ಬೆಂಗಳೂರು : ಬ್ಲಡ್ ಶುಗರ್ ರೋಗಿಗಳು ಈ ಎಲೆಯನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮತ್ತ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.
1/8ಬ್ಲಡ್ ಶುಗರ್ ಇದ್ದಾಗ ನಿತ್ಯವೂ ತಪ್ಪದೆ ಔಷಧಿ ಸೇವಿಸಬೇಕಾಗುತ್ತದೆ. ಒಂದು ದಿನದ ಮಾತ್ರೆ ತಪ್ಪಿದರೂ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.
2/8ನಿತ್ಯ ಮಾತ್ರೆ ಸೇವನೆಯಿಂದಲೂ ಅಡ್ಡ ಪರಿಣಾಮದ ಅಪಾಯವನ್ನು ಕೂಡಾ ಅಲ್ಲಗಳೆಯುವಂತಿಲ್ಲ. ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇದ್ದರೂ ದೇಹದ ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು.
3/8ಆದರೆ ಈ ಎಲೆಯನ್ನು ನೀರಿನಲ್ಲಿ ಕುದಿಸಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಬ್ಲಡ್ ಶುಗರ್ ನ್ಯಾಚ್ಯುರಲ್ ಆಗಿ ನಾರ್ಮಲ್ ಆಗುತ್ತಾ ಬರುವುದು.
4/8ಹೌದು, ನುಗ್ಗೆಕಾಯಿ ಎಲೆಗಳ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಉತ್ಕರ್ಷಣ ನಿರೋಧಕಗಳು ಸಕ್ಕರೆ ಮಟ್ಟವನ್ನು ಕಂಟ್ರೋಲ್ ನಲ್ಲಿ ಇಡುತ್ತವೆ.
5/8ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ನುಗ್ಗೆಕಾಯಿ ಎಲೆಗಳನ್ನು ಕುದಿಸಿದ ನೀರು ಸೇವಿಸುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರುತ್ತದೆ.
6/8ಇದು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ಹೃದಯ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.
7/8ಇದಕ್ಕಾಗಿ, ಒಂದು ಪಾತ್ರೆಯಲ್ಲಿ 2-3 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ನುಗ್ಗೆಕಾಯಿ ಎಲೆಗಳನ್ನು ತೊಳೆದು ಅದಕ್ಕೆ ಸೇರಿಸಿ. ಈಗ ಈ ನೀರನ್ನು ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟಾದ ನಂತರ ಗ್ಯಾಸ್ ಆಫ್ ಮಾಡಿ. ಈಗ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.
8/8ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.