ಬಿಗ್ ಬಾಸ್ ಮತ್ತೆ ಶುರು... ಕಿಚ್ಚನ ಸ್ಥಾನಕ್ಕೆ ಹೊಸ ನಿರೂಪಕ ಇವರೇ! 2 ರಾಜ್ಯಪ್ರಶಸ್ತಿ ಗೆದ್ದ ಕನ್ನಡದ ಖ್ಯಾತ ನಟನಿಗೆ ಆಫರ್... ಸೀಸನ್‌ ಮುಗಿದ ಒಂದೇ ತಿಂಗಳಲ್ಲಿ ಹೆಸರು ರಿವೀಲ್‌!

Bigg Boss Kannada host after Kiccha sudeep: ಬಿಗ್‌ ಬಾಸ್‌ ಸೀಸನ್‌ ೧೧ ಮುಕ್ತಾಯಗೊಂಡು ಅದಾಗಲೆ ಒಂದು ತಿಂಗಳು ಕಳೆದಿದೆ. ಈ ಸೀಸನ್‌ ಮೂಲಕ ಕಿಚ್ಚ ಸುದೀಪ್‌ ಕೂಡ ತನ್ನ ನಿರೂಪಣೆಯನ್ನು ಕೊನೆಗೊಳಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದರು. ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಹಾಗಾದ್ರೆ ಕಿಚ್ಚನ ಬಳಿಕ ಯಾರಾಗ್ತಾರೆ ಹೋಸ್ಟ್‌ ಎಂಬ ಪ್ರಶ್ನೆ ಮತ್ತು ಚರ್ಚೆ ಎಲ್ಲೆಡೆ ಶುರುವಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /7

ಬಿಗ್‌ ಬಾಸ್‌ ಸೀಸನ್‌ ೧೧ ಮುಕ್ತಾಯಗೊಂಡು ಅದಾಗಲೆ ಒಂದು ತಿಂಗಳು ಕಳೆದಿದೆ. ಈ ಸೀಸನ್‌ ಮೂಲಕ ಕಿಚ್ಚ ಸುದೀಪ್‌ ಕೂಡ ತನ್ನ ನಿರೂಪಣೆಯನ್ನು ಕೊನೆಗೊಳಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದರು. ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಹಾಗಾದ್ರೆ ಕಿಚ್ಚನ ಬಳಿಕ ಯಾರಾಗ್ತಾರೆ ಹೋಸ್ಟ್‌ ಎಂಬ ಪ್ರಶ್ನೆ ಮತ್ತು ಚರ್ಚೆ ಎಲ್ಲೆಡೆ ಶುರುವಾಗಿತ್ತು.  

2 /7

ಇದೀಗ ಸುದ್ದಿಯೊಂದು ಬಹಿರಂಗಗೊಂಡಿದ್ದು, ಅದರ ಪ್ರಕಾರ ರಮೇಶ್‌ ಅರವಿಂದ್‌ ಅವರು ಸೀಸನ್‌ ೧೨ರಿಂದ ಬಿಗ್‌ ಬಾಸ್‌ ಹೋಸ್ಟ್‌ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದಲ್ಲಿ ಕಿಚ್ಚನಂತೆ ಸ್ಪಷ್ಟ ಕನ್ನಡ ಮತ್ತು ದೃಢವಾಗಿ ನಿರೂಪಣೆ ಮಾಡುವ ಗತ್ತು ಇರುವ ನಟರಲ್ಲಿ ರಮೇಶ್‌ ಅರವಿಂದ್‌ ಅವರು ಮೇಲುಗೈ ಸಾಧಿಸುತ್ತಾರೆ.  

3 /7

ಈಗಾಗಲೇ ವೀಕೆಂಡ್‌ ವಿಥ್‌ ರಮೇಶ್‌ನಂತಹ ಯಶಸ್ವಿ ಕಾರ್ಯಕ್ರಮ ನಡೆಸಿಕೊಟ್ಟ ರಮೇಶ್‌ ಅವರಿಗೆ ಬಿಗ್‌ ಬಾಸ್‌ ನಿರೂಪಣೆ ಹೊಸದೆನಿಸಲಿಕ್ಕಿಲ್ಲ. ಇನ್ನೊಂದೆಡೆ ಸಂಭಾವನೆ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ 5 ವರ್ಷಕ್ಕೆ 15 ಕೋಟಿ ಪಡೆದಿದ್ದರು. ಅಂದರೆ ವರ್ಷಕ್ಕೆ 5 ಕೋಟಿ  ಎಂದು ಸುದ್ದಿ ವೈರಲ್‌ ಆಗಿತ್ತು. ಹೀಗಿರುವಾಗ ಇಷ್ಟರ ಮಟ್ಟಿಗೆ ಸಂಭಾವನೆ ಪಡೆಯುವ ಸಾಮರ್ಥ್ಯ ಇರುವುದು ರಮೇಶ್ ಅರವಿಂದ್‌ಗೆ ಮಾತ್ರ ಎಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಪ್ರಾಜೆಕ್ಟ್‌ಗೆ ರಮೇಶ್‌ ಅವರಿಗೆ ಒಪ್ಪಿಗೆ ಕೊಟ್ಟಿದ್ದಾರಾ? ಇಲ್ವಾ? ಎಂಬ ಸ್ಪಷ್ಟನೆ ಇಲ್ಲ.  

4 /7

ಇವರ ಹೊರತಾಗಿ ಕನ್ನಡದ ಹೆಸರಾಂತ ನಟರ ಹೆಸರು ಕೂಡ ಈ ಪಟ್ಟಿಯಲ್ಲಿ ಕೇಳಿಬಂದಿತ್ತು. ರಿಷಬ್‌ ಶೆಟ್ಟಿ, ಡಾ.ಶಿವರಾಜ್‌ ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ರಿಯಲ್‌ ಸ್ಟಾರ್‌ ಉಪೇಂದ್ರ, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೆಸರುಗಳು ಮುನ್ನೆಲೆಗೆ ಬಂದಿದೆ.  

5 /7

ಈ ಎಲ್ಲಾ ನಟರು ಒಂದಲ್ಲ ಒಂದು ವಿಷಯದಲ್ಲಿ ಮೇಲುಗೈ ಸಾಧಿಸುತ್ತಾರೆ. ಉಪೇಂದ್ರ ಅವರು ಖಡಕ್‌ ನುಡಿಗಳಿಂದ ಜನಮನಗೆದ್ದಿದ್ದರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ತಮ್ಮ ಮೃದು ಸ್ವಭಾವ ಮತ್ತು ವಿಶೇಷ ನಿರೂಪಣ ಶೈಲಿಯಿಂದಲೇ ಫೇಮಸ್‌ ಆದವರು. ಇವರಿಗೆ ಈಗಾಗಲೇ ಗೋಲ್ಡನ್‌ ಮಿನಿಟ್‌ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಅನುಭವವಿದೆ. ಹೀಗಿರುವಾಗ ಇವರು ಸಹ ಕಿಚ್ಚನ ಸ್ಥಾನಕ್ಕೆ ಬರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

6 /7

ಇನ್ನು ಕಿಚ್ಚನ ರೀತಿಯೇ ನೇರಾನೇರ ಮಾತನಾಡುವ ಓರ್ವ ನಟ ಅಂದ್ರೆ ಯಶ್.‌ ಇವರು ಸದ್ಯ ಹೈ ಬಜೆಟ್‌ ಮತ್ತು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಹೋಸ್ಟ್‌ ಆಫರ್‌ ಬಂದರೂ ಸಹ ತಿರಸ್ಕರಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ದರ್ಶನ್‌ ಅವರು ಮುಂದೆ ಹೋಸ್ಟ್‌ ಮಾಡಲಿ ಎಂದು ಅವರ ಅಭಿಮಾನಿಗಳು ಇಚ್ಛಿಸುತ್ತಿದ್ದರೂ ಸಹ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸಾಧ್ಯವಾಗುವುದು ಕಷ್ಟ. ಕೊಂಚ ಅನಾರೋಗ್ಯ ಮತ್ತು ಪೊಲೀಸ್‌ ತನಿಖೆಯಲ್ಲಿ ಸಹಕರಿಸುವ ಹಿನ್ನೆಲೆಯಲ್ಲಿ ಅವರೂ ಸಹ ಈ ಆಫರ್‌ನ್ನು ರಿಜೆಕ್ಟ್‌ ಮಾಡಬಹುದು.  

7 /7

ಇವರೆಲ್ಲರ ಹೊರತಾಗಿ, ರಿಷಬ್‌ ಶೆಟ್ಟಿ ಹೆಸರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.  ಕಾಂತಾರ ಸಿನಿಮಾದ ಬಳಿಕ ಸಿಕ್ಕಾಪಟ್ಟೆ ಹೆಸರು ಮಾಡಿರುವ ರಿಷಬ್ ಅವರಿಗೆ ಬಿಗ್‌ ಬಾಸ್‌ ಅದಾಗಲೇ ಆಫರ್‌ ನೀಡಿದೆ ಎನ್ನಲಾಗುತ್ತಿದೆ. ಆದರೆ ಕಾಂತಾರ 2 ಶೂಟಿಂಗ್‌ ಇರುವ ಕಾರಣ ಈ ಆಫರ್‌ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.