Milind Soman fitness tips : 60 ವರ್ಷ ವಯಸ್ಸಿನಲ್ಲೂ ಮಿಲಿಂದ್ ಸೋಮನ್ ಯುವಜನರನ್ನು ನಾಚಿಸುವಂತಿದೆ, ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ದತಿ ಮತ್ತು ವಿವಿಧ ವ್ಯಾಯಾಮಗಳು. ಈ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ..
ನಟ ಮಿಲಿಂದ್ ಸೋಮನ್ ಅವರಿಗೆ 60 ವರ್ಷ. ಇಂದಿಗೂ ಅವರ ಫಿಟ್ನೆಸ್ ಯುವಕರನ್ನು ನಾಚಿಸುವಂತಿದೆ. ಯಾವಾಗಲೂ ಅವರು ತಮ್ಮ ಆಹಾರ ಪದ್ಧತಿ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.. ಹಲವಾರು ಬಾರಿ ತಮ್ಮ ಆಹಾರ ಪದ್ದತಿ ಬಗ್ಗೆಯೂ ಮಾತನಾಡಿದ್ದಾರೆ.
ಮಿಲಿಂದ್ ಪ್ರತಿದಿನ 15-20 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡ್ತಾರೆ. ಇದು ಅವರಿಗೆ ದಿನವಿಡೀ ಶಕ್ತಿಯನ್ನು ನೀಡುತ್ತದೆಯಂತೆ. ಬಹುಷಃ ನೀವು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಸ್ಥಳಗಳಲ್ಲಿ ಅವರು ವ್ಯಾಯಾಮ ಮಾಡುವುದನ್ನು ಕಾಣಬಹುದು.
ಮಿಲಿಂದ್ ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಪರಿಸರ, ಸ್ಥಳ ಮತ್ತು ಮನಸ್ಥಿತಿಗೆ ಅನುಗುಣವಾಗಿ ಅವರ ವ್ಯಾಯಾಮ ದಿನಚರಿ ಬದಲಾಗುತ್ತದೆ. ಓಟ ಮತ್ತು ಚಾರಣವನ್ನು ಅವರು ಇಷ್ಟಪಡುತ್ತಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
ಮಿಲಿಂದ್ ಸೋಮನ್ ಅವರು ಸೈಕ್ಲಿಂಗ್ ಅನ್ನು ಇಷ್ಟಪಡುತ್ತಾರೆ. ಸಮಯ ಸಿಕ್ಕಾಗೆಲ್ಲ ಸೈಕ್ಲಿಂಗ್ ಮಾಡ್ತಾರೆ. ಇದು ಅವರ ಸ್ನಾಯುಗಳನ್ನು ಬಲಪಡಿಸುತ್ತದೆ ಎಂಬುದು ಅವರ ನಂಬಿಕೆ. ಅಲ್ಲದೆ, ಪ್ರತಿದಿನ ಹ್ಯಾಂಡ್‌ಸ್ಟ್ಯಾಂಡ್‌ನಂತಹ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ.
ಈ ವಿಧಾನವು ಅವರ ಕೋರ್ ಅನ್ನು ಬಲಪಡಿಸುತ್ತದೆ ಮತ್ತು ತೋಳುಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯಂತೆ. ಹೆಚ್ಚಾಗಿ ಪುಷ್ಅಪ್‌ಗಳನ್ನು ಮಾಡಲು ಇಷ್ಟ ಪಡುತ್ತಾರೆ.. ಹೀಗೆ ತಾವು 65 ರಲ್ಲಿಯೂ ಸಕ್ರಿಯ ಚಟುವಟಿಕೆಗಳ ಮೂಲಕ ಆರೋಗ್ಯವಾಗಿದ್ದಾರೆ..
ಅಂದಹಾಗೆ ಮಿಲಿಂದ್ ಸೋಮನ್ ಅವರು, ನಟ, ನಿರ್ಮಾಪಕ, ಮಾಡೆಲ್ ಸಹ ಹೌದು.. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಬ್ರಾಂಡ್‌ಗಳಿಗೆ ಮಾಡೆಲ್ ಸಹ ಆಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿತ್ತಾರೆ..