ಗುರು ಗ್ರಹ ಪ್ರಭಾವ.. ಈ ರಾಶಿಯವರಿಗೆ ಅಖಂಡ ಧನಯೋಗ ಶುರು.. ಹಠಾತ್ ಆರ್ಥಿಕ ಲಾಭ ಸಂಪತ್ತಿನಲ್ಲಿ ಅಪಾರ ಹೆಚ್ಚಳ.. ಇನ್ಮುಂದೆ ಹೋದಲ್ಲೆಲ್ಲಾ ಗೆಲುವಿನದ್ದೇ ರಾಯಭಾರ!
Guru Gochar 2025 : ಜ್ಯೋತಿಷ್ಯದಲ್ಲಿ ಗುರು ಗ್ರಹಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರಸ್ತುತ ಗುರುವು ವೃಷಭ ರಾಶಿಯಲ್ಲಿದ್ದು 2025 ರಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
ವೃಷಭ ರಾಶಿ - ಗುರುವಿನ ಸಂಚಾರದಿಂದ ಅನೇಕ ಬದಲಾವಣೆಗಳನ್ನು ಅನುಭವಿಸುವಿರಿ. ಅಲ್ಲದೆ ಈ ಸಮಯದಲ್ಲಿ ಆರ್ಥಿಕವಾಗಿ ತುಂಬಾ ಮಂಗಳಕರವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮೀನ ರಾಶಿ - ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಮಕ್ಕಳಿಂದಲೂ ಒಳ್ಳೆಯ ಸುದ್ದಿ ಕೇಳುತ್ತಾರೆ. ಜೀವನದ ಎಲ್ಲಾ ಕನಸುಗಳು ನನಸಾಗುತ್ತವೆ. ಕುಟುಂಬದಲ್ಲಿ ಸಂತಸ ನೆಲೆಸುತ್ತಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ.
ಮೇಷ ರಾಶಿ - ಅದೃಷ್ಟದ ಪರ್ವಕಾಲ ಶುರುವಾಗಲಿದೆ. ದೀರ್ಘಾವಧಿಯ ಸಮಸ್ಯೆಗಳು ಸಹ ಪರಿಹರಿಸಲ್ಪಡುತ್ತವೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಸಹ ದೂರವಾಗುತ್ತವೆ. ಪ್ರತಿ ಕೆಲಸದಲ್ಲಿಯೂ ಜಯ ಗಳಿಸುವಿರಿ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.