ರಾಹು ಮತ್ತು ಕೇತು ಗ್ರಹಗಳು ಜಾತಕದಲ್ಲಿ ತಮ್ಮ ಕೃಪಾದೃಷ್ಟಿ ಬೀರಿದರೆ,ಭಿಕ್ಷುಕ ಕೂಡಾ ಧನಿಕನಾಗುತ್ತಾನೆ ಎಂದು ಹೇಳಲಾಗುತ್ತದೆ.ಅದರಲ್ಲಿಯೂ ರಾಹುವಿನ ಮಹಾದಶ ವಿಶೇಷವಾಗಿರುತ್ತದೆ.ರಾಹುವಿನ ಮಹಾದಷಾ 18 ವರ್ಷಗಳ ಕಾಲ ಇರುತ್ತದೆ. ಈ ಮಹಾದಶ ಅವಧಿಯಲ್ಲಿ ರಾಹುವಿನ ಕೃಪೆಯಿಂದಲೇ ಕೆಲವು ರಾಶಿಯವರು ಅಷ್ಟೈಶ್ವರ್ಯ ಪಡೆಯುತ್ತಾರೆ.
1/6ರಾಹುವಿನ ಮಹಾದಶಾ ಕಾಲದಲ್ಲಿ ರಾಹು ಮಂಗಳಕರ ಸ್ಥಾನದಲ್ಲಿದ್ದರೆ 18 ವರ್ಷಗಳ ಕಾಲ ವ್ಯಕ್ತಿ ಪ್ರಪಂಚದ ಪ್ರತಿಯೊಂದು ಸುಖ,ಸಂಪತ್ತು,ಉನ್ನತ ಸ್ಥಾನ ಮತ್ತು ಕೀರ್ತಿ ಎಲ್ಲವನ್ನೂ ಪಡೆಯುತ್ತಾನೆ. ಜೀವನದ ಸರ್ವ ಈಳಿಗೆ ರಾಹುವಿನಿಂದಲೇ ಆಗುವುದು.
2/6ಮೇಷ ರಾಶಿ : ನಿಮ್ಮ ಮೇಲೆ ರಾಹುವಿನ ಕೃಪೆ ಹೆಚ್ಚೇ ಇರುತ್ತದೆ. ಇದೇ ಕಾರಣದಿಂದ ಜೀವನದಲ್ಲಿ ನಿಮಗೆ ಕಷ್ಟ ಎದುರಾಗುವುದು ಕಡಿಮೆ. ಒಮ್ಮೊಮ್ಮೆ ಸಮಸ್ಯೆಗಳು ಬಾಧಿಸಿದರೂ ಅವು ತಕ್ಷಣ ಪರಿಹಾರ ಕೂಡಾ ಆಗುವುದು. ನಿಮ್ಮದು ಅತ್ಯಂತ ಸುಖಮಯ ಜೀವನ.
3/6ವೃಷಭ ರಾಶಿ : ಜೀವನದ ಮೊದಲ ಹಂತದಲ್ಲಿ ಕಷ್ಟ ಎದುರಾಗಬಹುದು. ಆದರೆ ನಂತರದ ಚರಣದಲ್ಲಿ ರಾಜ ವೈಭೋಗದ ಜೀವನ ನಿಮ್ಮದು. ಜೀವನದ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಬರೀ ಸುಖ ಸಮೃದ್ದಿಯ ಜೀವನ ನಿಮ್ಮದಾಗುವುದು.
4/6ಕರ್ಕ ರಾಶಿ : ನಿಮ್ಮನ್ನು ಯಾವ ಸಮಸ್ಯೆಯೂ ಕಾಡುವುದಿಲ್ಲ. ಅಂದುಕೊಂಡ ಕೆಲಸ ಸಾಧಿಸಿ ಬಿಡುವಿರಿ. ಸರ್ಕಾರಿ ಕೆಲಸ ಪಡೆಯುವ ಯೋಗ ನಿಮಗೆ ಜಾಸ್ತಿ, ಹಣಕಾಸಿನ ಕೊರತೆ ನಿಮಗೆ ಎದುರಾಗುವುದೇ ಇಲ್ಲ.
5/6ತುಲಾ ರಾಶಿ : ಹಣದ ಹರಿವು ಹೆಚ್ಚಿರುತ್ತದೆ.ಎಲ್ಲಾ ವಿಷಯಗಳಲ್ಲಿಯೂ ಮೇಲುಗೈ ಸಾಧಿಸುವಿರಿ.ನಿಮ್ಮನ್ನು ಸೋಲಿಸಬೇಕು ಎಂದು ಯಾರು ಎಷ್ಟೇ ಪ್ರಯತ್ನ ಪಟ್ಟರೂ ಕೊನೆ ಘಳಿಗೆಯಲ್ಲಿ ಗೆಲುವು ನಿಮ್ಮದೇ ಆಗುವುದು. ಕಷ್ಟಗಳು ಬಂದರೂ ಪರಿಹಾರ ಕೂಡಾ ಜೊತೆಯಲ್ಲಿಯೇ ಇರುತ್ತದೆ.
6/6ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.