12ವರ್ಷಗಳ ನಂತರ ತನ್ನ ಉತ್ಕೃಷ್ಟ ರಾಶಿಯಲ್ಲಿ ಗುರು ಸಂಚಾರ: 2026ರಲ್ಲಿ 4 ರಾಶಿಯವರಿಗೆ ಜಾಕ್‌ಪಾಟ್, ಅಷ್ಟೈಶ್ವರ್ಯ

Guru Gochar: ವೈದಿಕ ಜ್ಯೋತಿಷ್ಯದ ಪ್ರಕಾರ, ವರ್ಷಕ್ಕೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುವ ದೇವಾನುದೇವತೆಗಳ ಗುರು ಎನ್ನಲಾಗುವ ಬೃಹಸ್ಪತಿ 2025ರ ಮೇ ತಿಂಗಳಿನಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸಿದ ಬಳಿಕ ತನ್ನ ವೇಗವನ್ನು ದ್ವಿಗುಣಗೊಳಿಸಿತು. ಅಕ್ಟೋಬರ್‌ನಲ್ಲಿ ತನ್ನ ಉತ್ಕೃಷ್ಟ ರಾಶಿಯನ್ನು ಪ್ರವೇಶಿಸಿರುವ 49 ದಿನಗಳ ಬಳಿಕ ಮಿಥುನ ರಾಶಿಗೆ ಮರಳಲಿದ್ದಾನೆ.

Jupiter Transit:  ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಜ್ಞಾನ, ಸಂತೋಷ, ವಿವಾಹ, ಅದೃಷ್ಟ, ಸುಖ-ಸೌಕರ್ಯದ ಅಂಶ ಎಂದು ಪರಿಗಣಿಸಲಾಗಿದೆ. ಪ್ರಸ್ತುತ ಗುರು ತನ್ನ ಅತಿಕ್ರಮಣ ಚಲನೆಯಲ್ಲಿದ್ದಾನೆ. 

1 /6

2025ರ ಮೇ ತಿಂಗಳಿನಲ್ಲಿ ಸಂಚಾರ ಬದಲಾಯಿಸಿದ ಗುರು ತನ್ನ ವೇಗವನ್ನು ಹೆಚ್ಚಿಸುವ ಮೂಲಕ ಇದೇ ವರ್ಷ ಅಕ್ಟೋಬರ್ 18ರಂದು ತನ್ನ ಉತ್ಕೃಷ್ಟ ರಾಶಿಚಕ್ರವಾದ ಕಟಕ ರಾಶಿಗೆ ಪ್ರವೇಶಿಸಿ ಅತಿಕ್ರಮಣ ಚಲನೆಯಲ್ಲಿದ್ದಾನೆ. 49ದಿನಗಳ ಬಳಿಕ ಎಂದರೆ ಡಿಸೆಂಬರ್ 05, 2025ರಂದು ಮತ್ತೆ ಮಿಥುನ ರಾಶಿಗೆ ಹಿಂದುರುಗಲಿರುವ ಗುರು 2026ರಲ್ಲಿ ಮರಳಿ ಕಟಕ ರಾಶಿಗೆ ಸಾಗಲಿದ್ದಾನೆ. 

2 /6

ಕಟಕ ರಾಶಿಯನ್ನು ಗುರು ಗ್ರಹದ ಪರಮ ರಾಶಿ, ಉತ್ಕೃಷ್ಟ ರಾಶಿ ಎಂತಲೇ ಹೇಳಲಾಗುತ್ತದೆ. 12 ವರ್ಷಗಳ ಬಳಿಕ ಕಟಕ ರಾಶಿಯಲ್ಲಿರುವ ಗುರು ಇಂದು (ನವೆಂಬರ್ 11, 2025) ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದ್ದಾನೆ. ಇದೇ ಸ್ಥಿತಿಯಲ್ಲಿ ಮಿಥುನ ರಾಶಿಗೆ ಸಾಗುತ್ತಾನೆ. ಜೂನ್ 02, 2026ರಲ್ಲಿ ಮತ್ತೆ ಕಟಕ ರಾಶಿಗೆ ಪದಾರ್ಪಣೆ ಮಾಡಲಿರುವ ಗುರು ನಾಲ್ಕು ರಾಶಿಯವರ ಬದುಕಿನಲ್ಲಿ ಅಷ್ಟೈಶ್ವರ್ಯವನ್ನು ಕರುಣಿಸಲಿದ್ದಾನೆ. ಎನ್ನಲಾಗುತ್ತಿದೆ. 

3 /6

ಉತ್ಕೃಷ್ಟ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಉತ್ತಮ ಫಲವನ್ನು ಕರುಣಿಸಲಿದ್ದಾನೆ. ಈ ವೇಳೆ ವ್ಯವಹಾರ ಸಾಧಾರಣಆಗಿ ಮುಂದುವರೆಯುತ್ತದೆ. ಆದರೂ, ಬಾಕಿ ಉಳಿದಿರುವ ಹಣಕಾಸು ಕೈ ಸೇರಲಿದೆ. ನಿಮ್ಮಿಷ್ಟದಂತೆ ಸಂಗಾತಿಯೊಂದಿಗೆ ಸುಮಧುರ ಕ್ಷಣವನ್ನು ಕಳೆಯುವಿರಿ. ಈ ಅವಧಿಯಲ್ಲಿ ನಿಮ್ಮ ಸೋದರ ವರ್ಗಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗಬಹುದು. 

4 /6

ವಕ್ರೀ ಗುರು ಸಂಚಾರದ ಪ್ರಭಾವದಿಂದ ಈ ರಾಶಿಯವರಿಗೆ ಸ್ನೇಹವರ್ಗ ಹೆಚ್ಚಾಗಲಿದೆ. ಹೊಸ ಸ್ನೇಹಿತರಿಂದ ವ್ಯವಹಾರದಲ್ಲಿ ಉತ್ತಮ ಸಹಕಾರವನ್ನು ನಿರೀಕ್ಷಿಸಬಹುದು. ವ್ಯಾಪಾರ ವಿಸ್ತರಣೆಗೆ ಸಂಬಂಧಿಸಿದಂತೆ ಆಹ್ಲಾದಕರ ಸಮಯ ಇದಾಗಿದೆ. ಗುರು ಕೃಪಾಕಟಾಕ್ಷದಿಂದ ಆದಾಯದ ಹರಿವು ಹೆಚ್ಚಾಗಲಿದೆ. ದೀರ್ಘ ಸಮಯದ ಅನಾರೋಗ್ಯದಿಂದ ಬಳಲುತ್ತಿರುವವರು ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. 

5 /6

ತನ್ನ ಪರಮ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಈ ರಾಶಿಯವರಿಗೆ ಎಲ್ಲೆಡೆಯಿಂದಲೂ ಅದೃಷ್ಟವನ್ನು ನೀಡುವನು. ನಿಮ್ಮ ಇಷ್ಟು ದಿನಗಳ ಪರಿಶ್ರಮಕ್ಕೆ ಉತ್ತಮ ಲಾಭ, ಹೆಸರು ದೊರೆಯಲಿದೆ. ನಿಮ್ಮ ನಾಯಕತ್ವದ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಹಣಕಾಸಿನ ದೃಷ್ಟಿಯಿಂದಲೂ ಅದೃಷ್ಟ ಖುಲಾಯಿಸಲಿದ್ದು ಅಪಾರ ಸಂಪತ್ತು ಕೈ ಸೇರಲಿದೆ. ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯಕ್ಕೂ ಅತ್ಯುತ್ತಮ ಸಮಯ ಇದಾಗಿದೆ. 

6 /6

ವಕ್ರೀ ಗುರು ಈ ರಾಶಿಯವರ ಬದುಕಿನಲ್ಲಿ ಸುಖ-ಸೌಕರ್ಯಗಳನ್ನು ಹೆಚ್ಚಿಸಲಿದ್ದಾನೆ. ಕುಟುಂಬದಲ್ಲಿ ನಿಮ್ಮನ್ನು ಹೆಚ್ಚು ಬಾಧಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವ ಸಮಯ ಇದಾಗಿದೆ. ಈ ಅವಧಿಯಲ್ಲಿ ಹಿಂದೆ ಮಾಡಿರುವ ಹೂಡಿಕೆಗಳಿಂದ ಅಧಿಕ ಲಾಭಾನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ಏಳ್ಗೆ ಕಂಡು ಬರಲಿದೆ. ಕೆಲಸಕ್ಕೆ ಸಂಬಂಧಿಸಿದ ಹೊಸ ಪ್ರಯತ್ನಗಳು ಉತ್ತಮ ಫಲ ನೀಡಬಹುದು.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.