ಈ ಸ್ಟಾರ್‌ ನಟಿ ಕಮಲ್‌ ಹಾಸನ್‌ರನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ್ದರಂತೆ; ಆದ್ರೆ ಮದುವೆ ಆಗಿದಿರಲು ಕಾರಣವೇನು?

ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಅಪೂರ್ವ ರಾಗಂಗಲ್ (1975) ಚಿತ್ರದಲ್ಲಿ ಕಮಲ್ ಮತ್ತು ಶ್ರೀವಿದ್ಯಾ ನಟಿಸಿದ್ದರು. ಕಮಲ್ ಕೂಡ ಒಮ್ಮೆ ಶ್ರೀವಿದ್ಯಾರೊಂದಿಗಿನ ತಮ್ಮ ಹಿಂದಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

ಕಮಲ್ ಹಾಸನ್ ಪ್ಯಾನ್-ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಚಿತ್ರರಂಗ ಪ್ರವೇಶಿಸಿದಾಗಿನಿಂದಲೂ ಅನೇಕ ನಟಿಯರ ಜೊತೆಗೆ ಈ ಸ್ಟಾರ್‌ ನಟನ ಹೆಸರು ತಳಕು ಹಾಕಿತ್ತು. ಅಸಾಮಾನ್ಯ ನಟನಾದರೂ ಕಮಲ್‌ ವೈಯಕ್ತಿಕ ಜೀವನದ ತುಂಬಾ ಬರೀ ಕಾಂಟ್ರವರ್ಸಿಗಳೇ.. ಒಬ್ಬ ಸ್ಟಾರ್‌ ನಟಿ ಕಮಲ್‌ ಹಾಸನ್‌ರನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆದರೆ ಈ ನಟ ಕೈಕೊಟ್ಟ ಕಾರಣ ಆಕೆ ಸಾಯುವವರೆಗೂ ಏಕಾಂಗಿಯಾಗಿಯೇ ಜೀವನ ನಡೆಸಬೇಕಾಯಿತು. ಹಾಗಾದ್ರೆ ಆ ನಟಿ ಯಾರು ಎಂದು ತಿಳಿಯಿರಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /6

ನಟ ಕಮಲ್‌ ಹಾಸನ್ 1978ರಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವಾಣಿ ಗಣಪತಿಯನ್ನು ವಿವಾಹವಾದರು. ಆದರೆ 10 ವರ್ಷಗಳ ನಂತರ 1988ರಲ್ಲಿ ಇಬ್ಬರು ಬೇರೆಯಾದರು. ನಂತರ ಕಮಲ್ 1988ರಲ್ಲಿ ನಟಿ ಸಾರಿಕಾ ಠಾಕೂರ್‌ರನ್ನು ಮದುವೆಯಾದರು. ಈ ಸಂಬಂಧವು ಸಹ 2004ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಎರಡು ಮದುವೆಗಳ ಹೊರತಾಗಿಯೂ ಈ ನಟನ ಹೆಸರು ಅನೇಕ ನಟಿಯರ ಜೊತೆಗೆ ತಳುಕು ಹಾಕಿಕೊಂಡಿತ್ತು. ಈ ಪೈಕಿ ಕೇಳಿಬರುವ ಪ್ರಮುಖ ಹೆಸರೇ ದಿವಂಗತ ನಟಿ ಶ್ರೀವಿದ್ಯಾ ಅವರದ್ದು. 

2 /6

ನಟಿ ಶ್ರೀವಿದ್ಯಾ ಅವರು ಕಮಲ್‌ ಹಾಸನ್‌ರನ್ನ ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರಂತೆ. ಕಮಲ್‌ ಜೊತೆಗಿನ ಸಂಬಂಧ ಮುರಿದ ನಂತರ ತಾನು ಎಷ್ಟು ನೊಂದುಕೊಂಡಿದ್ದೆ ಅನ್ನೋದರ ಬಗ್ಗೆ ಸ್ವತಃ ನಟಿಯೇ ಒಮ್ಮೆ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀವಿದ್ಯಾ, ಕಮಲ್‌ ಅವರೊಂದಿಗಿನ ಸಂಬಂಧವು ತಮ್ಮನ್ನ ಹೇಗೆ ಮಾನಸಿಕವಾಗಿ ಕುಸಿಯುವಂತೆ ಮಾಡಿತ್ತು ಅನ್ನೋದರ ಬಗ್ಗೆ ತಿಳಿಸಿದ್ದರು. ಕಮಲ್‌ ಮದುವೆಯಾದಾಗ ಆರಂಭದಲ್ಲಿ ನಾನು ಖಾಲಿಯಾಗಿದ್ದೆ. ಇನ್ನೂ ನನ್ನ ಜೀವನ ಮುಗಿಯಿತು ಅಂತಾ ನನಗೆ ಅನಿಸಿತ್ತು. ಕಮಲ್‌ ಪ್ರೇಮಕಥೆ ಅವರ ಕುಟುಂಬ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೂ ತಿಳಿದಿತ್ತು. ನಾನು ಕಮಲ್‌ಗಿಂತ ಆರು ತಿಂಗಳು ದೊಡ್ಡವಳಾಗಿದ್ದೆ. ಅವರ ಕುಟುಂಬಸ್ಥರು ಮದುವೆಯಾಗಬೇಕೆಂದು ಬಯಸಿದ್ದರು ಅಂತಾ ಶ್ರೀವಿದ್ಯಾ ಹೇಳಿಕೊಂಡಿದ್ದರು.

3 /6

ಕಮಲ್‌ಗೆ ಸ್ವಲ್ಪ ಕಾಯಿರಿ ಅಂತಾ ಶ್ರೀವಿದ್ಯಾ ಹಾಗೂ ಮನೆಯವರು ಹೇಳಿದ್ದರು. ಆದರೆ ಅವರು ಕಾಯಲು ಸಿದ್ಧರಿರಲಿಲ್ಲ. ಆದರೆ ತನ್ನ ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ಹೋಗಲು ಶ್ರೀವಿದ್ಯಾ ಸಿದ್ಧರಿರಲಿಲ್ಲ. ʼನಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡಲು ನಾನು ಬಯಸಲಿಲ್ಲ. ʼಇದು ನಿನ್ನ ಅಂತಿಮ ನಿರ್ಧಾರವೇʼ ಎಂದು ಕಮಲ್ ಕೇಳಿದ್ದರು. ನಂತರ ಕಮಲ್‌ ಬಹಳ ಸಮಯದವರೆಗೆ ನನಗೆ ಕಾಲ್‌ ಮಾಡಲಿಲ್ಲ. ನಂತರ ಒಂದಿನ ಅವರು ನಮ್ಮ ಮನೆಗೆ ಬಂದಿದ್ದರು. ನಮ್ಮನ್ನ ನೋಡಿ ನನ್ನ ತಾಯಿಯ ಹತ್ತಿರ ಬಂದು ಮದುವೆ ವಿಷಯದ ಬಗ್ಗೆ ವಿಚಾರಿಸಿದ್ದರು ಎಂದು ನಟಿ ಶ್ರೀವಿದ್ಯಾ ತಿಳಿಸಿದ್ದಾರೆ. 

4 /6

ಈ ವೇಳೆ ನನ್ನ ತಾಯಿ, ʼನೀವಿಬ್ಬರೂ 4-5 ವರ್ಷಗಳ ಕಾಲ ಏಕೆ ಕಾಯಬಾರದು ನೀವು ಮಹಾನ್ ಕಲಾವಿದರಾಗಬೇಕು. ನೀವು ಈ ಉದ್ಯಮದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಲಿದ್ದೀರಿ. ಶ್ರೀವಿದ್ಯಾ ಸಹ ಪ್ರತಿಭಾನ್ವಿತರು. ಇಬ್ಬರೂ ದೊಡ್ಡ ನಟ-ನಟಿಯಾಗುವ ಸಾಮರ್ಥ್ಯ ಹೊಂದಿದ್ದೀರಿ. ನೀವು ಅನೇಕ ಉತ್ತಮ ವ್ಯಕ್ತಿಗಳನ್ನ ಭೇಟಿಯಾಗಬಹುದು. ಆ ಸಮಯದಲ್ಲಿ ನೀವು ನಿಮ್ಮ ನಿರ್ಧಾರದ ಬಗ್ಗೆ ವಿಷಾದಿಸಬಾರದು. ನಿಮಗಿಬ್ಬರಿಗೂ ಈ ಸಣ್ಣ ವಯಸ್ಸು, ಏಕೆ ಆತುರಪಡುತ್ತೀರಿ? ಮದುವೆಯಾಗಲು ಇದು ತುಂಬಾ ಚಿಕ್ಕ ವಯಸ್ಸು ಅಂತಾ ನಾನು ಭಾವಿಸುತ್ತೇನೆʼ ಎಂದು ಶ್ರೀವಿದ್ಯಾ ತಾಯಿ ಹೇಳಿದ್ದರು. ನನ್ನ ಅಮ್ಮ ಆಗ ಸರಿಯಾಗಿಯೇ ಹೇಳಿದ್ದರು ಅಂತಾ ಶ್ರೀವಿದ್ಯಾ ತಿಳಿಸಿದ್ದರು.

5 /6

ನನ್ನ ಮತ್ತು ಅಮ್ಮನ ನಿರ್ಧಾರವು ಕಮಲ್‌ಗೆ ಸರಿ ಬಂದಿರಲಿಲ್ಲ. ನನ್ನಮ್ಮನ ಬುದ್ಧಿಮಾತು ಕೇಳಿ ಅವರು ಕೋಪಗೊಂಡು ಮನೆಯಿಂದ ಹೊರಟುಹೋದರು. ಅದೇ ಅವರ ಬ್ರೇಕಪ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕಮಲ್ ವಾಣಿ ಗಣಪತಿಯನ್ನು ವಿವಾಹವಾದರು. ಇದರಿಂದ ನನಗೆ ತುಂಬಾ ನೋವಾಯಿತು. ಒಬ್ಬ ಮಹಿಳೆಯಾಗಿ ನಾನು ಸೋತಂತೆ ಭಾಸವಾಯಿತು. ಅವಳಲ್ಲಿ ನನ್ನಲ್ಲಿಲ್ಲದಿರುವುದು ಏನಿದೆ? ಅಂತಾ ನಾನು ಯೋಚಿಸಿದ್ದೆ. ನಂತರ ನಾವು ಎಂದಿಗೂ ಆಪ್ತರಾಗಲಿಲ್ಲ. ಆದರೆ ನಾವು ಯಾವಾಗಲೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡಿದ್ದೇವೆಂದು ಶ್ರೀವಿದ್ಯಾ ಹೇಳಿದ್ದರು.

6 /6

ಕಮಲ್ ಕೂಡ ಒಮ್ಮೆ ಶ್ರೀವಿದ್ಯಾರೊಂದಿಗಿನ ತಮ್ಮ ಹಿಂದಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಕೆ.ಬಾಲಚಂದರ್ ಅವರ ಅಪೂರ್ವ ರಾಗಂಗಲ್ (1975) ಚಿತ್ರದಲ್ಲಿ ಕಮಲ್ ಮತ್ತು ಶ್ರೀವಿದ್ಯಾ ನಟಿಸಿದ್ದರು.‌ ಈ ಸಿನಿಮಾದ ಮೂಲಕವೇ ಸೂಪರ್‌ಸ್ಟಾರ್‌ ರಜನಿಕಾಂತ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ನಟಿಸುವಾಗ ನಟಿಗೆ ಕೇವಲ 19 ವರ್ಷವಾಗಿತ್ತು. ʼನಾವು ಸಿನಿಮಾದಲ್ಲಿ ಪ್ರೀತಿಸಿದಂತೆ ನಿಜ ಜೀವನದಲ್ಲಿಯೂ ಪ್ರೀತಿಸಲಿಲ್ಲʼವೆಂದು ಶ್ರೀವಿದ್ಯಾ ಬೇಸರ ತೋಡಿಕೊಂಡಿದ್ದರು. ಕ್ಯಾನ್ಸರ್ ಜೊತೆಗಿನ ದೀರ್ಘ ಹೋರಾಟದ ನಂತರ ಶ್ರೀವಿದ್ಯಾ 2006ರಲ್ಲಿ ನಿಧನರಾದರು.