ಗಂಡ ತಾನು ಮಾಡುವ ರೊಮ್ಯಾನ್ಸ್ ಹೆಂಡತಿಗೆ ಇಷ್ಟವಾಗಿದೆಯಾ ಅಥವಾ ಇಲ್ಲವಾ ಅನ್ನೋದನ್ನ ತಿಳಿಯುವುದು ಹೇಗೆ? ನೇರವಾಗಿ ಕೇಳದೆ ತಿಳಿದುಕೊಳ್ಳುವ ಬೇರೆ ಯಾವುದಾದರೂ ವಿಧಾನ ಇದೆಯಾ? ಇದಕ್ಕೆ ಏನು ಉತ್ತರ? ಏನು ಮಾಡಿದರೆ ತಿಳಿದುಕೊಳ್ಳಬಹುದು? ಈ ಕುರಿತು ಕೆಲವು ಮಾಹಿತಿ ಇಲ್ಲಿದೆ ನೋಡಿ...
Relationship Tips: ರೊಮ್ಯಾನ್ಸ್ ವಿಷಯದಲ್ಲಿ ಪುರುಷರನ್ನ ಕಾಡುವ ದೊಡ್ಡ ಅನುಮಾನ ಏನಪ್ಪಾ ಅಂದರೆ ತಮ್ಮ ಹೆಂಡತಿ ಅದನ್ನು ಎಂಜಾಯ್ ಮಾಡುತ್ತಿದ್ದಾರಾ ಅನ್ನೋದು. ತಾವು ಮಾಡುವ ರೊಮ್ಯಾನ್ಸ್ ಪತ್ನಿಗೆ ಇಷ್ಟವಾಗುತ್ತಿದ್ಯಾ? ನಿಜಕ್ಕೂ ಅವರು ಅದನ್ನ ಇಷ್ಟಪಡುತ್ತಿದ್ದಾರಾ ಅನ್ನುವುದೇ ಅನೇಕ ಪುರುಷರಿಗೆ ಗೊಂದಲ ಉಂಟಾಗಿರುತ್ತದೆ. ಈ ಗೊಂದಲ ಬಹುತೇಕರಲ್ಲಿ ಹಾಗೆಯೇ ಉಳಿಯುತ್ತದೆ. ಕಮ್ಯುನಿಕೇಷನ್ ಕೊರತೆ ಅಥವಾ ರೊಮ್ಯಾನ್ಸ್, ಲೈಂಗಿಕ ಇಷ್ಟ ಕಷ್ಟಗಳ ಬಗ್ಗೆ ಮುಕ್ತವಾಗಿ ಮಾತನಾಡದೆ ಇರುವುದರಿಂದ ತಮ್ಮ ರೊಮ್ಯಾನ್ಸ್ ಸಂಗಾತಿಗೆ ಇಷ್ಟವಾಗುತ್ತದೋ ಇಲ್ಲವೋ ಅನ್ನೋ ಗೊಂದಲ ಇರುತ್ತದೆ. ಬೆಡ್ ಮೇಲಿನ ನಿಮ್ಮ ರೊಮ್ಯಾನ್ಸ್ ಹೆಂಡ್ತಿಗೆ ಇಷ್ಟ ಆಗಿದ್ಯಾ ಅಥವಾ ಇಲ್ವಾ ಅಂತಾ ತಿಳಿಯುವುದು ಹೇಗೆಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಹಲವು ಸಲ ಪತ್ನಿ ಬಾಯ್ಬಿಟ್ಟು ಅವರ ಇಷ್ಟ-ಕಷ್ಟಗಳ ಬಗ್ಗೆ ನಿಮಗೆ ಹೇಳದಿರಬಹುದು. ಅದೇ ರೀತಿ ಗಂಡನೂ ಹೆಂಡತಿ ಕೇಳದೆಯೂ ಇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರೊಮ್ಯಾನ್ಸ್ ವೇಳೆ ಇಬ್ಬರೂ ಮೌನದ ಮೊರೆ ಹೋಗಿ ಆ ಕ್ಷಣವನ್ನ ಎಂಜಾಯ್ ಮಾಡುವುದರಲ್ಲಿ ಬ್ಯುಸಿಯಾಗಬಹುದು. ಆದರೆ ಈ ವೇಳೆ ಗಂಡ ತಾನು ಮಾಡುವ ರೊಮ್ಯಾನ್ಸ್ ಹೆಂಡತಿಗೆ ಇಷ್ಟವಾಗಿದೆಯಾ ಅಥವಾ ಇಲ್ಲವಾ? ಅನ್ನೋದನ್ನ ತಿಳಿಯುವುದು ಹೇಗೆ? ನೇರವಾಗಿ ಕೇಳದೆ ತಿಳಿದುಕೊಳ್ಳುವ ಬೇರೆ ಯಾವುದಾದರೂ ವಿಧಾನ ಇದೆಯಾ? ಇದಕ್ಕೆ ಏನು ಉತ್ತರ? ಏನು ಮಾಡಿದರೆ ತಿಳಿದುಕೊಳ್ಳಬಹುದು? ಈ ಕುರಿತು ಕೆಲವು ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಸಂಗಾತಿಯನ್ನು ಗಮನಿಸುವುದು ತುಂಬಾ ಮುಖ್ಯ. ನಿಮ್ಮ ಪತ್ನಿಯ ಮುಖವನ್ನು ಮತ್ತು ದೇಹದ ರಿಯಾಕ್ಷನ್ಗಳನ್ನು ಗಮನಿಸಬೇಕು. ಆಗ ಅವರು ನಿಮ್ಮ ರೊಮ್ಯಾನ್ಸ್ ಎಂಜಾಯ್ ಮಾಡುತ್ತಿದ್ದರೆ ಅದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಇಲ್ಲದಿದ್ದರೆ ಅದೂ ನಿಮಗೆ ಗೊತ್ತಾಗುತ್ತದೆ. ಅವರ ಇಷ್ಟ-ಕಷ್ಟಗಳನ್ನ ಅರಿತು ರೊಮ್ಯಾನ್ಸ್ ಮಾಡುವುದು ಉತ್ತಮ. ಇಷ್ಟವಿಲ್ಲದ ರೊಮ್ಯಾನ್ಸ್ ಯಾವುದೇ ಕಾರಣಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ.
ನೀವು ರೊಮ್ಯಾನ್ಸ್ ಮಾಡುವಾಗ ನಿಮ್ಮ ಪತ್ನಿಯನ್ನ ಸೂಕ್ಷ್ಮವಾಗಿ ಗಮನಿಸಬೇಕು. ಅವರ ದೇಹದಲ್ಲಿ ಮತ್ತು ಮುಖದಲ್ಲಿ ಆಗುವ ಬದಲಾವಣೆಗಳು ಹಾಗೂ ಎಕ್ಸೈಟ್ಮೆಂಟ್ಗಳು... ಅವರು ಯಾವಾಗ ಡಲ್ ಆಗುತ್ತಾರೆ ಅನ್ನೋದನ್ನೂ ಗಮನಿಸಬೇಕು. ಅವರು ಎಕ್ಸೈಟ್ ಆಗುವಾಗ ನೀವು ಮಾಡುತ್ತಿರುವ ರೊಮ್ಯಾನ್ಸ್ ಸರಿಯಾಗಿದೆ ಎಂದರ್ಥ. ಇದಕ್ಕೆ ಸರಿಯಾದ ಕಮ್ಯುನಿಕೇಷನ್ ಒಂದೇ ಪರಿಹಾರ. ಮೇಲೆ ಹೇಳಿದ ವಿಧಾನಗಳ ಮೂಲಕ ಪತ್ನಿ ನಿಮ್ಮ ರೊಮ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರಾ ಅಥವಾ ಇಲ್ಲವಾ ಎಂಬುದನ್ನ ತಿಳಿಯಬಹುದು.
ನೀವು ನಿಮ್ಮ ಪತ್ನಿಯ ಪೂರ್ತಿ ದೇಹಕ್ಕೆ ಕಿಸ್ ಮಾಡಬಹುದು. ಈ ರೀತಿ ರೊಮ್ಯಾನ್ಸ್ ಮಾಡುವಾಗ ಅವರು ಯಾವಾಗ ಕಣ್ಣನ್ನು ಅರೆಮುಚ್ಚುತ್ತಾರೋ, ಅರ್ಧ ಕಣ್ಣನ್ನು ಮುಚ್ಚುತ್ತಾರೋ ಅಥವಾ ವಾಸ್ತವತೆ ಇಲ್ಲದೆ ಬೇರೆಯದೇ ಲೋಕದಲ್ಲಿರುವಂತೆ ಕಾಣಿಸುತ್ತಾರೋ ಅದು ಅವರ ಎಕ್ಸೈಟ್ ಪಾಯಿಂಟ್ ಅನ್ನೋದನ್ನ ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು.
ಇದನ್ನ ಹೊರತುಪಡಿಸಿ ನಿಮ್ಮ ಪತ್ನಿಯಲ್ಲಿ ನೀವು ಮುಕ್ತವಾಗಿ ಮಾತನಾಡಿಯೂ ಕೇಳಬಹುದು. ಯಾವ ರೀತಿಯ ರೊಮ್ಯಾನ್ಸ್ ಅಥವಾ ಯಾವ ಸ್ಟೈಲ್ ಅವರಿಗೆ ಇಷ್ಟವಾಗಿದೆ? ಯಾವುದನ್ನು ಅವರು ಹೆಚ್ಚು ಎಂಜಾಯ್ ಮಾಡುತ್ತಾರೆ ಮುಂತಾದ ಪ್ರಶ್ನೆಗಳನ್ನ ನೀವು ಪ್ರೀತಿಯಿಂದ ಕೇಳಿ ತಿಳಿದುಕೊಳ್ಳಬಹುದು. ಮುಕ್ತವಾಗಿ ಮಾತನಾಡುವ ಮೂಲಕ ಈ ಗೊಂದಲವನ್ನ ಪರಿಹರಿಸಿಕೊಳ್ಳಬಹುದು. ಇದು ಪತ್ನಿಗೂ ಸಹ ಅನ್ವಯಿಸುತ್ತದೆ. ತನ್ನ ಪತಿಗೆ ಇಷ್ಟವಾಗುವುದನ್ನ ಕೇಳಿ ತಿಳಿದುಕೊಂಡು ರೊಮ್ಯಾನ್ಸ್ ಅನ್ನ ಎಂಜಾಯ್ ಮಾಡಬಹುದು. ಹೀಗೆ ಮಾಡಿದಾಗ ಮಾತ್ರ ನಿಮ್ಮ ಜೀವನ ಸುಖಮಯವಾಗಿರುತ್ತದೆ. (ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)