Indian Cricketers who converted other religion: ಒಬ್ಬ ವ್ಯಕ್ತಿಯು ಧರ್ಮವನ್ನು ಬದಲಾಯಿಸಲು ಹಲವು ಕಾರಣಗಳಿವೆ. ಕೆಲವೊಮ್ಮೆ ಇನ್ನೊಂದು ಧರ್ಮದ ವ್ಯಕ್ತಿಯನ್ನು ಮದುವೆಯಾಗುವುದು ಅಥವಾ ನಂಬಿಕೆಯಲ್ಲಿ ಆಸಕ್ತಿ ಇತ್ಯಾದಿಗಳ ಕಾರಣದಿಂದಾಗಿರಬಹುದು. ಧರ್ಮವನ್ನು ಬದಲಾಯಿಸುವುದು ಯಾರೊಬ್ಬರ ಸಂಪೂರ್ಣ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೆ ಕ್ರಿಕೆಟಿಗ ಅಥವಾ ಸೆಲೆಬ್ರಿಟಿಗಳು ಹಾಗೆ ಮಾಡಿದಾಗ, ಅದು ದೊಡ್ಡ ಸುದ್ದಿಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಒಬ್ಬ ವ್ಯಕ್ತಿಯು ಧರ್ಮವನ್ನು ಬದಲಾಯಿಸಲು ಹಲವು ಕಾರಣಗಳಿವೆ. ಕೆಲವೊಮ್ಮೆ ಇನ್ನೊಂದು ಧರ್ಮದ ವ್ಯಕ್ತಿಯನ್ನು ಮದುವೆಯಾಗುವುದು ಅಥವಾ ನಂಬಿಕೆಯಲ್ಲಿ ಆಸಕ್ತಿ ಇತ್ಯಾದಿಗಳ ಕಾರಣದಿಂದಾಗಿರಬಹುದು. ಧರ್ಮವನ್ನು ಬದಲಾಯಿಸುವುದು ಯಾರೊಬ್ಬರ ಸಂಪೂರ್ಣ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೆ ಕ್ರಿಕೆಟಿಗ ಅಥವಾ ಸೆಲೆಬ್ರಿಟಿಗಳು ಹಾಗೆ ಮಾಡಿದಾಗ, ಅದು ದೊಡ್ಡ ಸುದ್ದಿಯಾಗುತ್ತದೆ.
ಪ್ರಪಂಚದಾದ್ಯಂತದ ಅನೇಕ ಕ್ರಿಕೆಟಿಗರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ. ಈ ಪೈಕಿ ಕೆಲವು ಕ್ರಿಕೆಟಿಗರು ಭಾರತದವರೂ ಇದ್ದಾರೆ. ಭಾರತದ ಅನೇಕ ಕ್ರಿಕೆಟಿಗರು ಕೂಡ ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ ಮತ್ತು ಹೊಸ ಧರ್ಮದೊಂದಿಗೆ ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಧರ್ಮವನ್ನು ಬದಲಾಯಿಸಿದ ಕ್ರಿಕೆಟಿಗರು ಯಾರು ಎಂದು ತಿಳಿಯೋಣ.
ರಾಬಿನ್ ಉತ್ತಪ್ಪ: ರಾಬಿನ್ ಉತ್ತಪ್ಪ ಅವರ ತಂದೆ ಹಿಂದೂ ಮತ್ತು ತಾಯಿ ಕ್ರಿಶ್ಚಿಯನ್. ಉತ್ತಪ್ಪ 25 ನೇ ವಯಸ್ಸಿನವರೆಗೆ ಹಿಂದೂವಾಗಿಯೇ ಇದ್ದರು, ಆದರೆ ಅವರು 2011 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ರಾಬಿನ್ ಉತ್ತಪ್ಪ ಅರ್ಧ ಕೊಡವ. ಅವರ ತಾಯಿ ರೊಸಲೀನ್ ಮಲಯಾಳಿ. ಅವರ ತಂದೆ ವೇಣು ಉತ್ತಪ್ಪ (ಮಾಜಿ ಹಾಕಿ ಅಂಪೈರ್) ಕೊಡವ ಜನಾಂಗದವರು. ರಾಬಿನ್ ಈಗ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇನ್ನು ಉತ್ತಪ್ಪ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ. ಈ ಮದುವೆ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ನಡೆದಿತ್ತು.
ವಿನೋದ್ ಕಾಂಬ್ಳಿ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮಹಾರಾಷ್ಟ್ರದ ಪುಣೆಯಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು. 1998 ರಲ್ಲಿ ಕ್ರಿಶ್ಚಿಯನ್ ಹುಡುಗಿಯನ್ನು ವಿವಾಹವಾದರೂ ಸಹ ಆಕೆಯಿಂದ ವಿಚ್ಛೇದನ ಪಡೆದರು. ಆ ಬಳಿಕ ಎರಡನೇ ಮದುವೆಯಾಗಲು ಹೊರಡ ವಿನೋದ್ ಕಾಂಬ್ಳಿ ಕ್ರಿಶ್ಚಿಯನ್ ಯುವತಿಯ ಕೈಹಿಡಿದರು. ಹೀಗಾಗಿ ಕಾಂಬ್ಳಿ ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.
ಎಜಿ ಕೃಪಾಲ್ ಸಿಂಗ್: ಭಾರತೀಯ ಕ್ರಿಕೆಟ್ ಆಟಗಾರ ಕೃಪಾಲ್ ಸಿಂಗ್ ತನ್ನ ಧರ್ಮವನ್ನು ಬದಲಾಯಿಸಿದ ಮೊದಲ ಕ್ರಿಕೆಟಿಗ. ಸಿಖ್ ಕುಟುಂಬದಲ್ಲಿ ಜನಿಸಿದ ಕೃಪಾಲ್ ಸಿಂಗ್ ಮದುವೆಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ತನ್ನ ವೃತ್ತಿಜೀವನದ ಮಧ್ಯದಲ್ಲಿ, ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸುತ್ತಿದ್ದ ಅವರು, ಆಕೆಯನ್ನು ಮದುವೆಯಾಗಲೆಂದೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಆ ಬಳಿಕ ಅವರು ತಮ್ಮ ಹೆಸರನ್ನು ಎಜಿ ಕೃಪಾಲ್ ಸಿಂಗ್‌ನಿಂದ ಅರ್ನಾಲ್ಡ್ ಜಾರ್ಜ್ ಎಂದು ಬದಲಾಯಿಸಿಕೊಂಡರು.