Actress Sumalatha Ambareesh: ಸುಮಲತಾ ಅವರನ್ನು ಅಂಬರೀಶ್ ಪತ್ನಿಯಾಗಿ ಮತ್ತು ಸಿನಿಮಾ ನಟಿಯಾಗಿ ಬಲ್ಲವರೇ ಹೆಚ್ಚು. ಅನೇಕರಿಗೆ ಸುಮಲತಾ ಆದಾಯ ಎಷ್ಟು, ಅವರ ವ್ಯವಹಾರಗಳೇನು ಎಂದು ತಿಳಿದಿಲ್ಲ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ನಡ ಸಿನಿರಂಗದ ಖ್ಯಾತ ನಟಿ ಸುಮಲತಾ ಅಂಬರೀಶ್. ನಟಿಯಾಗಿ ಮಾತ್ರವಲ್ಲದೇ ರಾಜಕಾರಣಿಯಾಗಿಯೂ ಗುರುತಿಸಿಕೊಂಡವರು.
ಸುಮಲತಾ ಅವರು ಸ್ಯಾಂಡಲ್‌ವುಡ್ ಕರ್ಣ ಎಂದೇ ಕರೆಸಿಕೊಳ್ಳುತ್ತಿದ್ದ ನಟ ಅಂಬರೀಶ್ ಅವರ ಪತ್ನಿ. ಇವರ ಪುತ್ರ ಅಭಿಷೇಕ್ ಕೂಡ ಕನ್ನಡದ ಫೇಮಸ್ ನಟ. ಇವರ ಸೊಸೆ ಅವಿವಾ. ಮತ್ತು ಇವರಿಗೊಬ್ಬ ಮೊಮ್ಮಗನಿದ್ದಾನೆ.
ಇತ್ತೀಚೆಗಷ್ಟೇ ಸುಮಲತಾ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ನಡೀತು. ಅದ್ಧೂರಿಯಾಗಿ ನಡೆದ ಈ ನಾಮಕರಣ ಶಾಸ್ತ್ರದಲ್ಲಿ ನಟ ನಟಿಯರೇ ದಂಡು ಆಗಮಿಸಿತ್ತು.
ಸುಮಲತಾ ಅಂಬರೀಶ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ರಾಜಕೀಯದಲ್ಲೂ ಸಕ್ರಿಯರಾಗಿರುವ ಸುಮಲತಾ ಮಂಡ್ಯದ ಸಂಸದೆ ಆಗಿದ್ದವರು.
1963ರಲ್ಲಿ ಚೆನ್ನೈನಲ್ಲಿ ಜನಿಸಿದ ಸುಮಲತಾ ಮುಂಬೈ ಮತ್ತು ಆಂಧ್ರಪ್ರದೇಶದಲ್ಲಿ ಬಾಲ್ಯ ಕಳೆದರು. ತಮ್ಮ 15ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿಗೆಲುವನ್ನು ಪಡೆದಿದ್ದರು.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸುಮಲತಾ ಸಕ್ರಿಯವಾದರು. ಡಾ.ರಾಜ್‌ಕುಮಾರ್ ಅಭಿನಯದ ʻರವಿಚಂದ್ರʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದರು.
ವರದಿ ಪ್ರಕಾರ, ಸುಮಲತಾ ಅಂಬರೀಶ್ ಸುಮಾರು 17 ಕೋಟಿಗೂ ಅಧಿಕ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. 41,00,000 ರೂಪಾಯಿ ಮೌಲ್ಯದ ಕೃಷಿ ಭೂಮಿ ಸುಮಲತಾ ಹೆಸರಿನಲ್ಲಿದೆ.
ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ಜಯಪ್ರಕಾಶ ನಗರದಲ್ಲಿ ಮನೆ ಹಾಗೂ ಕಟ್ಟಡಗಳಿವೆ. ಇವುಗಳ ಒಟ್ಟು ಮೌಲ್ಯ 17,72,91,150 ರೂಪಾಯಿ.
ನಟಿ ಸುಮಲತಾ 5.6 ಕೋಟಿ ಚರಾಸ್ತಿ ಹೊಂದಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ 12,70,363 ರೂಪಾಯಿ ನಗದು ಹೊಂದಿದ್ದಾರೆ. 1,66,81,189 ಮೌಲ್ಯದ ಚಿನ್ನ ಹಾಗೂ 12,57,545 ರೂ ಮೌಲ್ಯ ಬೆಳ್ಳಿ ಸುಮಲತಾ ಅವರ ಬಳಿಯಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕಟಿಸಿದ ಪ್ರಕಾರ, ನಟಿ ಸುಮಲತಾ ಒಟ್ಟು ಆಸ್ತಿ 23.4 ಕೋಟಿಗೂ ಅಧಿಕವಾಗಿದೆ. ಇದರ ಜೊತೆ ಸುಮಲತಾ ಅಂಬರೀಶ್ ಸಾಲವನ್ನ ಕೂಡ ಹೊಂದಿದ್ದಾರೆ.