Jio: ದೇಶದ ಮೂಲೆ ಮೂಲೆಯಲ್ಲಿ ಉತ್ತಮ ನೆಟ್ವರ್ಕ್ ಹೊಂದಿರುವ ರಿಲಯನ್ಸ್ ಜಿಯೋ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಬಂಪರ್ ಕೊಡುಗೆಯನ್ನು ಪರಿಚಯಿಸಿದೆ.
1/6ದೇಶದಲ್ಲಿ ಅಗ್ಗದ ಯೋಜನೆಗಳೊಂದಿಗೆ ಜನಪ್ರಿಯವಾಗಿರುವ ರಿಲಯನ್ಸ್ ಜಿಯೋ ಮತ್ತೊಮ್ಮೆ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
2/6ಜಿಯೋ ಪರಿಚಯಿಸಿರುವ ಈ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಬೆಲೆ 895ರೂ. ಎಂದರೆ ದಿನಕ್ಕೆ ಕೇವಲ 3ರೂ.ಗಳಿಗಿಂತಲೂ ಕಡಿಮೆ ಇದ್ದು, ಇದು ಒಟ್ಟು 336 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
3/6ಸುಮಾರು 11 ತಿಂಗಳವರೆಗಿನ ದೀರ್ಘಾವಧಿ ರಿಚಾರ್ಜ್ ಪ್ಲಾನ್ ಇದಾಗಿದ್ದು ಈ ಜಿಯೋ ಅಗ್ಗದ ರಿಚಾರ್ಜ್ ಪ್ಲಾನ್ ಮೂಲಕ ವರ್ಷವಿಡೀ ಸಿಮ್ ಆಕ್ಟೀವ್ ಆಗಿಡುವುದರ ಜೊತೆಗೆ ಹಲವು ಪ್ರಯೋಜನಗಳು ಸಹ ಲಭ್ಯವಾಗಲಿವೆ.
4/6ಜಿಯೋ 895ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 11 ತಿಂಗಳುಗಳ ಕಾಲ ದೇಶಾದ್ಯಂತ ಎಲ್ಲಾ ನೆಟ್ವರ್ಕ್ ಗಳಿಗೆ ಅನ್ಲಿಮಿಟೆಡ್ ಕರೆ, ತಿಂಗಳಿಗೆ 50 ಎಸ್ಎಂಎಸ್ ಉಚಿತವಾಗಿರುತ್ತದೆ.
5/6ಜಿಯೋದ ಈ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳಿಗೆ 2ಜಿಬಿ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ.
6/6ಜಿಯೋ ಪರಿಚಯಿಸಿರುವ ಈ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ವಿಶೇಷವಾಗಿ ಜಿಯೋ ಫೋನ್ ಬಳಕೆದಾರರಿಗಾಗಿ ಆಗಿದೆ.