ಈ ಸ್ಟಾರ್‌ ನಟಿ 14 ವರ್ಷದಿಂದ ಒಂದೂ ಚಿತ್ರ ಮಾಡಿಲ್ಲ... ಆದರೆ 4600 ಕೋಟಿ ರೂ.ಗಳ ಆಸ್ತಿಗೆ ಒಡತಿ, ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್‌!

Juhi Chawla husband and property details: ಈಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 14 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೆ ಇವರೇ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಜೂಹಿ ಚಾವ್ಲಾ.. ಕನ್ನಡದಲ್ಲಿ ನಟಿಸಿದ ಫೇಮಸ್‌ ನಟಿಯರಲ್ಲಿ ಒಬ್ಬರು. 1984 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ನಂತರ ಜೂಹಿ ಚಾವ್ಲಾ ತಮ್ಮ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದರು. 

2 /9

1986 ರಲ್ಲಿ ಧರ್ಮೇಂದ್ರ, ಸನ್ನಿ ಡಿಯೋಲ್ ಮತ್ತು ಶ್ರೀದೇವಿ ಅಭಿನಯದ ಸುಲ್ತಾನತ್ ಚಿತ್ರದಲ್ಲಿ ಒಂದು ಪಾತ್ರದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಸುಲ್ತಾನತ್ ಚಿತ್ರದ ಎರಡು ವರ್ಷಗಳ ನಂತರ, ಜೂಹಿ ಚಾವ್ಲಾ ಖಯಾಮತ್ ಸೆ ಖಯಾಮತ್ ತಕ್ ನಲ್ಲಿ ಕಾಣಿಸಿಕೊಂಡರು. 

3 /9

ಈ ಚಿತ್ರವು ಆಮಿರ್ ಖಾನ್ ಅವರ ಮೊದಲ ಬಾಲಿವುಡ್ ಸಿನಿಮಾ ಆಗಿತ್ತು. ಇದು ಜೂಹಿಗೆ ಒಂದು ಮಹತ್ವದ ಚಿತ್ರವಾಯಿತು. ಬಳಿಕ ಲೂಟೆರೆ, ಐನಾ, ಡರ್, ಹಮ್ ಹೈನ್ ರಾಹಿ ಪ್ಯಾರ್ ಕೆ, ಇಷ್ಕ್, ದೀವಾನಾ ಮಸ್ತಾನಾ ಮತ್ತು ಯೆಸ್ ಬಾಸ್ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಜೂಹಿ ಚಾವ್ಲಾ ನಟಿಸಿದರು.

4 /9

ಜೂಹಿ ಚಾವ್ಲಾ ತಮ್ಮ ನಟನೆ ಮತ್ತು ಸೌಂದರ್ಯದಿಂದ ಹೆಸರುವಾಸಿಯಾದರು. ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ಸೇರಿದರು. ನಟನೆಯ ಹೊರತಾಗಿ ಜೂಹಿ ಹಲವಾರು ಆದಾಯದ ಮೂಲಗಳನ್ನು ಹೊಂದಿದ್ದಾರೆ. 

5 /9

ಶಾರುಖ್ ಖಾನ್ ನೇತೃತ್ವದ ಚಲನಚಿತ್ರ ನಿರ್ಮಾಣ ಕಂಪನಿಯಾದ ರೆಡ್ ಚಿಲ್ಲೀಸ್ ಗ್ರೂಪ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಶಾರುಖ್‌ ಖಾನ್‌ ಜೊತೆ ಜೂಹಿ ಚಾವ್ಲಾ ಜೊತೆಗೆ ಐಪಿಎಲ್ ಕ್ರಿಕೆಟ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ-ಮಾಲೀಕರಾಗಿದ್ದಾರೆ.

6 /9

ಜೂಹಿ ಚಾವ್ಲಾ ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ಮುಂಬೈ ಮತ್ತು ಪೋರ್ಬಂದರ್‌ನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. 

7 /9

ಮುಂಬೈನಲ್ಲಿ ಗುಸ್ಟೊಸೊ ಮತ್ತು ರೂ ಡು ಲಿಬನ್ ಸೇರಿದಂತೆ ಉತ್ತಮ ರೆಸ್ಟೋರೆಂಟ್‌ಗಳನ್ನು ಸಹ ಹೊಂದಿದ್ದಾರೆ. ವರದಿಗಳ ಪ್ರಕಾರ, 2024 ರಲ್ಲಿ ಜೂಹಿ ಚಾವ್ಲಾ ಅವರ ಒಟ್ಟು ಆಸ್ತಿ 4,600 ಕೋಟಿ ರೂಪಾಯಿ.

8 /9

ಜೂಹಿ ಚಾವ್ಲಾ ಜೊತೆ ಇತರ ನಟಿಯರನ್ನು ಹೋಲಿಸಿದಾಗ, ಆಲಿಯಾ ಭಟ್ ಒಟ್ಟು ಆಸ್ತಿ 550 ಕೋಟಿ ರೂ., ದೀಪಿಕಾ ಪಡುಕೋಣೆ ಒಟ್ಟು ಆಸ್ತಿ 500 ಕೋಟಿ ರೂ., ಕತ್ರಿನಾ ಕೈಫ್ ಒಟ್ಟು ಆಸ್ತಿ 240 ಕೋಟಿ ರೂ.

9 /9

ಅನುಷ್ಕಾ ಶರ್ಮಾ ಒಟ್ಟು ಆಸ್ತಿ 665 ಕೋಟಿ ರೂ. ಮತ್ತು ಕರೀನಾ ಕಪೂರ್ ಒಟ್ಟು ಆಸ್ತಿ 705 ಕೋಟಿ ರೂ. ಆಗಿದೆ. ಜೂಹಿ ಚಾವ್ಲಾ ಭಾರತದ ಅತ್ಯಂತ ಶ್ರೀಮಂತ ನಟಿ ಆಗಿದ್ದಾರೆ.