2025ರ ಜುಲೈ 9ರಂದು ಗುರು ಗ್ರಹವು ಮಿಥುನ ರಾಶಿಯಲ್ಲಿ ಉದಯವಾಗಿದ್ದು, 12 ವರ್ಷಗಳ ನಂತರ ಧನಲಕ್ಷ್ಮಿ ರಾಜಯೋಗವು ರೂಪುಗೊಂಡಿದೆ. ಇದರಿಂದ ಯಾವ ರಾಶಿಯ ಜನರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಯಾವ ರಾಶಿಯವರು ಈ ರಾಜಯೋಗದಿಂದ ಹೆಚ್ಚು ಲಾಭ ಪಡೆಯುತ್ತಾರೆಂದು ತಿಳಿಯಿರಿ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಗ್ರಹವು 12 ವರ್ಷಗಳ ನಂತರ ಮಿಥುನ ರಾಶಿಯಲ್ಲಿ ಉದಯವಾಗಲಿದೆ. ಇದರಿಂದ ಧನಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಈ ರಾಜಯೋಗವು ವಿಶೇಷ ಮತ್ತು ಶಕ್ತಿಶಾಲಿಯಾಗಿರುವುದು. ಗುರು ಮತ್ತು ಬುಧನ ಸಂಯೋಗದಿಂದ ಈ ಯೋಗವು ರೂಪಗೊಳ್ಳಲಿದ್ದು, ಜೀವನದಲ್ಲಿ ಸಮೃದ್ಧಿ, ಧನ ವೃದ್ಧಿ ಹಾಗೂ ಯಶಸ್ಸನ್ನು ನೀಡಲಿದೆ. 2025ರ ಜುಲೈ 9ರಂದು ಈ ಶುಭಯೋಗದ ರೂಪುಗೊಂಡಿದ್ದು, ಐದು ರಾಶಿಯ ಜನರ ಮೇಲೆ ವಿಶೇಷವಾಗಿ ಹೆಚ್ಚಿನ ಪ್ರಭಾವ ಬೀರಲಿದೆ. ಧನಲಕ್ಷ್ಮಿ ರಾಜಯೋಗದಿಂದ ಯಾವ ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಈ ಧನಲಕ್ಷ್ಮಿ ರಾಜಯೋಗವು ಮೇಷ ರಾಶಿಯ ಜನರಿಗೆ ಹೆಚ್ಚಿನ ಹಣ ಗಳಿಸಲು ಸಾಕಷ್ಟು ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಈ ಅವಧಿಯಲ್ಲಿ ಬಡ್ತಿ ಪಡೆಯುವುದರೊಂದಿಗೆ ಹೊಸ ಜವಾಬ್ದಾರಿಗಳು ಕೂಡ ಸಿಗಲಿವೆ. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ವ್ಯಾಪಾರ ಮಾಡುವ ಜನರಿಗೆ ಈ ಸಮಯ ಲಾಭದಾಯಕವಾಗಲಿದೆ. ನಿಮ್ಮ ಹಳೆಯ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣವಿರಲಿದೆ. ಇದರಿಂದ ನೀವು ಮಾನಸಿಕವಾಗಿ ಸಾಕಷ್ಟು ಸಮೃದ್ಧಿ ಹೊಂದಲಿದ್ದೀರಿ. ಚಿನ್ನ, ಷೇರು ಮಾರುಕಟ್ಟೆ ಮತ್ತು ಟೆಕ್ನಿಕಲ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಧನ ಲಾಭವಾಗಲಿದೆ. ಹೂಡಿಕೆಗೆ ಸಂಬಂಧಿಸಿದಂತೆ ಸರಿಯಾಗಿ ಯೋಚಿಸುವುದು ಉತ್ತಮ. ಹಣ ಗಳಿಸುವ ವಿಚಾರದಲ್ಲಿ ಯಾರ ಮೇಲೂ ನಂಬಿಕೆ ಇಡಬೇಡಿ.
ಕಟಕ ರಾಶಿಯ ಜನರಿಗೆ ಗುರು ಮತ್ತು ಬುಧನ ಸಂಯೋಗದಿಂದ ಹೊಸ ಅವಕಾಶಗಳ ಪ್ರಾಪ್ತಿಯಾಗುವ ಸಂಭವವಿದೆ. ಈ ಅವಧಿಯಲ್ಲಿ ನಿಮಗೆ ಹಠಾತ್ ಪ್ರಗತಿ ದೊರಕುವ ಯೋಗವಿದೆ. ವ್ಯಾಪಾರ ಮಾಡುವ ಜನರಿಗೆ ಹೆಚ್ಚಿನ ಲಾಭ ದೊರಕುವುದು. ನಿಮ್ಮ ಕುಟುಂಬ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಹಳೆಯ ವಿವಾದಗಳಿಂದ ಮುಕ್ತಿ ದೊರೆಯಲಿದೆ. ಅಪೂರ್ಣಗೊಂಡಿರುವ ನಿಮ್ಮ ಕೆಲಸಗಳು ಈ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಶಿಕ್ಷಣ, ಬ್ಯಾಂಕಿಂಗ್ ಸೇವೆ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ ನಿಮಗೆ ವಿಶೇಷ ಲಾಭ ದೊರಕುವ ಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದರಿಂದ ಸಾಕಷ್ಟು ಲಾಭ ದೊರಕಲಿದೆ.
ಧನಲಕ್ಷ್ಮಿ ರಾಜಯೋಗವು ಕನ್ಯಾ ರಾಶಿಯ ಜನರಿಗೆ ವರದಾನವಿದ್ದಂತೆ. ಈ ರಾಜಯೋಗದಿಂದ ನೀವು ಆರ್ಥಿಕ ಲಾಭ ಪಡೆಯುವುದರೊಂದಿಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಪ್ರಗತಿ ಪಡೆಯುವಿರಿ. ಆರೋಗ್ಯ ಮತ್ತು ಅನಾವಶ್ಯಕ ಖರ್ಚುಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ದೊರಕುವುದು. ಯೋಚಿಸದೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳದೆ ಇರುವುದು ಉತ್ತಮ. ನೀವು ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಸರ್ಕಾರಿ ಸೇವೆಯ ಜನರಿಗೆ ಈ ಅವಧಿಯಲ್ಲಿ ನಿಮಗೆ ವಿಶೇಷವಾಗಿ ಲಾಭ ದೊರಕಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಸಮಯದಲ್ಲಿ ಹೆಚ್ಚಿನ ಗಮನ ನೀಡಬೇಕು. ನಿಯಮಿತವಾಗಿ ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಗುರು, ಬುಧ ಸಂಯೋಗವು ತುಲಾ ರಾಶಿಯ ಜನರಿಗೆ ಅತ್ಯಂತ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನೀವು ಸಕಾರಾತ್ಮಕ ಫಲ ಮತ್ತು ಸ್ಥಿರತೆ ಹೊಂದುವಿರಿ. ಈ ಅವಧಿಯಲ್ಲಿ ನಿಮಗೆ ಸಾಲಗಳಿಂದ ಮುಕ್ತಿ ದೊರಕುವ ಯೋಗವಿದೆ. ಈ ಮೊದಲೇ ಹೂಡಿಕೆ ಮಾಡಿದ್ದರೆ ನಿಮಗೆ ಉತ್ತಮ ಲಾಭ ದೊರಕಲಿದೆ. ಹೊಸ ಆದಾಯದ ಮೂಲದಿಂದ ನಿಮ್ಮ ಆದಾಯವು ವೃದ್ಧಿಯಾಗಲಿದೆ. ಈ ಅವಧಿಯಲ್ಲಿ ಖರ್ಚುಗಳನ್ನು ನಿಯಂತ್ರಣದಲ್ಲಿ ಇಡುವುದು ಉತ್ತಮ. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ನಡುವಿನ ಸಂಬಂಧ ಇನ್ನಷ್ಟು ಬಲಗೊಳ್ಳುವುದು. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.
ಮೀನ ರಾಶಿಯ ಅಧಿಪತಿ ಗುರು ಗ್ರಹ. ಹೀಗಾಗಿ ಈ ರಾಜಯೋಗವೂ ಪ್ರಮುಖವಾಗಿ ಈ ರಾಶಿಯ ಜನರಿಗೆ ವಿಶೇಷವಾಗಿ ಹೆಚ್ಚು ಲಾಭದಾಯಕವಾಗಲಿದೆ. ಈ ಸಮಯವು ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿದೆ. ಕೆಲಸ ಮಾಡುವ ಜನರಿಗೆ ಉನ್ನತ ಪದವಿ ಸಿಗಲಿದ್ದು, ಈ ಅವಧಿಯಲ್ಲಿ ನಿಮಗೆ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಅಲ್ಲದೇ ಹೊಸ ಕೆಲಸದ ಅವಕಾಶ ದೊರಕುವ ಯೋಗವಿದೆ. ನೀವು ವ್ಯಾಪಾರ ಮಾಡಬೇಕೆಂದು ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ನಿಮಗೆ ಭರ್ಜರಿ ಲಾಭ ದೊರಕಲಿದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವ ಯೋಗವಿದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯುವ ಸಂಭವ ಇದೆ. ಅದೃಷ್ಟದ ಬೆಂಬಲದಿಂದ ನೀವು ನೀವು ಆರ್ಥಿಕವಾಗಿ ಮತ್ತಷ್ಟು ಸದೃಢರಾಗುತ್ತೀರಿ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)