Karna serial bhavya gowda: ಬಿಗ್‌ಬಾಸ್ ಹಾಗೂ ಕರ್ಣ ಸೀರಿಯಲ್ ಖ್ಯಾತಿಯ ನಟಿ ಭವ್ಯ ಗೌಡ ಅವರು ಮತ್ತೊಂದು ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ..ಅದು ಯಾವುದು ಗೊತ್ತಾ?
1/5ಭವ್ಯ ಗೌಡ ಅವರು ಇತ್ತೀಚೆಗೆ ಸಹೋದರಿ ದಿವಾ ಜೊತೆಗೆ ಹೊಸ ಉದ್ಯಮವೊಂದನ್ನ ಆರಂಭಿಸಿದ್ದರು.
2/5ತಮ್ಮ ಸಹೋದರಿಯೊಂದಿಗೆ 'ಹೌಸ್ ಆಫ್ ಫ್ಲವರ್ಸ್' ಹೆಸರಿನಲ್ಲಿ ಒಣ ಹೂವುಗಳ ಬೊಕ್ಕೆಗಳನ್ನು ಮಾರಾಟ ಮಾಡುತ್ತಿದ್ದು, ಬೆಂಗಳೂರಿನ ಅವರೆ ಮೇಳದಲ್ಲಿ ಸ್ಟಾಲ್ ತೆರೆದಿದ್ದಾರೆ.
3/5ಭವ್ಯಾ ಗೌಡ ಕರ್ಣ ಸೀರಿಯಲ್ ಮೂಲಕ ಎಲ್ಲರ ಗಮನ ಸೆಳೆಯತ್ತಾರೆ.. ನಿಧಿ ಎಂದರೆ ವೀಕ್ಷಕರಿಗೆ ಅಚ್ಚುಮೆಚ್ಚು.. ಸೀರಿಯಲ್ನಲ್ಲಿ ಇಷ್ಟು ದಿನ ಬರೀ ಗೋಳೇ ಆಗಿದ್ದ ನಿಧಿಗೆ ಈಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದು, ಕರ್ಣನ ಜೊತೆ ಹೊಸ ಕನಸನ್ನು ಶುರು ಮಾಡುತ್ತಿದ್ದಾಳೆ.
4/5ಇದೀಗ ಅವರೆ ಮೇಳದಲ್ಲಿಯೂ ಒಂದು ಸ್ಟಾಲ್ ಅನ್ನು ಹಾಕಿರುವ ಭವ್ಯ ಅವರು ಅದಕ್ಕೆ ಪೂಜೆ ಮಾಡುವ ಮೂಲಕ ಓಪನಿಂಗ್ ಮಾಡಿದ್ದಾರೆ. ಅಂದಮಾತ್ರಕ್ಕೆ ಅವರೇನು ಕರ್ಣ ಸೀರಿಯಲ್ ಬಿಡುತ್ತಾರೆ ಎಂದು ಅರ್ಥವಲ್ಲ. ನಟನೆಯ ಜೊತೆಜೊತೆಗೆನೇ ಈ ಉದ್ಯಮವನ್ನೂ ಮಾಡುತ್ತಿದ್ದಾರೆ ನಟಿ. ನಮ್ಮ ಹಿರಿಯರೆಲ್ಲರೂ ಹೂವಿನ ಬಿಜಿನೆಸ್ ಮಾಡುತ್ತಿದ್ದರು. ಆದ್ದರಿಂದ ನನಗೂ ಈ ಥಾಟ್ ಬಂದಿತು. ಆದ್ದರಿಂದ ಶುರು ಮಾಡಿದ್ದೇನೆ ಎಂದಿದ್ದಾರೆ
5/526 ವರ್ಷದ ಈ ಚೆಲುವೆ ಕುರಿತು ಹೇಳುವುದಾದರೆ, ಇವರು ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಗೀತಾ ಧಾರಾವಾಹಿಯ ಮೂಲಕ ಪ್ರಸಿದ್ಧಿಗೆ ಬಂದವರು ಇವರು. ಕಲಾಸಿ ವುಂಟೆ ಕಲಾದು ಸುಖಂ ತೆಲಗು ಸೀರಿಯಲ್ನಿಂದ ಆಂಧ್ರದ ಮನೆ ಮಾತಾಗಿದ್ದಾರೆ.