Mercury Venus Conjunction 2025: ಬುಧ ಗ್ರಹ ಮೇ 7ರ ಬುಧವಾರ ಬೆಳಗ್ಗೆ 4.13ಕ್ಕೆ ಮೇಷ ರಾಶಿಗೆ ಸಾಗಿದರೆ, ಶುಕ್ರ ಗ್ರಹವು ಮೇ 31ರ ಶನಿವಾರ ಬೆಳಗ್ಗೆ 11.42ಕ್ಕೆ ಮೇಷ ರಾಶಿಯಲ್ಲಿ ಸಾಗಲಿದೆ. ಹಾಗಾದ್ರೆ ಯಾವ ರಾಶಿಗಳಿಗೆ ಬುಧ-ಶುಕ್ರ ಸಂಯೋಗವು ಪ್ರಯೋಜನಕಾರಿ?
Mercury Venus Conjunction 2025: ಶುಕ್ರ ಮತ್ತು ಬುಧ ಮೀನ ರಾಶಿಯನ್ನ ಬಿಟ್ಟು ಮೇಷ ರಾಶಿಗೆ ಪ್ರವೇಶಿಸಲಿವೆ. ಆದರೆ ಈ ಎರಡೂ ಗ್ರಹಗಳ ರಾಶಿಯ ಬದಲಾವಣೆಯ ಸಮಯ ಮತ್ತು ದಿನ ವಿಭಿನ್ನವಾಗಿದೆ. ಬುಧ ಗ್ರಹ ಮೇ 7ರ ಬುಧವಾರ ಬೆಳಗ್ಗೆ 4.13ಕ್ಕೆ ಮೇಷ ರಾಶಿಗೆ ಸಾಗಿದರೆ, ಶುಕ್ರ ಗ್ರಹವು ಮೇ 31ರ ಶನಿವಾರ ಬೆಳಗ್ಗೆ 11.42ಕ್ಕೆ ಮೇಷ ರಾಶಿಯಲ್ಲಿ ಸಾಗಲಿದೆ. ಹಾಗಾದ್ರೆ ಯಾವ ರಾಶಿಗಳಿಗೆ ಬುಧ-ಶುಕ್ರ ಸಂಯೋಗವು ಪ್ರಯೋಜನಕಾರಿ ಎಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ವೃಷಭ ರಾಶಿಯವರಿಗೆ ಶುಕ್ರ ಮತ್ತು ಬುಧರ ಸಂಯೋಗದಿಂದ ವಿಶೇಷ ಪ್ರಯೋಜನ ದೊರೆಯಲಿದೆ. ಸಂಬಂಧಗಳು ಮೊದಲಿಗಿಂತಲೂ ಉತ್ತಮವಾಗುತ್ತವೆ. ಪ್ರೇಮ ವ್ಯವಹಾರಗಳಲ್ಲಿ ನೀವು ಯಶಸ್ಸನ್ನು ಪಡೆಯುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗುತ್ತದೆ. ಕೆಲಸದಲ್ಲಿ ನೀವು ಯಶಸ್ಸು ಸಾಧಿಸುವಿರಿ. ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಹೊಸ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಮತ್ತು ಪ್ರತಿಷ್ಠೆ ದೊರೆಯಲಿದೆ. ದಾಂಪತ್ಯದಲ್ಲಿದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.
ಮಿಥುನ ರಾಶಿಯ ಜನರಿಗೆ ಶುಕ್ರ ಮತ್ತು ಬುಧರ ಸಂಯೋಗವು ಫಲಪ್ರದವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಕಡೆಗೆ ಆಕರ್ಷಣೆ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿವೆ. ವಿದೇಶಕ್ಕೆ ಹೋಗುವ ಬಗ್ಗೆ ಪ್ಲ್ಯಾನ್ ಮಾಡುತ್ತೀರಿ. ಉದ್ಯೋಗದಲ್ಲಿರುವವರಿಗೆ ದೊಡ್ಡ ಸವಾಲು ಎದುರಾಗಬಹುದು. ಮನಸ್ಸು ಮೊದಲಿಗಿಂತ ಹೆಚ್ಚು ಸಂತೋಷವಾಗಿರುತ್ತದೆ.
ಕನ್ಯಾ ರಾಶಿಯವರಿಗೆ ಶುಕ್ರ-ಬುಧ ಸಂಯೋಗವು ತುಂಬಾ ಒಳ್ಳೆಯದು. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಸೃಜನಶೀಲ ಕೆಲಸದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುವಿರಿ. ನೀವು ಎಲ್ಲಾ ರೀತಿಯ ಸಾಲದಿಂದಲೂ ಮುಕ್ತರಾಗುವಿರಿ.
ತುಲಾ ರಾಶಿಯ ಜನರಿಗೆ ಈ ಸಮಯವು ಚೆನ್ನಾಗಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ವಿಶೇಷವಾಗಿ ಆಸಕ್ತಿ ಹೊಂದಿರುತ್ತಾರೆ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ. ಕುಟುಂಬ ಸದಸ್ಯರೊಂದಿಗೆ ನೀವು ಉತ್ತಮ ಸಮಯ ಕಳೆಯುವಿರಿ. ನಿಮ್ಮ ಸುಖ-ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ.
ಮೀನ ರಾಶಿಯವರಿಗೆ ಶುಕ್ರ ಮತ್ತು ಬುಧರ ಸಂಯೋಗ ಪ್ರಯೋಜನಕಾರಿಯಾಗಲಿದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಇದು ಬಡ್ತಿ ಮತ್ತು ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ. ದಂಪತಿ ನಡುವಿನ ಸಂಬಂಧ ಸುಧಾರಿಸುತ್ತದೆ. ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಅದೃಷ್ಟದ ಬೆಂಬಲದಿಂದ ನೀವು ಹಠಾತ್ ಧನಲಾಭವನ್ನು ಪಡೆಯುತ್ತೀರಿ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)