ಮರೆಯಾಯ್ತು ನಕ್ಕು ನಲಿಸಿದ್ದ ಮಾಣಿಕ್ಯ.. ಕನ್ನಡದ ಹಿರಿಯ ಹಾಸ್ಯ ನಟ, ಬಿಗ್‌ ಬಾಸ್‌ ಖ್ಯಾತಿಯ ರಾಜು ತಾಳಿಕೋಟೆ ಇನ್ನಿಲ್ಲ

Written ByDeepa A Reddy
Published: Oct 13, 2025, 07:18 PM IST|Updated: Oct 13, 2025, 07:18 PM IST

Raju Talikote: ಸ್ಯಾಂಡಲ್‌ವುಡ್‌ನ ಹಾಸ್ಯ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
 

1/7

Raju Talikote: ಚಲನಚಿತ್ರ ಹಾಸ್ಯ ನಟ ಹಾಗೂ ಹಿರಿಯ ರಂಗ ಕಲಾವಿದರಾಗಿದ್ದ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ.   

2/7

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರಾಗಿದ್ದ ರಾಜು ತಾಳಿಕೋಟೆ ಕುಡುಕನ ಪಾತ್ರಗಳಲ್ಲಿ ನಟಿಸುತ್ತಾ, ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲೆಯನ್ನೇ ಜೀವವಾಗಿಸಿಕೊಂಡಿದ್ದರು.   

3/7

ಅಕ್ಟೋಬರ್ 13, 2025ರಂದು ಕನ್ನಡದ ಹಾಸ್ಯ ನಟ ಹಾಗೂ ಉತ್ತರ ಕರ್ನಾಟಕದ ರಂಗಭೂಮಿ ಒಂದರ ಮಾಲಿಕರಾಗಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.   

4/7

ರಾಜು ತಾಳಿಕೋಟೆ ಅವರಿಗೆ ನಿನ್ನೆ ಹೃದಯಾಘಾತವಾಗಿತ್ತು, ಅವರನ್ನು ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಸ್ಪಂದಿಸದೆ ರಾಜು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.   

5/7

ರಂಗಭೂಮಿಯಲ್ಲಿನ ಅನುಭವದೊಂದಿಗೆ ರಾಜು ತಾಳಿಕೋಟೆ, 'ಮನಸಾರೆ' (2009) ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.   

6/7

'ಪಂಚರಂಗಿ', 'ಮತ್ತೊಂದ್ ಮದುವೇನಾʼ, ʻಮೈನಾʼ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರು ತಮ್ಮ ನಟನೆ ಹಾಗೂ ಹಾಸ್ಯ ಕೌಶಲ್ಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದರು.   

7/7

ರಾಜು ತಾಳಿಕೋಟೆ ಅವರ ಸಾವು ಇದೀಗ ಚಿತ್ರರಂಗಕ್ಕೆ ಶಾಕ್‌ ಕೊಟ್ಟಿದೆ. ಅಭಿಮಾನಿಗಳು ಹಾಗೂ ಗಣ್ಯರು ಇದೀಗ ರಾಜು ತಾಳಿಕೋಟೆ ಅವರ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.