kannada actor Ugramm Manju Gets Engaged : ಬಿಗ್‌ಬಾಸ್ ಖ್ಯಾತಿಯ ಮಂಜುನಾಥ, ಕನ್ನಡಿಗರ ಪ್ರೀತಿಯ "ಉಗ್ರಂ ಮಂಜು" ಕೊನೆಗೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
1/5kannada actor Ugramm Manju Gets Engaged : ಬಿಗ್‌ಬಾಸ್ ಖ್ಯಾತಿಯ ಮಂಜುನಾಥ, ಕನ್ನಡಿಗರ ಪ್ರೀತಿಯ "ಉಗ್ರಂ ಮಂಜು" ಕೊನೆಗೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
2/5ಸಂದ್ಯಾ ಎಂಬ ಹೆಸರಿನ ಹುಡುಗಿಯನ್ನು ಒರಿಸಲಿರುವ ಇವರು, ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಗ್ರಂ ಮಂಜು ಸ್ಯಾಂಡಲ್‌ವುಡ್‌ನ ಫೇಮಸ್ ವಿಲನ್ ಆಗಿದ್ದು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
3/5ತಮ್ಮ ಖಡಕ್ ನೋಟ ಮತ್ತು ಮಾತಿನಿಂದಲೇ ಗಮನ ಸೆಳೆಯುವ ಇವರು, ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ದೂರದರ್ಶನ, ಬುದ್ಧಿವಂತ 2, ರಾನಿ, ಮ್ಯಾಕ್ಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
4/5ಸಿನಿಮಾಗಳ ಜೊತೆಗೆ ಉಗ್ರಂ ಮಂಜು ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 15ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅವರ ವಿಶಿಷ್ಟ ಆಟದ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದ ಅವರು 6 ಫೈನಲಿಸ್ಟ್‌ಗಳ ಪೈಕಿ ಒಬ್ಬರಾಗಿ ಫಿನಾಲೆ ತಲುಪಿದ್ದ ಮಂಜು, 5ನೇ ಸ್ಥಾನ ಪಡೆದುಕೊಂಡರು.
5/5ಇನ್ನು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ಎಂಗೇಜ್‌ಮೆಂಟ್ ಪೋಟೋಗಳನ್ನು ಹಂಚಿಕೊಂಡಿರುವ ಅವರು "ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಶುಬಾಷಯಗಳ ಸುರಿಮಳೆ ಸುರಿಸಿದ್ದಾರೆ.