ನಟ ಕಮಲ್‌ ಹಾಸನ್‌ ಮೊದಲ ಪತ್ನಿ ಇವರೇ ನೋಡಿ... ಡಿವೋರ್ಸ್‌ ಆಗಿದ್ದೇಕೆ, ವಿಚ್ಛೇದನದ ಬಳಿಕ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತೇ!

kamal haasan first wife: ಕಮಲ್‌ ಹಾಸನ್‌ ಮೊದಲ ಪತ್ನಿ ಯಾರು ಮತ್ತು ಯಾಕೆ ವಿಚ್ಛೇದನ ಏಕೆ ನೀಡಿದರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ... 

kamal haasan first wife vani ganapathy: ಕಮಲ್‌ ಹಾಸನ್‌ ಎರಡು ಮದುವೆಗಳ ಬಗ್ಗೆ ಮಾತನಾಡಿದ ಬೆನ್ನಲ್ಲೇ ಅವರ ಮೊದಲ ಪತ್ನಿ ಯಾರೆಂದು ತಿಳಿದುಕೊಳ್ಳಲು ಅನೇಕರು  ಕುತೂಹಲರಾಗಿದ್ದಾರೆ. 
 

1 /10

ಕಮಲ್ ಹಾಸಲ್ ಅವರಿಗೆ ಇತ್ತೀಚೆಗೆ ಎರಡು ಮದುವೆಗಳ ಬಗ್ಗೆ ಮಾತನಾಡಿದ್ದಾರೆ. ಕಮಲ್ ಹಾಸಲ್ ಹಳೆಯ ಘಟನೆ ನೆನಪಿಸಿಕೊಂಡಿದ್ದು, ಎಂಪಿ ಜಾನ್ ಬ್ರಿಟಾಸ್ ಒಮ್ಮೆ ಸಂದರ್ಶನದಲ್ಲಿ ಬ್ರಾಹ್ಮಣ ಕುಟುಂಬದಿಂದ ಬಂದ ನೀವು ಹೇಗೆ 2 ಮದುವೆ ಮಾಡಿಕೊಂಡಿದ್ದೀರಾ ಎಂದು ಕೇಳಿದರು.

2 /10

ಬ್ರಾಹ್ಮಣ ಕುಟುಂಬದಿಂದ ಬರುವುದಕ್ಕೂ 2 ಮದುವೆಗೂ ಏನು ಸಂಬಂಧ ಎಂದೆ. ಅದಕ್ಕೆ ಅವರು, ನೀವು ಪೂಜಿಸುವುದು ಏಕಪತ್ನಿವ್ರತಸ್ಥ ರಾಮನನ್ನು ಅಲ್ಲವೇ? ಹಾಗಾದ್ಮೇಲೆ ಅವನನ್ನು ಅನಸರಿಸಬೇಕಲ್ವೇ ಎಂದು ಮರುಪ್ರಶ್ನೆ ಹಾಕಿದ್ದರು. 

3 /10

ಅದಕ್ಕೆ ನಾನು ರಾಮನನ್ನು ಅನುಸರಿಸುವುದಿಲ್ಲ, ಬದಲಿಗೆ ಅವರಪ್ಪ ದಶರಥನನ್ನು ಅನುಸರಿಸುತ್ತೇನೆ ಎಂದು ಹೇಳಿದ್ದೆ ಅಂತ ಕಮಲ್‌ ಹಾಸನ್‌ ಹೇಳಿದ್ದಾರೆ. ಆ ವೀಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

4 /10

ಕಮಲ್ ಹಾಸನ್ ಮೊದಲ ಪತ್ನಿ ವಾಣಿ ಗಣಪತಿ. ಕಮಲ್ ಹಾಸನ್ 1978 ರಲ್ಲಿ ಪ್ರಸಿದ್ಧ ನರ್ತಕಿ ವಾಣಿ ಗಣಪತಿ ಅವರನ್ನು ವಿವಾಹವಾದರು. ಆದರೆ 10 ವರ್ಷಗಳ ನಂತರ ಇಬ್ಬರ ನಡುವಿನ ಮನಸ್ತಾಪದಿಂದ 1988 ರಲ್ಲಿ ವಿಚ್ಛೇದನ ಪಡೆದರು.

5 /10

ಕಮಲ್ ಹಾಸನ್ ವಾಣಿ ಗಣಪತಿ ವಿಚ್ಛೇದನದ ಕೆಲವು ವರ್ಷಗಳ ನಂತರ ಅಂದರೆ 2015 ರಲ್ಲಿ ಸಂದರ್ಶನವೊಂದರಲ್ಲಿ, ತಮ್ಮ ಮಾಜಿ ಪತ್ನಿಯಿಂದಾಗಿ ದಿವಾಳಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. 

6 /10

ಕಮಲ್‌ ಹಾಸನ್‌ ಮೊದಲ ಪತ್ನಿಗೆ ಕೋಟಿ ಕೋಟಿ ಜೀವನಾಂಶ ನೀಡಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ವಾಣಿ ಗಣಪತಿ ಅವರೇ ಸ್ಪಷ್ಟನೆ ಕೊಟ್ಟಿದ್ದರು.

7 /10

ಕಮಲ್ ಹಾಸನ್ ಅವರ ಹೇಳಿಕೆಯ ನಂತರ ನೀಡಿದ ಸಂದರ್ಶನದಲ್ಲಿ ವಾಣಿ ವಿಚ್ಛೇದನದ ಬಗ್ಗೆ ಮೌನ ಮುರಿದರು. ನಮ್ಮ ವಿಚ್ಛೇದನವಾಗಿ ಹಲವು ವರ್ಷಗಳಾಗಿವೆ. ಅದು ತುಂಬಾ ವೈಯಕ್ತಿಕ ವಿಷಯವಾದ್ದರಿಂದ ನಾನು ಯಾರ ಮೇಲೂ ಕೆಸರು ಎರಚಬಾರದು ಎಂದಿದ್ದರು.

8 /10

ನಾವು ಒಟ್ಟಿಗೆ ವಾಸಿಸುತ್ತಿದ್ದ ಫ್ಲಾಟ್‌ನಲ್ಲಿ ಬಳಸಿದ ಉಪಕರಣಗಳನ್ನು ಸಹ ನನಗೆ ನೀಡಿಲ್ಲ. ಇಂತಹ ವ್ಯಕ್ತಿಯಿಂದ ನಾನು ಏನನ್ನು ನಿರೀಕ್ಷಿಸಲು ಸಾಧ್ಯ? ಎಂದಿದ್ದರು.   

9 /10

ವಾಣಿಯಿಂದ ವಿಚ್ಛೇದನ ಪಡೆದ ನಂತರ, ಕಮಲ್ ಹಾಸನ್ ನಟಿ ಸಾರಿಕಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರ ಈ ಮದುವೆಯೂ ಮುರಿದು ಬಿದ್ದಿದೆ.

10 /10

ಕಮಲ್‌ ಹಾಸನ್‌ ಅವರ ಇಬ್ಬರು ಪುತ್ರಿಯರು ಒಬ್ಬರು ಶ್ರುತಿ ಹಾಸನ್‌ ಮತ್ತು ಅಕ್ಷರಾ ಹಾಸನ್‌. ಕಮಲ್‌ ಹಾಸನ್‌ ತಮ್ಮ ಇಬ್ಬರೂ ಪತ್ನಿಯರಿಂದಲೂ ಡಿವೋರ್ಸ್‌ ಪಡೆದು ದೂರವಾಗಿದ್ದಾರೆ.