ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಮಧ್ಯೆಯೇ ಮತ್ತೊಂದು ಮಹತ್ವದ ಆದೇಶ :ಸರ್ಕಾರಿ ನೌಕರರ 18 ತಿಂಗಳ ಡಿಎ ಅರಿಯರ್ಸ್ ಬಗ್ಗೆ ಸರ್ಕಾರದ ಘೋಷಣೆ

Written ByRanjitha R K
Published: Aug 12, 2025, 08:00 PM IST|Updated: Aug 12, 2025, 08:00 PM IST

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳವರೆಗೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ತಡೆಹಿಡಿಯಲಾಗಿತ್ತು. ಇದೀಗ ಬಾಕಿ ಡಿಎ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.  

information on 18 month 1/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮುಂದಿನ ಕೆಲವು ವಾರಗಳಲ್ಲಿ ಹಲವಾರು ಪ್ರಮುಖ ಸುದ್ದಿಗಳನ್ನು ಸ್ವೀಕರಿಸಲಿದ್ದಾರೆ. 8ನೇ ವೇತನ ಆಯೋಗದ ಅಡಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ ಮತ್ತು ನೌಕರರು ಮತ್ತು ಪಿಂಚಣಿದಾರರ ಬಹುನಿರೀಕ್ಷಿತ ಬೇಡಿಕೆಗಳು ಈಡೇರುವ ನಿರೀಕ್ಷೆಯಿದೆ.

information on 18 month 2/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು (ಸಾರ್ವಜನಿಕ ವಲಯದ ನೌಕರರು ಸೇರಿದಂತೆ) ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಇದನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಸರ್ಕಾರಿ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲಾಗುತ್ತದೆ.  

information on 18 month 3/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಆದರೆ, ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳವರೆಗೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ತಡೆಹಿಡಿಯಲಾಗಿತ್ತು. ಈ  ಬಾಕಿ ಡಿಎಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. 

information on 18 month 4/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಇದೀಗ ಕೊನೆಗೂ ಈ ಬಾಕಿ ಹಣ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ  ಆಗಸ್ಟ್ 11, 2025 ಅಂದರೆ ನಿನ್ನೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ  ಸ್ಪಷ್ಟ ಉತ್ತರ ನೀಡಿದ್ದಾರೆ. 

information on 18 month 5/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಇರುವ 18 ತಿಂಗಳ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಬಿಡುಗಡೆ ಮಾಡಲು ಸರ್ಕಾರ ಗಡುವು ನಿಗದಿಪಡಿಸಿದೆಯೇ ಎನ್ನುವ ಪ್ರಶ್ನೆಗೆ ಈ ಬಗ್ಗೆ ಯಾವುದೇ ನಿರ್ದಿಷ್ಟ ಗಡುವನ್ನು ನಿರ್ಧರಿಸಲಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. 

information on 18 month 6/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಸರ್ಕಾರವು 18 ತಿಂಗಳ ಡಿಎ/ಡಿಆರ್ ಬಾಕಿಯನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂದು ಕೇಳಿದಾಗ, 2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರತಿಕೂಲ ಆರ್ಥಿಕ ಪರಿಣಾಮ ಮತ್ತು ಸರ್ಕಾರ ತೆಗೆದುಕೊಂಡ ಕಲ್ಯಾಣ ಕ್ರಮಗಳಿಗಾಗಿ ಒದಗಿಸಲಾದ ನಿಧಿಗಳು 2020-21ರ ಆರ್ಥಿಕ ವರ್ಷವನ್ನು ಮೀರಿ ಹಣಕಾಸಿನ ಸೋರಿಕೆಗೆ ಕಾರಣವಾಗಿವೆ. ಆದ್ದರಿಂದ, ಬಾಕಿ  ಡಿಎ/ಡಿಆರ್  ಬಿಡುಗಡೆ ಕಾರ್ಯಸಾಧ್ಯವಲ್ಲ ಎಂದು ಹೇಳಿದ್ದಾರೆ.   

information on 18 month 7/7

18 ತಿಂಗಳ ಬಾಕಿ ಡಿಎ ಬಗ್ಗೆ ಮಾಹಿತಿ

ಏರುತ್ತಿರುವ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ನೀಡಲಾಗುತ್ತದೆ. ಇವುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ, ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಪರಿಷ್ಕರಿಸಲಾಗುತ್ತದೆ.