ಹಲಸಿನ ಹಣ್ಣಿನ ಬೀಜವನ್ನು ಇದರ ಜೊತೆ ಸೇವಿಸಿದರೆ ಸಂಪೂರ್ಣವಾಗಿ ಕಂಟ್ರೋಲ್ ಗೆ ಬರುವುದು ಬ್ಲಡ್ ಶುಗರ್ !ಒಮ್ಮೆ ಟ್ರೈ ಮಾಡಿ
ಹಲಸಿನ ಬೀಜಗಳನ್ನು ತಿನ್ನುವುದರಿಂದ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಪೌಷ್ಟಿಕತಜ್ಞರು ದೈನಂದಿನ ಆಹಾರದಲ್ಲಿ ಹಲಸಿನ ಬೀಜಗಳನ್ನು ಸೇರಿಸುವಂತೆ ಹೇಳುತ್ತಾರೆ.
ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ ನಿಯಮಿತ ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ.ಹಲಸಿನ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಇಂದು ಬ್ಲಡ್ ಶುಗರ್ ಅನ್ನು ಏರದಂತೆ ತಡೆಯುತ್ತದೆ.
ಹಲಸಿನ ಬೀಜಗಳನ್ನು ಬೆಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು,ನಂತರ ಇವುಗಕನ್ನು ಮಿಕ್ಸಿ ಸಹಾಯದಿಂದ ಪುಡಿ ಮಾಡಿಕೊಳ್ಳಬೇಕು.ಈ ಪುಡಿಯನ್ನು ಹಾಲಿಗೆ ಬೆರೆಸಿ ಸೇವಿಸಬೇಕು.
ಮತ್ತೊಂದು ವಿಧಾನದ ಪ್ರಕಾರ ಹಲಸಿನ ಬೀಜವನ್ನು ನೀರಿನಲ್ಲಿ ಹಾಕಿ ಚೆನಾಗಿ ಬೇಯಿಸಬೇಕು. ನಂತರ ಇದರ ಸಿಪ್ಪೆ ಸುಲಿದು ಸೇವಿಸಬಹುದು. ಹೀಗೆ ಬೇಯಿಸುವಾಗ ರುಚಿಗೆ ಸ್ವಲ್ಪವೇ ಸ್ವಲ್ಪ ಉಪ್ಪು ಸೇರಿಸಬಹುದು.
ಹಲಸಿನ ಬೀಜಗಳು ಕಬ್ಬಿಣದ ಉತ್ತಮ ಮೂಲವಾಗಿದ್ದು ಅದು ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಸಾಕಷ್ಟು ಕಬ್ಬಿಣದ ಸೇವನೆಯು ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.