ರಾತ್ರೋ ರಾತ್ರಿ ಬಿಗ್ ಬಾಸ್‌ನಿಂದ ಇಬ್ಬರೂ ಸ್ಪರ್ಧಿಗಳು ಔಟ್? ನಡೆದೇ ಹೋಯ್ತು ಯಾರೂ ಊಹಿಸಿರದ ಆ ಘಟನೆ!
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಮಹಾ ಯುದ್ಧವೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಮಾತಿನ ಚಕಮಕಿಯ ನಡುವೆ ಕೈ ಮಿಲಾಯಿಸಿಕೊಂಡಿದ್ದಾರೆ.
ಕಳೆದ ಸೀಸನ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ. ಇದರಿಂದ ಬಿಗ್ ಬಾಸ್‌ನಲ್ಲಿ ಹೊಸರಂಗು ಮೂಡಿದೆ.
ನಮ್ರತಾ ಮತ್ತು ಕಾರ್ತಿಕ್ ಕೂಡ ಬಂದಿದ್ದು, ರಜತ್ ಮತ್ತು ಧನರಾಜ್ ಕಿತ್ತಾಡಿಕೊಂಡಿದ್ದಾರೆ.
ರಜತ್ ಅವರನ್ನು ಧನರಾಜ್ ನಾಮಿನೇಷನ್ ಮಾಡಿದ ಕಾರಣಕ್ಕೆ ಕೋಪಗೊಂಡ ರಜತ್ ಜಗಳಕ್ಕಿಳಿಯುತ್ತಾರೆ. ಈ ವೇಳೆ ಮಾತಿಗೆ ಮಾತು ಬೆಳೆಯುತ್ತದೆ.
ಮಾತಿನ ಯುದ್ಧದಲ್ಲಿ ರಜತ್ ನಿನ್ನನ್ನು ಇದಕ್ಕೆ ಮಗು ಅನ್ನೋದು ಎಂದು ಧನರಾಜ್‌ಗೆ ಹೇಳುತ್ತಾರೆ. ಅದಕ್ಕೆ ಧನರಾಜ್ ಹೌದಾ ಅಂಕಲ್ ಅನ್ನುತ್ತಾ ಧನರಾಜ್ ಕೆನ್ನೆ, ಮುಖ ಮುಟ್ಟಲು ಆರಂಭಿಸುತ್ತಾರೆ.
ರಜತ್ ಅವರನ್ನು ಧನರಾಜ್ ಮುಟ್ಟಿ ಮಾತನಾಡಿಸಿದ್ದೇ ತಡ ಕೋಪ ನೆತ್ತಿಗೇರುತ್ತದೆ. ರಜತ್ ಧನರಾಜ್ ಮೇಲೆ ಅಟ್ಯಾಕ್ ಮಾಡಲು ಹೋಗುತ್ತಾರೆ.
ಇಬ್ಬರೂ ಈ ವೇಳೆ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲಪುತ್ತಾರೆ. ಅಷ್ಟರಲ್ಲಿ ಇವರ ನಡುವೆ ಮನೆಯ ಕ್ಯಾಪ್ಟನ್ ಗೌತಮಿ ಮತ್ತು ಮಂಜು ಮಧ್ಯಪ್ರವೇಶಿಸುತ್ತಾರೆ.
ಇಬ್ಬರೂ ಮ್ಯಾನ್ ಹ್ಯಾಂಡಲಿಂಗ್ ಮಾಡುವ ಹಂತಕ್ಕೆ ತಲುಪಿದ್ದು, ಯಾರು ಯಾರಿಗಾದರೂ ಹೊಡೆದಿದ್ದಾರಾ? ಈ ತಪ್ಪಿಗೆ ಬಿಗ್ ಬಾಸ್ ಯಾವ ಶಿಕ್ಷೆ ನೀಡಿದ್ದಾರೆ ಎಂಬುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.