ಸ್ಯಾಂಡಲ್‌ವುಡ್ ನಟಿ ಎಚ್.ಎಸ್.ಕೀರ್ತನಾ ಅವರು ಕರ್ಪೂರದ ಗೊಂಬೆ, ಗಂಗಾ-ಯಮುನಾ, ಹಬ್ಬ, ದೂರೆ, ಸಿಂಹಾದ್ರಿ, ಮುದ್ದಿನ ಆಳಿಯ, ಉಪೇಂದ್ರ, ಓ ಮಲ್ಲಿಗೆ, ಸರ್ಕಲ್ ಇನ್ಸ್‌ಪೆಕ್ಟರ್ ಮುಂದಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು.
HS Keerthana IAS: ನೀವು ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಆಳಿಯಾ, ಉಪೇಂದ್ರ, ಓ ಮಲ್ಲಿಗೆ ಮುಂತಾದ ಸಿನಿಮಾಗಳನ್ನ ನೋಡಿಯೇ ಇರ್ತಿರಿ. ಪುಟ್ಟ ಮಗುವಿನ ಪಾತ್ರದಲ್ಲಿ ಈ ಚಿತ್ರಗಳಲ್ಲಿ ಕಾಣಿಸಿಕೊಂಡ ಬಾಲ್ಯನಟಿ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ನಟರಾದ ಶಿವರಾಜಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಮತ್ತು ಶಶಿಕುಮಾರ್ ಜೊತೆಗೆ ನಟಿಸಿ ಸೈ ಎನ್ನಿಸಿಕೊಂಡಿದ್ದ ಈ ಮುದ್ದಾದ ಬಾಲ್ಯನಟಿ ಸಿನಿಮಾಗೆ ಗುಡ್ ಬೈ ಹೇಳಿ ತನ್ನ 6ನೇ ಪ್ರಯತ್ನದಲ್ಲಿ 167ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್‌ಅಧಿಕಾರಿಯಾದರು. ಅವರು ಯಾರು ಅಂತಿರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ್ಯನಟಿಯಾಗಿ ನಟಿಸಿ ಸೈ ಎನಿಸಿಕೊಂಡ ಎಚ್.ಎಸ್.ಕೀರ್ತನಾ ಅಪಾರ ಜನಮನ್ನಣೆಯ ಜೊತೆಗೆ ಪ್ರೀತಿ-ಅಭಿಮಾನ ಗಳಿಸಿದ್ದರು. ಚಿತ್ರರಂಗವನ್ನ ತೊರೆದ ಅವರು ಕಷ್ಟಪಟ್ಟು ಓದಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ. ಕೀರ್ತನಾ ತಮ್ಮ ನಾಲ್ಕನೇ ವಯಸ್ಸಿನಲ್ಲಿ ಬಾಲ ನಟಿಯಾಗಿ ವೃತ್ತಿಜೀವನ ಆರಂಭಿಸಿದರು. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದರು.
ಕರ್ಪೂರದ ಗೊಂಬೆ, ಗಂಗಾ-ಯಮುನಾ, ಹಬ್ಬ, ದೂರೆ, ಸಿಂಹಾದ್ರಿ, ಮುದ್ದಿನ ಆಳಿಯ, ಉಪೇಂದ್ರ, ಓ ಮಲ್ಲಿಗೆ, ಸರ್ಕಲ್ ಇನ್ಸ್‌ಪೆಕ್ಟರ್ ಮುಂದಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಒಟ್ಟು 32 ಸಿನಿಮಾಗಳು ಮತ್ತು 48 ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದರು. 15ನೇ ವಯಸ್ಸಿನವರೆಗೆ ಸಿನಿಮಾಗಳಲ್ಲಿ ನಟಿಸಿದ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದರು. ಒಂದು ವೇಳೆ ಚಿತ್ರರಂಗದಲ್ಲಿಯೇ ಮುಂದುವರೆದಿದ್ದರೆ ಖ್ಯಾತ ನಟಿಯಾಗಿ ಹೆಸರು ಮಾಡುತ್ತಿದ್ದರು. ಆದರೆ ಅವರು ಆರಿಸಿಕೊಂಡ ಹಾದಿಯೇ ಬೇರೆಯಾಗಿತ್ತು.
ಚಿತ್ರರಂಗವನ್ನ ತೊರೆದ ಕೀರ್ತನಾ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದರು. 2011ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಎರಡು ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಆದರೆ ಅವರ ನಿಜವಾದ ಗುರಿ ಐಎಎಸ್ ಅಧಿಕಾರಿಯಾಗುವುದಾಗಿತ್ತು. ಹೀಗಾಗಿ ಕೀರ್ತನಾ 2013ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆ ಬರೆದರು. ಮೊದಲ ಐದು ಪ್ರಯತ್ನಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಛಲಬಿಡದ ಅವರು 2020ರಲ್ಲಿ ತಮ್ಮ ಆರನೇ ಪ್ರಯತ್ನದಲ್ಲಿ 167ನೇ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದರು.
UPSCಯಲ್ಲಿ ಯಶಸ್ವಿಯಾದ ನಂತರ ಕೀರ್ತನಾ ಮಂಡ್ಯ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಅವರು ಚಿತ್ರರಂಗದ ಗ್ಲಾಮರ್‌ನಿಂದ ಸಂಪೂರ್ಣವಾಗಿ ದೂರವಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಹಾನುಭೂತಿ ಹೊಂದಿದ್ದ ಅವರು ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಗಳಿಸಿದರು. ಅವರು ಕರ್ನಾಟಕದಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಕೀರ್ತನಾ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜನಪ್ರಿಯತೆ ಗಳಿಸಿದ್ದರು. ಕೀರ್ತನಾ ದೊಡ್ಡ ಅಧಿಕಾರಿಯಾಗಬೇಕೆಂಬುದು ಅವರ ತಂದೆ ಶ್ರೀನಿವಾಸ್ ಎಚ್‌ಟಿ ಅವರ ಕನಸಾಗಿತ್ತು. ಹೀಗಾಗಿ ತಮ್ಮ ತಂದೆಯ ಕನಸು ನನಸು ಮಾಡಲು ಕೀರ್ತನಾ ಚಿತ್ರರಂಗವನ್ನು ತೊರೆದು ಅಧ್ಯಯನದತ್ತ ಗಮನಹರಿಸಿದರು.
ಕೀರ್ತನಾ ದಿಲೀಪ್ ಎಂಬುವರನ್ನ ವಿವಾಹವಾದರು. ಸಂದರ್ಶನವೊಂದರಲ್ಲಿ ತಮ್ಮ ಪತಿ ನೀಡಿದ ಬೆಂಬಲದ ಬಗ್ಗೆ ಸ್ವತಃ ಕೀರ್ತನಾ ಅವರೇ ಹೇಳಿಕೊಂಡಿದ್ದಾರೆ. ಯುಪಿಎಸ್‌ಸಿ ಕನಸು ನನಸಾಗಲಿ ಪತಿ ನನಗೆ ಬೆಂಬಲ ನೀಡಿದರು ಅಂತಾ ಹೇಳಿಕೊಂಡಿದ್ದಾರೆ. ಅಂದಹಾಗೆ ಕೀರ್ತನಾ ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 984 ಅಂಕಗಳನ್ನು ಗಳಿಸಿದ್ದರು (ಲಿಖಿತ ಪರೀಕ್ಷೆಯಲ್ಲಿ 794, ಸಂದರ್ಶನದಲ್ಲಿ 190). ಒಬಿಸಿ ವಿಭಾಗದಲ್ಲಿ ಅವರು ಅಗ್ರ ರ‍್ಯಾಂಕ್ ಪಡೆದಿದ್ದರು.