ಮಗಳೇ ಎಂದಿದ್ದ ಸೈಫ್‌ ಅಲಿ ಖಾನ್‌ ಮೇಲೆ ಕರೀನಾ ಕಪೂರ್‌ಗೆ ಲವ್‌ ಆದಾಗ ಹೇಗೆ ಹೇಳಿದ್ದರು... ಅಕ್ಕ ಕರಿಷ್ಮಾ ಬಿಚ್ಚಿಟ್ಟ ಗುಟ್ಟು!

Kareena Kapoor and Saif Ali Khan: ಮಗಳೇ ಎಂದಿದ್ದ ಸೈಫ್‌ ಅಲಿ ಖಾನ್‌ ಮೇಲೆ ಕರೀನಾ ಕಪೂರ್‌ಗೆ ಲವ್‌ ಆದಾಗ ಹೇಗೆ ಹೇಳಿದ್ದರು ಎಂಬ ಸಂಗತಿಯನ್ನು ನಟಿ ಕರೀಷ್ಮಾ ಕಪೂರ್‌ ಹೇಳಿದ್ದಾರೆ.  

ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಜೋಡಿ. ಸೈಫ್‌ ಅಲಿ ಖಾನ್‌ ಗಿಂತ ಕರೀನಾ ಕಪೂರ್‌ ತುಂಬಾ ಚಿಕ್ಕವರು.

1 /6

Saif Ali Khan Kareena Kapoor : ಬಾಲಿವುಡ್ ಪವರ್‌ಫುಲ್‌ ಕಪಲ್‌ಗಳಲ್ಲಿ ಒಬ್ಬರು ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. ಇವರಿಬ್ಬರು ಮದುವೆಯಾದಾಗ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

2 /6

5 ವರ್ಷಗಳ ಕಾಲ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದು ಬಳಿಕ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್ ಮದುವೆಯಾಗಿದ್ದರು.  

3 /6

ಅಮೃತಾ ಸಿಂಗ್​ ಅವರನ್ನು ಸೈಫ್ 21 ನೇ ವಯ್ಸನಲ್ಲಿ ಮದುವೆಯಾಗಿದ್ದರು. ಆದರೆ ಅಮೃತಾ ಸಿಂಗ್‌ ಅವರಿಗೆ ಆಗ 32 ವರ್ಷ ವಯಸ್ಸಾಗಿತ್ತು. 12 ವರ್ಷ ಹಿರಿಯ ನಟಿಯನ್ನು  ಸೈಫ್ ಮದುವೆಯಾಗಿದ್ದು ಸಹದೊಡ್ಡ ಸುದ್ದಿಯಾಗಿತ್ತು. 

4 /6

ಸೈಫ್​ ಅಲಿ ಖಾನ್‌ ಮೇಲೆ ಕರೀನಾ ಕಪೂರ್‌ಗೆ ಪ್ರೀತಿ ಆದಾಗ ಮೊದಲ ಬಾರಿ ಅದನ್ನು ತಮ್ಮ ಸಹೋದರಿ ಕರಿಷ್ಮಾ ಕಪೂರ್‌ ಬಳಿ ಹೇಳಿಕೊಂಡಿದ್ದರು.​ಈ ಬಗ್ಗೆ ಕರೀಷ್ಮಾ ಹೇಳಿರುವ ಮಾತುಗಳು ವೈರಲ್​ ಆಗ್ತಿದೆ.

5 /6

ನನಗೆ ಈಗಲೂ ನೆನಪಿದೆ. ಆಗ ನಾನು ಲಂಡನ್‌ನಲ್ಲಿ ಇದ್ದೆ. ಮಾಲ್​ ನಲ್ಲಿ ಶಾಪಿಂಗ್​ ಮಾಡುತ್ತಿದ್ದೆ. ಕರೀನಾ ನನಗೆ ಕಾಲ್​ ಮಾಡಿದಳು. ಹತ್ತಿರವಿದ್ದ ಸೋಫಾ ಮೇಲೆ ಕುಳಿತು ಕೇಳು ಎಂದಳು. ನನಗೆ ಆಶ್ಚರ್ಯ ಆಯಿತು ಎಂದು ಕರಿಷ್ಮಾ ಕಪೂರ್‌ ಹೇಳಿದ್ದಾರೆ. 

6 /6

ಸರಿ ಎಂದು ಮಾಲ್​ ನಲ್ಲಿ ಇದ್ದ ಸೋಫಾದ ಮೇಲೆ ಕುಳಿತೆ. ಆಗ ಕರೀನಾ, I Think ಎನ್ನುತ್ತಾ ಮಾತು ಶುರು ಮಾಡಿದಳು. ನನಗೆ ಸೈಫ್​ ಮೇಲೆ ಲವ್​ ಆಗಿದೆ ಎಂದಳು ಎಂದ ಕರಿಷ್ಮಾ ಕಪೂರ್  ಹೇಳಿದ್ದಾರೆ.