Budh Gochar: ವೈದಿಕ ಜ್ಯೋತಿಷ್ಯದ ಪ್ರಕಾರ, ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ ಬುದ್ದಿ, ತರ್ಕಕಾರಕನಾದ ಬುಧ ಮಂಗಳನ ರಾಶಿಗೆ ಪ್ರವೇಶ ಮಾಡುತ್ತಾನೆ. ಇದರೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಯುಗ ಆರಂಭವಾಗಲಿದೆ.
1/6ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಡಿಸೆಂಬರ್ 06 ರಂದು ಬುದ್ದಿ, ವ್ಯಾಪಾರ-ವ್ಯವಹಾರದ ಅಂಶನಾದ ಬುಧ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ. ಮಂಗಳನ ಅಧಿಪತ್ಯದ ವೃಶ್ಚಿಕ ರಾಶಿಗೆ ಬುಧ ಪ್ರವೇಶವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
2/6ಮಿಥುನ ರಾಶಿಯ ಅಧಿಪತಿ ಗ್ರಹವಾಗಿರುವ ಬುಧ ಮಂಗಳನ ರಾಶಿಗೆ ಪ್ರವೇಶಿಸುವುದರಿಂದ ಈ ರಾಶಿಯವರ ಜೀವನದಲ್ಲಿ ಹಿಂದೆ ಸ್ಥಗಿತಗೊಂಡಿರುವ ಕೆಲಸಗಳಲ್ಲಿ ಅಡೆತಡೆಗಳನ್ನು ನಿವಾರಿಸಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯವಹಾರದಲ್ಲಿ ಭಾರೀ ಆದಾಯವನ್ನು ತರಲಿದೆ.
3/6ಬುಧ ಸಂಚಾರವು ಈ ರಾಶಿಯವರಿಗೆ ಹೂಡಿಕೆಯಿಂದ ಭರ್ಜರಿ ಲಾಭವನ್ನು ತರಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಬಹುದು. ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.
4/6ಸ್ವ ರಾಶಿಯಲ್ಲಿ ಬುಧನ ಪ್ರವೇಶವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ವೇಳೆ ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಹಿಂದಿನ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಹೊಸ ಮನೆ, ಕನಸಿನ ವಾಹನ ಖರೀದಿಸುವ ಸಂಭವವಿದೆ.
5/6ಬುಧ ಸಂಚಾರವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲಿದೆ. ಹೊಸ ಯೋಜನೆಗಳು ಭರ್ಜರಿ ಲಾಭವನ್ನು ತಂದು ಕೊಡಲಿವೆ. ಹೊಸ ಆದಾಯದ ಮೂಲಗಳು ಹೊರಹೊಮ್ಮಲಿದ್ದು ಸಾಲಭಾದೆಯಿಂದ ಹೊರಬರುವಿರಿ. ವ್ಯವಹಾರಸ್ಥರಿಗೆ ಅದೃಷ್ಟದ ಸಮಯ.
6/6ವೃಶ್ಚಿಕ ರಾಶಿಯಲ್ಲಿ ಬುಧ ಗೋಚಾರಫಲವು ಈ ರಾಶಿಯವರಿಗೆ ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶವನ್ನು ನೀಡಲಿದೆ. ಪ್ರಮುಖ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.