ಅನ್ನು ತಮ್ಮ ಶಿಬಿರಕ್ಕೆ ಸೇರಿಸಿಕೊಳ್ಳಬಹುದು. ಹರ್ಷಲ್ ಯಾವ ಸಮಯದಲ್ಲಾದರೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.  

ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಉಳಿಸಿಕೊಂಡಿಲ್ಲ. ದೀಪಕ್ ಯಾವಾಗಲೂ ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಈ ಬೌಲರ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಮಾರಕ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ದೀಪಕ್ 2021ರ ಐಪಿಎಲ್ ಟೂರ್ನಿಯಲ್ಲಿ ಆಡಿದ 15 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಇವರ ಸ್ವಿಂಗ್ ಎಸೆತಗಳನ್ನು ಯಾವುದೇ ಬ್ಯಾಟ್ಸ್‌ ಮನ್ ಆಡುವುದು ಸುಲಭವಲ್ಲ. 

ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರಾಹುಲ್ ಚಹಾರ್ ಭಾರತದ ಪಿಚ್‌ಗಳಲ್ಲಿ ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ರಾಹುಲ್ ಅವರ ಅಮೋಘ ಫಾರ್ಮ್ ಅನ್ನು ನೋಡಿ ಅವರನ್ನು ಟಿ-20 ವಿಶ್ವಕಪ್‌ಗೆ ಸೇರಿಸಿಕೊಳ್ಳಲಾಗಿದೆ. ರಾಹುಲ್ ಐಪಿಎಲ್‌ನಲ್ಲಿ 42 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದಾರೆ. ಈ ಅಪಾಯಕಾರಿ ಸ್ಪಿನ್ನರ್ ಅನ್ನು ಖರೀದಿಸಲು ದೊಡ್ಡ ಬಿಡ್ ಆಗಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link