Shukra Budh Yuti: ಬುಧ ಶುಕ್ರರ ಯುತಿಯಿಂದ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಯವರಿಗೆ ಭಾಗ್ಯೋದಯ
ಪ್ರಸ್ತುತ ಮೀನ ರಾಶಿಯಲ್ಲಿರುವ ಬುಧ ಮೇ 10ರಂದು ಸಂಜೆ 6:39ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಪ್ರಸ್ತುತ, ಐಷಾರಾಮಿ ಗ್ರಹ ಶುಕ್ರನೂ ಕೂಡ ಇದೆ ರಾಶಿಯಲ್ಲಿ ಇರುವುದರಿಂದ ಮೇಷ ರಾಶಿಯಲ್ಲಿ ಶುಕ್ರ- ಬುಧನ ಸಂಯೋಗ ರಚನೆಯಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಶುಕ್ರರು ಒಟ್ಟಿಗೆ ಕೂಡಿದಾಗ ಅತ್ಯಂತ ಮಂಗಳಕರ ಲಕ್ಷ್ಮೀ ನಾರಾಯಣ ಯೋಗ ರಚನೆಯಾಗಲಿದೆ.
ಲಕ್ಷ್ಮೀ ನಾರಾಯಣ ಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರ ದೃಷ್ಟಿಯಿಂದ ಇದನ್ನು ತುಂಬಾ ಅದುಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸ್ವ ರಾಶಿಯಲ್ಲಿ ರಚನೆಯಾಗಲಿರುವ ಲಕ್ಷ್ಮೀ ನಾರಾಯಣ ಯೋಗವು ಮೇಷ ರಾಶಿಯವರ ಜೀವನದಲ್ಲಿ ತುಂಬಾ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ತಾಯಿ ಲಕ್ಷ್ಮಿ ಆಶೀರ್ವಾದಿಂದ ಆದಾಯ ಹೆಚ್ಚಾಗಲಿದೆ. ಅನಿರೀಕ್ಷಿತ ಧನಲಾಭ ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವನ್ನು ನೀಡಲಿದೆ. ಹೊಸ ವ್ಯವಹಾರಕ್ಕಾಗಿ ಯೋಚಿಸುತ್ತಿರುವವರಿಗೆ ಶುಭ ಸಮಯ.
ಲಕ್ಷ್ಮೀ ನಾರಾಯಣ ಯೋಗವು ಮಿಥುನ ರಾಶಿಯವರಿಗೆ ಫಲಪ್ರದವಾಗಿದೆ. ನೀವು ಕೈ ಹಾಕಿದ ಪ್ರತಿ ಕ್ಷೇತ್ರದಲ್ಲೂ ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. ಹಣಕಾಸಿನ ಸ್ಥಿತಿ ಮೊದಲಿಗಿಂತಲೂ ಸುಧಾರಿಸಲಿದೆ.
ಬುಧ ಶುಕ್ರರ ಸಂಯೋಗವು ತುಲಾ ರಾಶಿಯ ಜನರಿಗೆ ಶುಭ ಶುದ್ಧಿಯನ್ನು ನೀದ್ಲೈದೆ. ಕೆಲಸದಲ್ಲಿ ಪ್ರಗತಿ, ಉದ್ಯಮಿಗಳಿಗೆ ಬಂಪರ್ ಆದಾಯವನ್ನು ಕಾಣಬಹುದು. ಹೂಡಿಕೆಯಿಂದ ಸಂಪತ್ತು ವೃದ್ಧಿಯಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.