Namratha gowda love story: "ಕಾಲೇಜಿಗೆ ಹೋಗಬೇಕಾದರೆ ಲವ್ ಮಾಡಬೇಕಾಗಿ ಬಂತು. ನಾನೇ ಮುಂದೆ ಹೋಗಿ ಮಾಡಿದ ಲವ್ ಅಲ್ಲ ಅದು. ತುಂಬಾ ಕಾಡಿಸಿ ಬೇಡಿ ಪಡೆದ ಲವ್ ಅದುʼ ಎಂದು ನಟಿ ನಮ್ರತಾ ಗೌಡ ಹೇಳಿದ್ದಾರೆ.
Namratha Gowda: 'ಬಿಗ್ ಬಾಸ್' ಖ್ಯಾತಿಯ ನಮ್ರತಾ ಗೌಡ ಆರಂಭದಲ್ಲಿ ಬಾಲ ನಟಿಯಾಗಿ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಮಿಂಚಿದ್ದರು. ʼನಾಗಿಣಿʼ ಧಾರವಾಹಿ ಮೂಲಕ ಅವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. 'ಬಿಗ್ ಬಾಸ್'ಗೆ ಹೋಗಿಬಂದ ನಂತರ ಹೆಚ್ಚೆಚ್ಚು ಸಿನಿಮಾ ಅವಕಾಶಗಳು ಸಿಗುತ್ತಿವೆ. ಆದರೆ ಬಂದ ಎಲ್ಲಾ ಅವಕಾಶಗಳನ್ನ ಒಪ್ಪಿಕೊಳ್ಳದ ನಮ್ರತಾ ತಮಗಿಷ್ಟವಾದ ಕಥೆಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿರುವ ಈ ನಟಿ ಹಲವು ಬಾರಿ ಟ್ರೋಲ್ ಆಗಿದ್ದುಂಟು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಮ್ರತಾ ತಾವಾಯಿತು ತಮ್ಮ ಕೆಲಸವಾಯಿತು ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಬಗ್ಗೆ ಆದ ಟ್ರೋಲ್‌ಗಳು, ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಹೌದು, ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ನಮ್ರತಾ ಹೇಳಿದ್ದಾರೆ. "ನಾನು ಆಗ ಆರ್ಕಿಟೆಕ್ಚರ್ ಐದು ವರ್ಷದ ಕೋರ್ಸ್ ಮಾಡ್ತಾ ಇದ್ದೆ. ಇದು ಸುಲಭದ ವಿಷಯವಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟೆ. ಅದೇ ಸಮಯದಲ್ಲಿ ಶೂಟಿಂಗ್‌ನಲ್ಲಿಯೂ ಭಾಗವಹಿಸುತ್ತಿದ್ದೆʼ ಎಂದು ಹೇಳಿದ್ದಾರೆ.
ಕಾಲೇಜ್ ಲೈಫ್‌ನಲ್ಲಿ ಲವ್ ಏನಾದರೂ ಇತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ನಮ್ರತಾ, ʼಇದು ನನ್ನ ಅತ್ಯಂತ ಖಾಸಗಿ ಪ್ರಶ್ನೆ. ಲವ್ ಬಗ್ಗೆ ಎಲ್ಲಾ ಮಾತನಾಡೋದು ನನಗೆ ಅನ್‌ಕಂಫರ್ಟೆಬಲ್ ಆಗುತ್ತದೆ. ನಾನು ಏನೂ ಮಾಡಿದರೂ ಅಪ್ಪ-ಅಮ್ಮನಿಗೆ ಗೊತ್ತೇ ಇರುತ್ತದೆ. ನಾನು ಓಪನ್ ಆಗಿ ಎಲ್ಲಾ ಹೇಳ್ತಿನಿ. ನನ್ನ ಜೀವನದಲ್ಲಿಯೂ ಒಂದು ಲವ್ ಆಗಿತ್ತು. ಅದೇ ಫಸ್ಟ್ ಅಂಡ್ ಲಾಸ್ಟ್. ಆಗ SSLC ಮುಗಿದಿತ್ತು. ಪಿಯು ಕಾಲೇಜಿಗೆ ಪ್ರವೇಶಿಸಿದ ಸಮಯ. ನಾನು ಹುಡುಗರ ರೀತಿಯೇ ಬೆಳೆದವಳು. ಹೆಚ್ಚಾಗಿ ನನಗೆ ಹುಡುಗರೇ ಫ್ರೆಂಡ್ಸ್ ಇದ್ರು. ಅಲ್ಲಿಯವರೆಗೂ ನನಗೆ ಯಾರ ಮೇಲೆ ಸಹ ಆ ಫೀಲಿಂಗ್ ಬಂದಿರಲಿಲ್ಲ" ಎಂದು ಹೇಳಿದ್ದಾರೆ.
"ಕಾಲೇಜಿಗೆ ಹೋಗಬೇಕಾದರೆ ಲವ್ ಮಾಡಬೇಕಾಗಿ ಬಂತು. ನಾನೇ ಮುಂದೆ ಹೋಗಿ ಮಾಡಿದ ಲವ್ ಅಲ್ಲ ಅದು. ತುಂಬಾ ಕಾಡಿಸಿ ಬೇಡಿ ಪಡೆದ ಲವ್ ಅದು. ನಾನು ಯಾರನ್ನೂ ಸಹ ಅಪ್ರೋಚ್ ಮಾಡಲು ಹೋಗಿಲ್ಲ. ಅವನೇ ನನ್ನನ್ನ ಕಾಡಿಸ್ತಾ ಇದ್ದ. ಅದು ನನಗೆ ಇಷ್ಟ ಆಗ್ತಾ ಇರಲಿಲ್ಲ. ಇವನು ಯಾರು? ನನ್ನ ಹಿಂದೆ ಬಿದ್ದಿದ್ದಾನೆ ಅಂತಾ ಹೇಟ್ ಮಾಡ್ತಾ ಇದ್ದೆ. ಸುಮಾರು ಮೂರು ತಿಂಗಳ ಕಳೆದ ಬಳಿಕ ನನಗೂ ಫೀಲಿಂಗ್ ಬಂತು. ನಾನು ಸಹ ಯಸ್ ಅಂದೆ. ಈ ನನ್ನ ಲವ್ ಸ್ಟೋರಿ ಆಗ ಕಾಲೇಜಿನಲ್ಲಿ ತುಂಬಾ ಫೇಮಸ್ ಆಗಿತ್ತುʼ ಅಂತಾ ನಮ್ರತಾ ಹೇಳಿದ್ದಾರೆ.
ʼನನ್ನ ಲವ್ ವಿಷಯವನ್ನು ತಂದೆ-ತಾಯಿಗೂ ತಿಳಿಸಿದ್ದೆ. ಕಾಲೇಜಿಗೆ ಹೋಗುವಾಗ ಒಬ್ಬ ಕಾಡಿಸ್ತಾನೆ, ಮೆಸಜ್ ಮಾಡ್ತಾನೆ ಅಂತಾ ಹೇಳಿದ್ದೆ. ಅದು ನನ್ನ ಜೀವನದಲ್ಲಿ ಫಸ್ಟ್ ಅಂಡ್ ಲಾಸ್ಟ್ ರಿಲೇಷನ್‌ಶಿಪ್. ಆಗ ನನಗೆ ಕಮಿಟ್‌ಮೆಂಟ್, ರಿಲೇಷನ್‌ಶಿಪ್ ಅಂದರೆ ಏನೂ ಅಂತಾನೇ ಗೊತ್ತಿರಲಿಲ್ಲ. ಆ ವ್ಯಕ್ತಿಗೂ ಗೊತ್ತಿತ್ತೋ ಗೊತ್ತಿಲ್ಲ. ಯಾಕೆಂದರೆ ನಾವು ಆಗ ತುಂಬಾ ಯಂಗ್ ಆಗಿದ್ದೇವು. ನಮಗೆ ಆಗ 15-16ರ ಪ್ರಾಯ. ಪಿಯುಸಿ ಮುಗಿದ ಬಳಿಕ ನಾನು ನಟನೆಯತ್ತ ಗಮನ ನೀಡಿದೆ. ಆ ವ್ಯಕ್ತಿಗೆ ಗಮನ ಕೊಡಲು ನನಗೆ ಆಗುತ್ತಿರಲಿಲ್ಲ. ಅವನೂ ಡೈವರ್ಟ್ ಆಗ್ತಾ ಇದ್ದ. ನನಗೂ ಕಿರಿಕಿರಿ ಆಗ್ತಾ ಇತ್ತುʼ ಎಂದು ನಮ್ರತಾ ಗೌಡ ಹೇಳಿಕೊಂಡಿದ್ದಾರೆ.
ʼಅದು ತುಂಬಾ ಟಾಕ್ಸಿಕ್ ರಿಲೇಷನ್‌ಶಿಪ್. ನನಗೆ ಆ ಏಜ್‌ನಲ್ಲಿ ಹೇಗೆ ಹ್ಯಾಂಡಲ್ ಮಾಡಬೇಕು, ಅವನಿಗೂ ಹೇಗೆ ಹ್ಯಾಂಡಲ್ ಮಾಡಬೇಕು ಅಂತಾ ಗೊತ್ತಾಗುತ್ತಲೇ ಇರಲಿಲ್ಲ. ನನಗೆ ಭಾವನಾತ್ಮಕವಾಗಿ ನೋವು ತುಂಬಾ ಆಗ್ತಾ ಇತ್ತು. ಮೆಂಟಲಿ ನಾನು ಡ್ರೈನ್ ಆಗ್ತಾ ಇದ್ದೆ. ಹೀಗಾಗಿ ನಾನು ತುಂಬಾ ಅಳ್ತಾ ಇದ್ದೆ. ಇದರಿಂದ ಅವನೂ ಸಹ ತುಂಬಾ ಸಫರ್ ಆಗ್ತಾ ಇದ್ದ. ನಾನೂ ಸಫರ್ ಆಗ್ತಿದ್ದೆ. ಕೊನೆಗೆ ಆ ಲವ್‌ನಿಂದ ಹೊರಬಂದೆ" ಎಂದು ನಮತ್ರಾ ಹೇಳಿದ್ದಾರೆ.
"ಆತ ನಂತರ ಸಿಗಲಿಲ್ಲ. ಆರಂಭದಲ್ಲಿ ನಾನು ಹುಚ್ಚಿಯಂತೆ ಪ್ರೀತಿಸ್ತಾ ಇದ್ದೆ. ನನಗೆ ಬೇಡ ಅನಿಸ್ತು, ಅಲ್ಲಿಗೆ ಆ ಪ್ರೀತಿ ಮುಗಿಯಿತು. ನಾನು ಇದೇ ಫಸ್ಟ್ ಟೈಮ್ ಈ ಕಥೆ ಹೇಳ್ತಾ ಇರೋದು. ಇದನ್ನ ಕೇಳಿ ನನ್ನ ಅಮ್ಮ ನೋಡಿದ್ರೆ ಅಶ್ವರ್ಯ ಪಡಬಹುದು" ಅಂತಾ ನಮ್ರತಾ ಗೌಡ ತಮ್ಮ ಪಿಯುಸಿ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ.