ಮೀನ ರಾಶಿಯಲ್ಲಿ ಬುಧ ಉದಯ: ಈ ಐದು ರಾಶಿಯ ಜನರ ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಪ್ರಗತಿ!!

Mercury Rise 2025: ಬುಧ ಗ್ರಹದ ಉದಯವು ಅನೇಕ ರಾಶಿಯ ಜನರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ವಾಸ್ತವವಾಗಿ ಬುಧ ಗ್ರಹವು ಬುದ್ಧಿವಂತಿಕೆ, ಸಂವಹನ, ವ್ಯವಹಾರ, ತರ್ಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳ ಅಂಶವಾಗಿದೆ.

Mercury Rise 2025: ಬುಧ ಗ್ರಹವನ್ನು ಗ್ರಹಗಳ ರಾಜನೆಂದು ಕರೆಯಲಾಗುತ್ತದೆ. ಬುಧ ಗ್ರಹವು ತನ್ನ ಚಲನೆಯನ್ನು ಬದಲಾಯಿಸಿದಾಗಲೆಲ್ಲಾ ಅದು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವರಿಗೆ ಇದು ತುಂಬಾ ಒಳ್ಳೆಯದು, ಇನ್ನು ಕೆಲವರಿಗೆ ಇದು ಸ್ವಲ್ಪ ಕೆಟ್ಟದಾಗಿರುತ್ತದೆ. ಬುಧ ಗ್ರಹವು ಪ್ರಸ್ತುತ ಮೀನ ರಾಶಿಯಲ್ಲಿದೆ. ಅದು ಏಪ್ರಿಲ್ 7ರ ಸಂಜೆ 4.36ಕ್ಕೆ ಈ ರಾಶಿಯಲ್ಲಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತದೆ. ಬುಧ ಗ್ರಹ ಮರುದಿನ ಅಂದರೆ ಏಪ್ರಿಲ್ 8ರ ಬೆಳಗ್ಗೆ 5.04ಕ್ಕೆ ಉದಯಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /7

ಬುಧ ಗ್ರಹದ ಉದಯವು ಅನೇಕ ರಾಶಿಯ ಜನರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ವಾಸ್ತವವಾಗಿ ಬುಧ ಗ್ರಹವು ಬುದ್ಧಿವಂತಿಕೆ, ಸಂವಹನ, ವ್ಯವಹಾರ, ತರ್ಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳ ಅಂಶವಾಗಿದೆ. ಅದು ಮೀನ ರಾಶಿಯಲ್ಲಿ ಉತ್ತಮ ಸ್ಥಾನದಲ್ಲಿಲ್ಲ. ಆದರೂ ಸಹ ಅದು ಉದಯಿಸಿದಾಗ ಪರಿಣಾಮ ಉತ್ತಮವಾಗಿರುತ್ತದೆ. ಬುಧ ಗ್ರಹದ ಉದಯದಿಂದ ಯಾವ ರಾಶಿಯವರಿಗೆ ಲಾಭವಾಗುತ್ತದೆ ಎಂದು ತಿಳಿಯಿರಿ...

2 /7

ಮೀನ ರಾಶಿಯಲ್ಲಿ ಬುಧ ಉದಯವು ವೃಷಭ ರಾಶಿಯ 11ನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಈ ರಾಶಿಯ ಜನರ ಆದಾಯ ಹೆಚ್ಚಾಗಲಿದೆ. ಹೊಸ ಹಣದ ಮೂಲಗಳು ಸೃಷ್ಟಿಯಾಗುತ್ತವೆ. ನೀವು ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.

3 /7

ಮೀನ ರಾಶಿಯಲ್ಲಿ ಬುಧ ಉದಯವು ಕರ್ಕಾಟಕ ರಾಶಿಯ 9ನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅದೃಷ್ಟ ನಿಮ್ಮ ಕಡೆ ಇರುತ್ತದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ನೀವು ಹೊಸ ಸಾಧ್ಯತೆಗಳನ್ನ ನೋಡುತ್ತೀರಿ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಅದೃಷ್ಟದ ಬೆಂಬಲದಿಂದ ನೀವು ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಕಾಣುತ್ತೀರಿ.

4 /7

ಮೀನ ರಾಶಿಯಲ್ಲಿ ಬುಧ ಉದಯವು ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ನಡೆಯುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ಅಥವಾ ಯಾವುದೇ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಪ್ರೇಮ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ. ನಿಮ್ಮ ಎಲ್ಲಾ ರೀತಿಯ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಮಕ್ಕಳಿಂದಲೂ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ.

5 /7

ಮೀನ ರಾಶಿಯಲ್ಲಿ ಬುಧ ಉದಯವು ಮಕರ ರಾಶಿಯವರ ಮೂರನೇ ಮನೆಯಲ್ಲಿ ಕಂಡುಬರುತ್ತದೆ. ಇದರಿಂದ ಮಕರ ರಾಶಿಯವರ ಸಂವಹನ ಕೌಶಲ್ಯಗಳು ಸುಧಾರಿಸುತ್ತವೆ. ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ವ್ಯಾಪಾರ, ಮಾರಾಟ, ಮಾರ್ಕೆಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಇದು ಉತ್ತಮ ಸಮಯ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.

6 /7

ಮೀನ ರಾಶಿಯಲ್ಲಿ ಬುಧ ಉದಯದಿಂದ ನಿಮ್ಮ ಆಲೋಚನಾ ಶಕ್ತಿ ಮತ್ತು ಗ್ರಹಿಕಾ ಶಕ್ತಿ ಸುಧಾರಿಸುತ್ತದೆ. ಇದರೊಂದಿಗೆ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬಲಗೊಳ್ಳುತ್ತದೆ. ನಿಮಗೆ ಹೊಸ ಹೊಸ ಅವಕಾಶಗಳು ಸಿಗಬಹುದು. ಈ ಸಮಯವು ಮಾಧ್ಯಮ, ಸೃಜನಶೀಲ ಕ್ಷೇತ್ರಗಳು ಮತ್ತು ಆಧ್ಯಾತ್ಮಿಕತೆಯ ಜನರಿಗೆ ಹೊಸ ಅವಕಾಶಗಳನ್ನ ತರುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ.

7 /7

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)