ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌ ಗಿಫ್ಟ್ : ತುಟ್ಟಿಭತ್ಯೆ ಶೇ. 58 ಕ್ಕೆ ಹೆಚ್ಚಿಸಿ ಸರ್ಕಾರ ಘೋಷಣೆ

Published: Oct 25, 2025, 08:59 AM IST|Updated: Oct 25, 2025, 09:01 AM IST

 

ಕರ್ನಾಟಕ ರಾಜ್ಯ ಸರ್ಕಾರವು 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡ 55 ರಿಂದ ಶೇಕಡ 58ಕ್ಕೆ ಏರಿಕೆ ಮಾಡಿ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ.

1/7

 

 

ಕರ್ನಾಟಕ ರಾಜ್ಯ ಸರ್ಕಾರವು 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡ 55 ರಿಂದ ಶೇಕಡ 58ಕ್ಕೆ ಏರಿಕೆ ಮಾಡಿ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ.

 

2/7

ಈ ಆದೇಶವು 2025ರ ಜುಲೈ 1ರಿಂದ ಜಾರಿಗೆ ಬರಲಿದ್ದು, ಸರ್ಕಾರಿ ನೌಕರರಿಗೆ ಆರ್ಥಿಕ ನೆರವು ಒದಗಿಸುವ ಗುರಿಯನ್ನು ಹೊಂದಿದೆ.ಕರ್ನಾಟಕ ಸರ್ಕಾರವು ತನ್ನ ಆದೇಶದಲ್ಲಿ ಈ ಕೆಳಗಿನ ವಿವರಗಳನ್ನು ಸ್ಪಷ್ಟಪಡಿಸಿದೆ

 

3/7

 

ತುಟ್ಟಿಭತ್ಯೆ ಏರಿಕೆ: 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ತತ್ಸಮಾನ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡ 55 ರಿಂದ ಶೇಕಡ 58ಕ್ಕೆ ಏರಿಕೆ ಮಾಡಲಾಗಿದೆ. ಈ ಏರಿಕೆ 2025ರ ಜುಲೈ 1ರಿಂದ ಜಾರಿಗೆ ಬರಲಿದೆ.

 

4/7

 

ಮೂಲ ವೇತನದ ವ್ಯಾಖ್ಯಾನ: ಈ ಆದೇಶದ ಉದ್ದೇಶಕ್ಕಾಗಿ, ‘ಮೂಲ ವೇತನ’ ಎಂದರೆ ಸರ್ಕಾರಿ ನೌಕರನು ಧಾರಣೆ ಮಾಡಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಪಡೆಯುವ ಮೂಲ ವೇತನವಾಗಿರುತ್ತದೆ. ವೇತನ ಎಂದು ಪರಿಗಣಿಸದ ಯಾವುದೇ ಉಪಲಬ್ಧಗಳನ್ನು ಮೂಲ ವೇತನಕ್ಕೆ ಸೇರಿಸಲಾಗುವುದಿಲ್ಲ.ಈ ಆದೇಶವು ವಿಶ್ವವಿದ್ಯಾಲಯಗಳು, ಸರ್ಕಾರಿ/ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುವ ಪೂರ್ಣಕಾಲಿಕ ನೌಕರರಿಗೆ ಅನ್ವಯಿಸುತ್ತದೆ.

 

5/7

 

ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿಸಲಾಗುವುದು. ಇದನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಲಾಗುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ.ಈ ಆದೇಶವು ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ.

 

6/7

ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿಸಬೇಕು.ತುಟ್ಟಿಭತ್ಯೆ ಲೆಕ್ಕಾಚಾರದಲ್ಲಿ ಐವತ್ತು ಪೈಸೆ ಮತ್ತು ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಲಾಗುವುದು, ಆದರೆ ಐವತ್ತು ಪೈಸೆಗಿಂತ ಕಡಿಮೆ ಭಿನ್ನಾಂಕಗಳನ್ನು ಕಡೆಗಣಿಸಲಾಗುವುದು.

 

7/7

 

ಈ ಆದೇಶವು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ತತ್ಸಮಾನ ಸಿಬ್ಬಂದಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಜೀವನ ವೆಚ್ಚದ ಏರಿಕೆಯನ್ನು ಸರಿದೂಗಿಸಲು ಮತ್ತು ಸರ್ಕಾರಿ ನೌಕರರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ಒದಗಿಸಲು ಈ ತುಟ್ಟಿಭತ್ಯೆ ಏರಿಕೆಯು ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.