Maruti Suzuki Price Hike: ಈ ದಿನದಿಂದ ದುಬಾರಿಯಾಗಲಿದೆ Maruti Suzuki ಕಾರುಗಳು

Tue, 22 Jun 2021-12:45 pm,

ಇದರೊಂದಿಗೆ ಈ ವರ್ಷದಲ್ಲಿ ಮಾರುತಿ ಕಾರುಗಳ ಬೆಲೆ ಮೂರನೇ ಬಾರಿಗೆ ಏರಿಕೆ ಕಂಡತಾಗುತ್ತದೆ.  ಈ ಮೊದಲು ಜನವರಿ 2021 ಮತ್ತು ಏಪ್ರಿಲ್ 2021 ರಲ್ಲೂ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಈಗ ಮತ್ತೆ ಜುಲೈನಲ್ಲಿ ಎಲ್ಲಾ ಮಾದರಿಗಳ ಕಾರುಗಳ ಬೆಲೆಗಳು ಏರಿಕೆಯಾಗಲಿವೆ. ಆದರೆ, ಬೆಲೆ ಎಷ್ಟು ಏರಿಕೆಯಾಗಲಿದೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.    

ಕಳೆದ ಒಂದು ವರ್ಷದಲ್ಲಿ ವಿಭಿನ್ನ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ, ಕಂಪನಿಯ ವಾಹನಗಳ ವೆಚ್ಚದ  ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕಂನಿ Regulatory Filingನಲ್ಲಿ ತಿಳಿಸಿದೆ.  ಬೆಲೆ ಏರಿಕೆಯ ಮೂಲಕ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸುವ ತೀರ್ಮಾನಕ್ಕೆ ಕಂಪನಿ ಬಂದಿದೆ.   

ಇದಕ್ಕೂ ಮುನ್ನ, ಜನವರಿ ಮತ್ತು ಏಪ್ರಿಲ್‌ನಲ್ಲಿ ಮಾರುತಿ ತನ್ನ ಅನೇಕ ಕಾರುಗಳ ಬೆಲೆಯನ್ನು ಹೆಚ್ಚಿಸಿತ್ತು. ಜನವರಿಯಲ್ಲೂ, ಮಾರುತಿ ಕೆಲವು ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿತ್ತು, ನಂತರ ಏಪ್ರಿಲ್‌ನಲ್ಲಿ ಸಹ ಅನೇಕ ಮಾದರಿಗಳ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆ ಸಂದರ್ಭಗಳಲ್ಲಿ ಮಾದರಿ ಮತ್ತು ಶ್ರೇಣಿಯನ್ನು ಅವಲಂಬಿಸಿ  ಸುಮಾರು 34,000 ರೂ.ಗಳವರೆಗೆ ಕಾರು ದುಬಾರಿಯಾಗಿತ್ತು. 

ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಿರುವ ಪರಿಣಾಮ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಕಂಪನಿಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯ ಉತ್ಪಾದನಾ ವೆಚ್ಚ ಹೆಚ್ಚಾಗಿದೆ, ಈ ಕಾರಣದಿಂದಾಗಿ ಕಂಪನಿಯು ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.  

ಮಾರುತಿ, ಟೊಯೋಟಾದ ಹೊರತಾಗಿ, ನಿಸ್ಸಾನ್ ಕೂಡ ಏಪ್ರಿಲ್‌ನಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಕಂಪನಿಯು ತನ್ನ ಸಂಪೂರ್ಣ ಉತ್ಪಾದನಾ ಸರಣಿಯ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ನಿಸ್ಸಾನ್ ಹೇಳಿದೆ. ನಿಸ್ಸಾನ್ ಮತ್ತು ದಟ್ಸನ್ ಅವರ ಎಲ್ಲಾ ಮಾದರಿಗಳ ಬೆಲೆಗಳನ್ನು ಏಪ್ರಿಲ್ 1, 2021 ರಿಂದ ಹೆಚ್ಚಿಸಿತ್ತು. ಮಾರುತಿಯ ನಂತರ, ಈಗ ಇತರ ಕಾರು ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link