ಉಚ್ಚ ರಾಶಿಯಲ್ಲಿ ಗುರು ಸಂಚಾರ: ಹಂಸ ಮಹಾಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಹೆಸರು, ಕೀರ್ತಿಯೊಂದಿಗೆ ಅಪಾರ ಧನ-ಸಂಪತ್ತು

Guru Gochar Hansa Mahapurusha Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರಲ್ಲಿ ಗುರು ತನ್ನ ಉತ್ಕೃಷ್ಟ ರಾಶಿಯಾದ ಕಟಕ ರಾಶಿಯಲ್ಲಿ ಪ್ರವೇಶಿಲಿದ್ದಾನೆ. ಇದರಿಂದ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಹಂಸ ಮಹಾಪುರುಷ ರಾಜಯೋಗ ಸೃಷ್ಟಿಯಾಗಲಿದ್ದು ಕೆಲವರ ಜೀವನದಲ್ಲಿ ಸಂಪತ್ತಿನ ಸುರಿಮಳೆಯೇ ಆಗಲಿದೆ.

1 /6

ವೈದಿಕ ಜ್ಯೋತಿಷ್ಯದ ಪ್ರಕಾರ, 2026ರ ಜೂನ್‌ ತಿಂಗಳಿನಲ್ಲಿ ಗುರು ತನ್ನ ಸ್ಥಾನ ಪಲ್ಲಟ ಮಾಡಲಿದ್ದು ಚಂದ್ರನ ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದು ಗುರುವಿನ ಉತ್ಕೃಷ್ಟ ರಾಶಿಯಾಗಿದೆ.

2 /6

ಕಟಕ ರಾಶಿಯಲ್ಲಿ ಗುರು ರಾಶಿ ಪರಿವರ್ತನೆಯೊಂದಿಗೆ ಪಂಚ ಮಹಾಪುರುಷ ಯೋಗಗಳಲ್ಲಿ ಅತ್ಯಂತ ಶಕ್ತಿಶಾಲಿ ಹಂಸ ಮಹಾಪುರುಷ ರಾಜಯೋಗ ನಿರ್ಮಾಣವಾಗಲಿದೆ. 

3 /6

ಹಂಸ ಮಹಾಪುರುಷ ರಾಜಯೋಗದ ಪ್ರಭಾವವು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ,  2026ರಲ್ಲಿ ಗುರುವಿನಿಂದ ನಿರ್ಮಾಣವಾಗಲಿರುವ ಈ ವಿಶೇಷ ಹಂಸ ಮಹಾಪುರುಷ ರಾಜಯೋಗವು ಮೂರು ರಾಶಿಯವರ ಭಾಗ್ಯದ ಬಾಗಿಲುಗಳನ್ನು ತೆಗೆಯಲಿದೆ ಎನ್ನಲಾಗುತ್ತಿದೆ. 

4 /6

ಕನ್ಯಾ ರಾಶಿಯ ಆದಾಯದ ಮನೆಯಲ್ಲಿ ರೂಪುಗೊಳ್ಳಲಿರುವ ಹಂಸ ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಹಣದ ಸುರಿಮಳೆಯನ್ನೇ ಸುರಿಸಲಿದೆ. ಈ ವೇಳೆ ನಿಮ್ಮ ಹಳೆಯ ಹೂಡಿಕೆಗಳಿಂದ ಆದಾಯ ಹೆಚ್ಚಾಗಲಿದ್ದು ಸ್ವಂತ ಮನೆ, ಭೂಮಿ ಖರೀದಿಸುವ ಸುಯೋಗವೂ ಇದೆ. ವೃತ್ತಿ ಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ಬಂಪರ್‌ ಆದಾಯವನ್ನು ಕಾಣುವ ಸುವರ್ಣ ಸಮಯ ಇದಾಗಿದೆ. 

5 /6

ಹಂಸ ಮಹಾಪುರುಷ ರಾಜಯೋಗವು ತುಲಾ ರಾಶಿಯರಿಗೆ ಉದ್ಯೋಗ ರಂಗದಲ್ಲಿ ಭಾಗ್ಯೋದಯದ ಸಮಯ. ಗುರು ದೆಸೆಯಿಂದ ಈ ವೇಳೆ ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ ಇದೆ. ವ್ಯವಹಾರದಲ್ಲಿ ನೀವು ದೀರ್ಘ ಸಮಯದಿಂದ ಕಾಯುತ್ತಿದ್ದ ಯೋಜನೆ ಕೈ ಸೇರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಂಭವವಿದೆ. ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.

6 /6

ಹಂಸ ಮಹಾಪುರುಷ ರಾಜಯೋಗ ಫಲವಾಗಿ ಈ ರಾಶಿಯವರಿಗೆ  ಅದೃಷ್ಟ ಹೆಗಲೇರಲಿದ್ದು, ಗುರುವಿನ ವಿಶೇಷ ಅನುಗ್ರಹದಿಂದ ವೃತ್ತಿಯಲ್ಲಿ ಶತ್ರುಗಳು ನಿಮ್ಮ ಮುಂದೆ ಮಂಡಿಯೂರಲಿದ್ದಾರೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಅಪಾರ ಪ್ರಯೋಜನವನ್ನು ಪಡೆಯಲಿದ್ದೀರಿ. ನಿಮ್ಮ ಪ್ರತಿ ಹೆಜ್ಜೆಗೂ ಯಶಸ್ಸು ದೊರೆಯಲಿದ್ದು ಅಪಾರ ಧನ ಸಂಪತ್ತು ಹೆಚ್ಚಾಗಲಿದೆ. ಸಮಾಜದಲ್ಲಿ ಕೀರ್ತಿಯನ್ನು ಗಳಿಸುವಿರಿ. ಕುಬೇರ ನಿಧಿಯೇ ದೊರೆಯುವ ಭಾರೀ ಅದೃಷ್ಟದ ಸಮಯ ಇದಾಗಿದೆ.  ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.