ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ ಹೆಚ್ಚಳ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. ಈ ಹೊತ್ತಿನಲ್ಲಿಯೇ 18 ತಿಂಗಳ ಬಾಕಿ ಡಿಎ ಬಗ್ಗೆ ಮಹತ್ವದ ಸುದ್ದಿ ಹೊರ ಬಂದಿದೆ.
1/7ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಡಿಎ 3% ದಷ್ಟು ಹೆಚ್ಚಳವಾಗುವುದು ಎನ್ನುವುದು ಬಹುತೇಕ ಖಚಿತವಾಗಿದೆ. ಈ ಲೆಕ್ಕಾಚಾರದಲ್ಲಿ ಒಟ್ಟು ತುಟ್ಟಿಭತ್ಯೆ 55% ರಿಂದ 58% ಕ್ಕೆ ಏರಿಕೆಯಾಗಲಿದೆ.
2/71 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರು ಏರುತ್ತಿರುವ ಬೆಲೆ ಏರಿಕೆಯನ್ನು ನಿಭಾಯಿಸಲು ಈ ಹೆಚ್ಚಳ ಸಹಾಯ ಮಾಡುತ್ತದೆ. ಇನ್ನು ಈ ಹೆಚ್ಚಳವು ಅಕ್ಟೋಬರ್ ತಿಂಗಳ ವೇತನದಲ್ಲಿ ನೌಕರರ ಖಾತೆ ಸೇರಲಿದೆ ಎನ್ನಲಾಗಿದೆ.
3/7ಇದೀಗ ಡಿಎ ಹೆಚ್ಚಳದ ಜೊತೆಗೆ 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರ್ಥಿಕ ಸ್ಥಿತಿ ಕಳಪೆಯಾಗಿದ್ದ ಕಾರಣ, ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್)ವನ್ನು ತಡೆ ಹಿಡಿಯಲಾಗಿತ್ತು.
4/7ಈ ಹಣವನ್ನು ಆದಷ್ಟು ಬೇಗೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಿ ನೌಕರರು ಒತ್ತಾಯಿಸುತ್ತಲೇ ಇದ್ದಾರೆ. ತಮ್ಮ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.
5/7ರಾಷ್ಟ್ರೀಯ ಮಂಡಳಿಯ (ಜಂಟಿ ಸಮಾಲೋಚನಾ ಕಾರ್ಯವಿಧಾನ) ಸ್ಥಾಯಿ ಸಮಿತಿಯ 63 ನೇ ಸಭೆಯಲ್ಲಿ, ಕೋವಿಡ್ ಸಮಯದಲ್ಲಿ ತಡೆಹಿಡಿಯಲಾದ 18 ತಿಂಗಳ ಡಿಎ / ಡಿಆರ್ ಬಾಕಿ ಪಾವತಿ ಸೇರಿದಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
6/7ಮಾರ್ಚ್ 2020 ರಿಂದ ಜೂನ್ 2021 ರವರೆಗಿನ 18 ತಿಂಗಳ ಡಿಎ / ಡಿಆರ್ ಮೊತ್ತವನ್ನು ಆ ಸಮಯದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ನಿಲ್ಲಿಸಲಾಗಿತ್ತು, ಅದನ್ನು ನೌಕರರಿಗೆ ಹಿಂತಿರುಗಿಸಬೇಕು. ದೇಶದಲ್ಲಿ ಲಾಕ್‌ಡೌನ್ ಇದ್ದರೂ ಸಹ, ಆ ಕಷ್ಟದ ಸಮಯದಲ್ಲಿ ಅವರು ತಮ್ಮ ಪೂರ್ಣ ಸೇವಾ ಮನೋಭಾವದಿಂದ ಕೆಲಸ ಮಾಡಿದ್ದರಿಂದ, ನೌಕರರು ಮತ್ತು ಪಿಂಚಣಿದಾರರು ಇಬ್ಬರೂ ಈ ಪರಿಹಾರಕ್ಕೆ ಅರ್ಹರು ಎಂದು ಅವರು ವಾದಿಸಿದರು.
7/7ಆದರೆ ಹಣಕಾಸು ಸಚಿವಾಲಯವು ಈ ವಿಷಯದ ಬಗ್ಗೆ ತನ್ನ ಹಳೆಯ ನಿಲುವನ್ನೇ ಪುನರುಚ್ಚರಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, 2020-21ರ ಆರ್ಥಿಕ ವರ್ಷದ ನಂತರವೂ ಸರ್ಕಾರದ ಕಲ್ಯಾಣ ಯೋಜನೆಗಳ ಹೊರೆ ಅನುಭವಿಸಲಾಗಿದೆ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಡಿಎ / ಡಿಆರ್ ಬಾಕಿ ಪಾವತಿಸಲು ಸಾಧ್ಯವಿಲ್ಲ.