ಮಹಿಳೆಯ ದೇಹದ ಇದೊಂದು ಭಾಗವನ್ನು ನೋಡಿದ್ರೆನೇ ಗೊತ್ತಾಗುತ್ತೆ ಆಕೆ ಎಂಥವಳು ಅಂತಾ!

Wed, 11 Dec 2024-6:42 pm,

ಆಚಾರ್ಯ ಚಾಣಕ್ಯರ ಉಲ್ಲೇಖಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಗಂಡ-ಹೆಂಡತಿ ಸಂಬಂಧ, ಉತ್ತಮ ಬಾಂಧವ್ಯ, ಹೆಣ್ಣಿನ ವಿಚಾರಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖಗಳನ್ನು ತಮ್ಮ ಚಿಂತನೆಗಳಲ್ಲಿ ವರ್ಣಿಸಿದ್ದಾರೆ.

ಇನ್ನು ಇವರ ನೀತಿಯ ಅನುಸಾರ ಮಹಿಳೆಯರ ಸ್ವಭಾವವನ್ನು ಅವರ ದೇಹದ ಕೆಲವು ಅಂಗಗಳನ್ನು ನೋಡುವ ಮೂಲಕವೇ ತಿಳಿಯಬಹುದಂತೆ. ಅದು ಹೇಗೆ? ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ.  

 

ಚಾಣಕ್ಯ ನೀತಿ ಪ್ರಕಾರ, ಕುತ್ತಿಗೆ ಆಕಾರ ಪುಟ್ಟದಾಗಿದ್ದರೆ, ಅಂತಹ ಮಹಿಳೆಯರು ತಮ್ಮ ನಿರ್ಧಾರಗಳಿಗಿಂತ ಬೇರೆಯವರ ನಿರ್ಧಾರಗಳನ್ನೇ ಹೆಚ್ಚು ಅವಲಂಬಿತವಾಗಿರುತ್ತಾರಂತೆ. ಅದೇ ರೀತಿ ಉದ್ದವಾಗಿ ದುಂಡಾಗಿ ಕುತ್ತಿಗೆ ಹೊಂದಿರುವವರು, ಇತರರಿಗಿಂತ ಕೊಂಚ ಭಿನ್ನವಾಗಿ ಇರುತ್ತಾರಂತೆ. ಕುತ್ತಿಗೆ ಮಧ್ಯಮ ಆಕಾರದಲ್ಲಿದ್ದರೆ, ಅಂತಹ ಮಹಿಳೆಯದು ಬಹಳಷ್ಟು ಮುಂಗೋಪಿಗಳಾಗಿರುತ್ತಾರೆ ಎಂದು ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ.  

 

ಇನ್ನು ಕಣ್ಣುಗಳ ವಿಚಾರಕ್ಕೆ ಬಂದರೆ, ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಕೆಟ್ಟ ಸ್ವಭಾವವನ್ನು ಹೊಂದಿರುತ್ತಾರಂತೆ. ಆದರೆ  ಬೂದು ಬಣ್ಣದ ಕಣ್ಣುಳ್ಳ ಮಹಿಳೆಯರು ತಮ್ಮ ಉತ್ತಮ ಸ್ವಭಾವದಿಂದಲೇ ಎಲ್ಲರ ಮನಗೆಲ್ಲುತ್ತಾರೆ ಎನ್ನಲಾಗಿದೆ.

 

ಇನ್ನು ಯಾವ ಮಹಿಳೆಯರ ಕೈಗಳು ಚಪ್ಪಟೆಯಾಗಿರುತ್ತದೆಯೋ ಅಂತಹ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸಂತೋಷ ಮತ್ತು ಸಂಪತ್ತನ್ನು ಕಳೆದುಕೊಳ್ಳುತ್ತಾರೆ. ಇವರಿಗೆ ಭಾಗ್ಯ ಎಂಬುವುದು ಇರಲ್ಲ. 

ಇವೆಲ್ಲದರ ಹೊರತಾಗಿ ಬಾಯಿಯಿಂದ ಹಲ್ಲುಗಳು ಹೊರ ಕಾಣುವ ರೀತಿ ಇದ್ದರೆ, ಅಂತಹ ಮಹಿಳೆಯರಿಗೆ ಜೀವನದಲ್ಲಿ ಕಷ್ಟ ಇರುತ್ತದೆ. ಅವರಿಗೆ ಪ್ರತೀ ದಿನವೂ ಒಂದಲ್ಲ ಒಂದು ದುಃಖ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ.  

 

ಕಿವಿಯಲ್ಲಿ ಕೂದಲು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳಿರುತ್ತವೆ ಎಂದು ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.   

ಸೂಚನೆ: ಈ ಲೇಖನವು ಕೆಲ ನಂಬಿಕೆಗಳನ್ನು ಆಧರಿಸಿದೆ. ಜೊತೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ. ಇದು ಖಂಡಿತವಾಗಿಯೂ ನಿಜ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link