ಬ್ರಿಟಿಷ್ ವೇಟ್‌ಲಿಫ್ಟರ್ ಲಾನ್ಸೆಸ್ಟನ್ ಎಲಿಯಟ್ (1874–1930) ಇಂಗ್ಲೆಂಡ್ ಪರವಾಗಿ 1896 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ಇಂತಹ ಮಹಾನ್ ಕ್ರೀಡಾಪಟು ಉತ್ತರ ಕರ್ನಾಟಕದ ಗ್ರಾಮದಲ್ಲಿ ಜನಿಸಿದ್ದರು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ.ಹಾಗಾಗಿ ಈ ರೋಚಕ ಇತಿಹಾಸದ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ.
1/5ಬ್ರಿಟಿಷ್ ವೇಟ್‌ಲಿಫ್ಟರ್ ಲಾನ್ಸೆಸ್ಟನ್ ಎಲಿಯಟ್ (1874–1930) ಇಂಗ್ಲೆಂಡ್ ಪರವಾಗಿ 1896 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ಇಂತಹ ಮಹಾನ್ ಕ್ರೀಡಾಪಟು ಉತ್ತರ ಕರ್ನಾಟಕದ ಗ್ರಾಮದಲ್ಲಿ ಜನಿಸಿದ್ದರು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ.ಹಾಗಾಗಿ ಈ ರೋಚಕ ಇತಿಹಾಸದ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ.
2/5ಲಾನ್ಸೆಸ್ಟನ್ ಎಲಿಯಟ್ ಇಂದಿನ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ 1874ರಲ್ಲಿ ಜನಿಸಿದರು.
3/5ಎಲಿಯಟ್ ಜನಿಸುವ ಮೊದಲೇ ಅವರ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಿತ್ತು. ಅವರ ತಂದೆ ಗಿಲ್ಬರ್ಟ್ ವ್ರೇ ಎಲಿಯಟ್, ಭಾರತೀಯ ನಾಗರಿಕ ಸೇವೆಯಲ್ಲಿ (ICS) ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದರು.
4/5ಎಲಿಯಟ್ ಒಂದು ಪ್ರಮುಖ ಸ್ಕಾಟಿಷ್ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಅವರ ಕುಟುಂಬದ ಮುಖ್ಯಸ್ಥ ಲಾರ್ಡ್ ಮಿಂಟೋ ಭಾರತದ ವೈಸ್‌ರಾಯ್ ಆಗಿ ಕಾರ್ಯನಿರ್ವಹಿಸಿದರು.
5/5ಅವರು ಸೇಂಟ್ ಹೆಲೆನಾದ ಮಾಜಿ ಗವರ್ನರ್ ಸರ್ ಚಾರ್ಲ್ಸ್ ಎಲಿಯಟ್ ಅವರ ಮೊಮ್ಮಗನೂ ಆಗಿದ್ದರು, ಇದು ಬ್ರಿಟಿಷ್ ಸರ್ಕಾರದೊಂದಿಗೆ ಅವರ ಕುಟುಂಬದ ಆಳವಾದ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.ಕೇವಲ 21 ವರ್ಷ ವಯಸ್ಸಿನಲ್ಲಿ, ಲಾನ್ಸೆಸ್ಟನ್ ಎಲಿಯಟ್ 1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅಥೆನ್ಸ್‌ಗೆ ಪ್ರಯಾಣ ಬೆಳೆಸಿದರು.