ಹಾರ್ಟ್ ಅಟ್ಯಾಕ್ ಇದ್ದಕ್ಕಿದ್ದಂತೆ ಆಗುವುದಿಲ್ಲ!ಈ ಸೂಚನೆಗಳನ್ನು ನೀಡಿಯೇ ಬರುವುದು ಹೃದಯಾಘಾತ !ನಾವು ಎಚ್ಚೆತ್ತುಕೊಳ್ಳಬೇಕು ಅಷ್ಟೇ

Written ByRanjitha R KUpdated byRanjitha R K
Published: Jun 28, 2025, 12:28 PM IST|Updated: Jun 28, 2025, 12:28 PM IST

ಹೃದಯಾಘಾತ ಎನ್ನುವುದು ಇದ್ದಕ್ಕಿದ್ದಂತೆ ಬರುವುದಿಲ್ಲ. ಇದು ಬರುವ ಮುನ್ನ ದೇಹ ನಮಗೆ ಮುನ್ಸೂಚನೆ ನೀಡುತ್ತದೆ. 

Heart attack Symptoms1/9

ಹೃದಯಾಘಾತ ಎನ್ನುವುದು ಇದ್ದಕ್ಕಿದ್ದಂತೆ ಬರುವುದಿಲ್ಲ. ಇದು ಬರುವ ಮುನ್ನ ದೇಹ ನಮಗೆ ಮುನ್ಸೂಚನೆ ನೀಡುತ್ತದೆ. ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಮುನ್ನೆಚ್ಚರಿಕೆ ವಹಿಸುವ ಮೂಲಕ, ಜೀವ ಉಳಿಸಬಹುದು.   

Heart attack Symptoms2/9

ಅತಿಯಾದ ಆಯಾಸ : ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಸಹಜವಾಗಿ ದಣಿದಿದ್ದರೆ, ಹೃದಯಾಘಾತದ ಆರಂಭಿಕ ಸಂಕೇತವಾಗಿರಬಹುದು. ಈ ಲಕ್ಷಣವು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಮಾಡುವಾಗಲೂ ಮಿತಿ ಮೀರಿದ ಆಯಾಸವಾಗುವುದು ಹೃದಯ ದೌರ್ಬಲ್ಯದ ಸಂಕೇತವಾಗಿರಬಹುದು.

Heart attack Symptoms3/9

ಉಸಿರಾಟದ ತೊಂದರೆ : ಯಾವುದೇ ದೈಹಿಕ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಎದುರಾದರೆ ಅದನ್ನು ಲಘುವಾಗಿ ಪರಿಗಣಿಸಬಾರದು. ಹೃದಯಕ್ಕೆ ಆಮ್ಲಜನಕದ ಪೂರೈಕೆಯ ಕೊರತೆಯಾದಾಗ ಹೀಗಾಗುತ್ತದೆ. 

Heart attack Symptoms4/9

ಎದೆ ನೋವು : ಎದೆಯಲ್ಲಿ ನೋವು, ಭಾರ ಅಥವಾ ಒತ್ತಡದಂತೆ ಎದುರಾಗುವುದು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಈ ನೋವು ಕೆಲವು ನಿಮಿಷಗಳ ಕಾಲ ಎದುರಾಗುವುದರ ಜೊತೆಗೆ ಪದೇ ಪದೇ ಕಾಣಿಸಿಕೊಳ್ಳಬಹುದು.ಕೆಲವೊಮ್ಮೆ ನೋವು ಭುಜ, ತೋಳು, ಕುತ್ತಿಗೆ  ಅಥವಾ ದವಡೆಗೂ ಹರಡಬಹುದು.

Heart attack Symptoms5/9

ನಿದ್ರೆ ಬಾರದಿರುವುದು : ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬಾರದಿರುವುದು, ಪದೇ ಪದೇ ಎಚ್ಚರವಾಗುವುದು, ಉಸಿರಾಟದ ತೊಂದರೆ ಎದುರಾಗುವುದು ಹೃದಯ ಸಮಸ್ಯೆಗಳ ಸಂಕೇತವಾಗಿರಬಹುದು. 

Heart attack Symptoms6/9

ವಾಕರಿಕೆ :ಕೆಲವರು, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ  ಹೃದಯಾಘಾತವಾಗುವ ಮೊದಲು ವಾಕರಿಕೆ ಅಥವಾ ವಾಂತಿ ಕಾಣಿಸಿಕೊಳ್ಳಬಹುದು. ಇದನ್ನು ಹೆಚ್ಚಾಗಿ ಸಾಮಾನ್ಯ ಎಂದು ಬಹುತೇಕ ಮಂದಿ ನಿರ್ಲಕ್ಷಿಸಿ ಬಿಡುತ್ತಾರೆ. 

Heart attack Symptoms7/9

ತಲೆ ಸುತ್ತುವುದು : ಹಠಾತ್ ತಲೆತಿರುಗುವಿಕೆ ಅಥವಾ ಲಘು ತಲೆತಿರುಗುವಿಕೆ ಹೃದಯಾಘಾತದ ಸಂಕೇತವಾಗಿರಬಹುದು. ಹೃದಯವು ಮೆದುಳಿಗೆ ಸರಿಯಾದ ಪ್ರಮಾಣದ ರಕ್ತವನ್ನು ಪೂರೈಸಲು ಸಾಧ್ಯವಾಗದಿದ್ದಾಗ ಹೀಗಾಗುತ್ತದೆ. 

Heart attack Symptoms8/9

ಬೆವರುವುದು : ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ, ವಿಶೇಷವಾಗಿ ಎದೆ ನೋವಿನಿಂದಾಗಿ ಬೆವರು ಬರುತ್ತಿದ್ದರೆ ಅದು ಹೃದಯಾಘಾತದ ಗಂಭೀರ ಲಕ್ಷಣವಾಗಿರಬಹುದು.  

Heart attack Symptoms9/9

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.