ಕಡು ಬಡತನದಲ್ಲಿಯೇ ಹುಟ್ಟಿದ್ದರೂ 40 ವರ್ಷವಾಗುತ್ತಿದ್ದಂತೆಯೇ ಆಗರ್ಭ ಶ್ರೀಮಂತರಾಗಿ ಬಿಡುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು !ಶನಿದೇವನ ಕೃಪೆಯೇ ಇವರಿಗೆ ಶ್ರೀ ರಕ್ಷೆ

Written ByRanjitha R KUpdated byRanjitha R K
Published: Jun 26, 2025, 05:36 PM IST|Updated: Jun 26, 2025, 05:36 PM IST

ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಗೂ ಅಧಿಪತಿ ಗ್ರಹವಿದೆ. 1 ರಿಂದ 9 ರವರೆಗಿನ ಸಂಖ್ಯೆಗಳು ಅಧಿಪತಿ ಗ್ರಹಗಳನ್ನು ಹೊಂದಿವೆ.ಶನಿದೇವ ಆಳುವ ಗ್ರಹವಾಗಿರುವ  ಈ ಸಂಖ್ಯೆಯಲ್ಲಿ ಜನಿಸಿದವರು 40 ವರ್ಷ ವಯಸ್ಸಿನ ನಂತರ ಕೋಟ್ಯಾಧಿಪತಿಗಳಾಗುತ್ತಾರೆ.   

Lucky date of birth 1/6

ಶನಿದೇವ ಮೂಲಾಂಕ 8 ರ ಅಧಿಪತಿ. ಆದ್ದರಿಂದ, ಮೂಲಾಂಕ  8 ಹೊಂದಿರುವವರ ಮೇಲೆ ಶನಿದೇವನ ವಿಶೇಷ ಪ್ರಭಾವ ಇರುತ್ತದೆ. 

Lucky date of birth 2/6

ಯಾವುದೇ ತಿಂಗಳ 8, 17 ಅಥವಾ 26 ನೇ ತಾರೀಖಿನಂದು ಜನಿಸಿದವರ ಮೂಲಾಂಕ 8 ಆಗಿರುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ಶನಿದೇವರ  ಕೃಪೆಯಿಂದ ಶ್ರೀಮಂತರಾಗುವುದಲ್ಲದೆ, ಸಮಾಜದಲ್ಲಿ ಬಹಳಷ್ಟು ಗೌರವವನ್ನು ಪಡೆಯುತ್ತಾರೆ. 

Lucky date of birth 3/6

ಶನಿದೇವರು ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯ ಅಂಶವಾಗಿರುವುದರಿಂದ, ಮೂಲಾಂಕ 8 ಇರುವವರು ಆರಂಭಿಕ ಜೀವನದಲ್ಲಿ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಆದರೆ ಮುಂದೆ ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಉನ್ನತ ಸ್ಥಾನಕ್ಕೆ ಏರುವರು.     

Lucky date of birth 4/6

ಸಾಮಾನ್ಯವಾಗಿ, 8 ಮೂಲಾಂಕ ಹೊಂದಿರುವವರು 40 ವರ್ಷ ವಯಸ್ಸಿನ  ನಂತರ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಇವರು ಬಡ ಕುಟುಂಬದಲ್ಲಿ ಜನಿಸಿದರೂ ಕಾಲಾನಂತರದಲ್ಲಿ ಆರ್ಥಿಕವಾಗಿ ಬಲಶಾಲಿಯಾಗುತ್ತಾರೆ. ವಯಸ್ಸು 40 ಆಗುತ್ತಿದ್ದ ಹಾಗೆಯೇ ಅವರು ಬಹಳಷ್ಟು ಸಂಪತ್ತು ಮತ್ತು ಆಸ್ತಿಯ ಮಾಲೀಕರಾಗುತ್ತಾರೆ ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. 

Lucky date of birth 5/6

ಮೂಲಾಂಕ 8 ಇರುವವರು ತಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಶುಕ್ರವಾರ ಮತ್ತು ಶನಿವಾರ ಮೂಲಾಂಕ 8 ಇರುವವರಿಗೆ ಶುಭ ದಿನವಾಗಿರುತ್ತದೆ. 

Lucky date of birth 6/6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.