Sugar Control Foods: ಹಣ್ಣು ತರಕಾರಿಗಳ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂತೆಯೇ, ಕೆಲವು ಕಾಯಿಲೆಗಳಿಗೆ ನಿರ್ದಿಷ್ಟ ಹಣ್ಣು-ತರಕಾರಿಗಳ ಸೇವನೆಯಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
1/6ಆಹಾರ ಸೇವನೆ ಬಳಿಕ ಶುಗರ್ ಲೆವೆಲ್ ಹೆಚ್ಚು-ಕಡಿಮೆಯಾಗುವುದು ಸಾಮಾನ್ಯ. ಆದರೆ, ಖಾಲಿ ಹೊಟ್ಟೆಯಲ್ಲಿ ಶುಗರ್ ಲೆವೆಲ್ 250 mg/dlಗಿಂತಲೂ ಹೆಚ್ಚಿದ್ದರೆ ಇದನ್ನು ಮಧುಮೇಹದ ಗಂಭೀರ ಲಕ್ಷಣ ಎಂದು ಪರಿಗಣಿಸಲಾಗುತ್ತದೆ.
2/6ಹೈ ಶುಗರ್ ಲೆವೆಲ್ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಅಥವಾ ಬಳಕೆಯಲ್ಲಿನ ಸಮಸ್ಯೆಯನ್ನು ಸೂಚಿಸುತ್ತದೆ. ಮಾತ್ರವಲ್ಲ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಾಡ್ಯಾಡಿದ್ದಾರೆ ಇದು ಹೃದ್ರೋಗ, ಕಿಡ್ನಿ ಫೆಲ್ಯೂರ್, ದೃಷ್ಟಿ ಮಂದವಾಗುವಿಕೆಯಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
3/6ಆಯುರ್ವೇದದ ಪ್ರಕಾರ, ಒಂದೆರಡು ತರಕಾರಿಯನ್ನು ಹಸಿಯಾಗಿ ತಿನ್ನುವುದರಿಂದ ಇಲ್ಲವೇ ಅದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಿ ಬ್ಲಡ್ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗದಂತೆ ತಡೆಯಲು ಸಹಕಾರಿ ಆಗಿದೆ ಎನ್ನಲಾಗುತ್ತದೆ.
4/6ಸೌತೆಕಾಯಿಯಲ್ಲಿ ಫೈಬರ್, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ನೀರಿಣಾಂಶವೂ ಅಧಿಕವಾಗಿರುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎನ್ನಲಾಗುತ್ತದೆ.
5/6ವಿಟಮಿನ್ ಸಿ, ಲೈಕೋಪಿನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಟೊಮಾಟೊವನ್ನು ಹಸಿಯಾಗಿ ತಿನ್ನುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಅನ್ನು ಸಕ್ರಿಯಗೊಳಿಸಿ ಕೂಡಲೇ ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಪರಿಣಾಮಕಾರಿ ಆಗಿದೆ.
6/6ಆಯುರ್ವೇದದ ಪ್ರಕಾರ, ಸೌತೆಕಾಯಿ, ಟೊಮಾಟೊವನ್ನು ಹಸಿಯಾಗಿ ತಿನ್ನುವುದನ್ನು ರೂಢಿಸಿಕೊಂಡರೆ ಇದು ಬ್ಲಡ್ ಶುಗರ್ ಅನ್ನು ನೈಸರ್ಗಿಕವಾಗಿ ಕಂಟ್ರೋಲ್ ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.