ಲಕ್ಷ್ಮೀ ನಾರಾಯಣ ಯೋಗದಿಂದ 5 ರಾಶಿಯವರ ಲಕ್‌ ಚೇಂಜ್.. ಸುಖದ ಸುಪ್ಪತ್ತಿಗೆಯಲ್ಲೇ ಜೀವನ

Written ByYashaswini VUpdated byYashaswini V
Published: Apr 15, 2026, 10:01 AM IST|Updated: Apr 15, 2026, 10:01 AM IST

Lakshami Narayana Yoga: ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗುವ ಲಕ್ಷ್ಮೀ ನಾರಾಯಣ ಯೋಗವು ಕೆಲವು ರಾಶಿಯವರ ಬದುಕಿನ ದಿಕ್ಕನ್ನೇ ಬದಲಾಯಿಸಲಿದೆ. ಅಪಾರ ಸುಖ, ಸಂಪತ್ತಿನಿಂದ ಅವರ ಜೀವನದಲ್ಲಿ ಸಂಪತ್ತಿನ ಸುಯೋಗ ಎಂತಲೇ ಹೇಳಲಾಗುತ್ತಿದೆ.  ಲಕ್ಷ್ಮೀ ನಾರಾಯಣ ಯೋಗ ಯಾವಾಗ ರೂಪುಗೊಳ್ಳಲಿದೆ? ಇದರಿಂದ ಯಾವ ರಾಶಿಗೆ ಶುಭ ಎಂದು ತಿಳಿಯೋಣ...

Lakshami Narayana Yoga impact1/6

ಜ್ಯೋತಿಷ್ಯದಲ್ಲಿ ರಾಕ್ಷಸರ ಗುರು ಎನ್ನಲಾಗುವ ಶುಕ್ರ ಸೆಪ್ಟೆಂಬರ್‌ ಮೊದಲ ವಾರದಲ್ಲಿ ತುಲಾ ರಾಶಿಗೆ ಪ್ರವೇಶಿಸಲಿದ್ದು, ಅಲ್ಲಿ ಬುಧನೊಂದಿಗೆ ಮೈತ್ರಿಯಾಗಲಿದ್ದಾನೆ. ಈ ಸಂದರ್ಭದಲ್ಲಿ ಅತ್ಯಂತ ಮಂಗಳಕರವಾದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಐದು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುಧೆ ಎಂತಲೇ ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ..  

Lakshami Narayana Yoga impact2/6

ಲಕ್ಷ್ಮೀ ನಾರಾಯಣ ಯೋಗದಿಂದ ವೃಷಭ ರಾಶಿಯವರಿಗೆ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರಮುಖ ಕೆಲಸಗಳಲ್ಲಿ ಕುಟುಂಬದವರ ಸಂಪೂರ್ಣ ಸಹಕಾರ ದೊರೆಯಲಿದೆ. ವ್ಯವಹಾರದಲ್ಲಿ ದೀರ್ಘ ಸಮಯದಿಂದ ಬೇರೆಡೆ ಸಿಲುಕಿದ್ದ ಹಣ ನಿಮ್ಮ ಕೈ ಸೇರಲಿದೆ. ಭೂಮಿ ಖರೀದಿಸುವ ನಿಮ್ಮ ಪ್ರಯತ್ನ ಸಫಲವಾಗಲಿದೆ. 

Lakshami Narayana Yoga impact3/6

ಲಕ್ಷ್ಮೀ ನಾರಾಯಣ ಯೋಗದ ಪ್ರಭಾವದಿಂದ ಸಿಂಹ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ವಿದೇಶ ವ್ಯವಹಾರದಲ್ಲಿ ಅದೃಷ್ಟ ಖುಲಾಯಿಸಲಿದ್ದು ಹಣಕಾಸಿನ ಹರಿವು ಹೆಚ್ಚಾಗಲಿದೆ. ಉದ್ಯಮಿಗಳಿಗೆ  ಒಳ್ಳೆಯ ಡೀಲ್‌ ದೊರೆಯಬಹುದು. ವ್ಯವಹಾರ ವಿಸ್ತರಣೆಗೆ ಇದು ಅತ್ಯುತ್ತಮ ಸಮಯ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಬಹುದು.

Lakshami Narayana Yoga impact4/6

ಲಕ್ಷ್ಮೀ ನಾರಾಯಣ ಯೋಗದಿಂದ ಕನ್ಯಾ ರಾಶಿಯ ಜನರಿಗೆ ವೃತ್ತಿಯಲ್ಲಿ ಪ್ರಮೋಷನ್‌ ಸಿಗಲಿದೆ. ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯಗಳು ಮರೆಯಾಗಲಿವೆ. ದೀರ್ಘ ಸಮಯದಿಂದ ಬಾಧಿಸುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಶುಕ್ರನ ದಯೆಯಿಂದ ಆದಾಯದ ಮೂಲಗಳು ಹೆಚ್ಚಾಗಲಿದ್ದು ಮನೆಯಲ್ಲಿ ಸಂಪತ್ತಿನ ಹೊಳೆಯೇ ಹರಿಯಲಿದೆ.   

Lakshami Narayana Yoga impact5/6

ಲಕ್ಷ್ಮೀ ನಾರಾಯಣ ಯೋಗವು ವೃಶ್ಚಿಕ ರಾಶಿಯವರ ಬಾಳಲ್ಲಿ ಸುಖ ಸಮೃದ್ಧಿಯನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ನಿಮ್ಮ ಇಷ್ಟು ವರ್ಷಗಳ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರುವಿರಿ. ಕುಟುಂಬದಲ್ಲಿ ಸಂತೋಷದಿಂದ ವಾತಾವರಣ ಇರಲಿದೆ. ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ನಿಮ್ಮ ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. 

Lakshami Narayana Yoga impact6/6

ಧನು ರಾಶಿಯ ಜನರಿಗೆ ಲಕ್ಷ್ಮೀ ನಾರಾಯಣ ಯೋಗದಿಂದ ಹಠಾತ್‌ ಧನಲಾಭವಾಗಲಿದೆ.  ಉದ್ಯೋಸ್ಥರಿಗೆ ಬಡ್ತಿ ಅವಕಾಶಗಳಿದ್ದು, ಸರ್ಕಾರಿ ನೌಕರರಿಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ವ್ಯವಹಾರದಲ್ಲೂ ಉತ್ತಮ ಪ್ರಗತಿಯನ್ನು ಕಾಣುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳುವಿರಿ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ.  

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.