Film industry most expensive divorce: ಸಿನಿರಂಗದಲ್ಲಿ ಇದುವರೆಗೆ ನಡೆದ ಅತ್ಯಂತ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಪತ್ನಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ? ಇಲ್ಲಿದೆ ನೋಡಿ...
hrithik roshan sussanne khan divorce: ಚಿತ್ರರಂಗದಲ್ಲಿಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ತೀರಾ ಸಾಮಾನ್ಯ ಸಂಗತಿ ಆಗಿಬಿಟ್ಟಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ಸಿನಿ ರಂಗದಲ್ಲೂ ವಿಚ್ಛೇದನದ ಹವಾ ಜೋರಾಗಿ ಬಿಟ್ಟಿದೆ. ಇಂದು ನಾವು ನಿಮಗೆ ಸಿನಿರಂಗದ ಅತ್ಯಂತ ದುಬಾರಿ ಡಿವೋರ್ಸ್ ಬಗ್ಗೆ ಹೇಳಲಿದ್ದೇವೆ.
ಸಿನಿರಂಗದ ಅತ್ಯಂತ ದುಬಾರಿ ಡಿವೋರ್ಸ್ ಪಡೆದವರು ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ಮಾಜಿ ಪತ್ನಿ ಸುಸೇನ್ ಖಾನ್. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಹೃತಿಕ್ ಸುಸೇನ್ ಅವರನ್ನು ಮದುವೆಯಾಗುತ್ತಾರೆ.
ನಟ ಹೃತಿಕ್ ರೋಷನ್ ಮತ್ತು ಮಾಜಿ ಪತ್ನಿ ಸುಸೇನ್ ಖಾನ್ ಗೆ ರೆಹಾನ್ ಮತ್ತು ರಿಧಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದ 14 ವರ್ಷಗಳ ನಂತರ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಇಬ್ಬರೂ ಡಿವೋರ್ಸ್ ಪಡೆಯಲು ನಿರ್ಧರಿಸಿದರು.
ಆ ಸಮಯದಲ್ಲಿ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನ ವಿಚಾರವಾಗಿ ದೊಡ್ಡ ಚರ್ಚೆಯೇ ನಡೆದಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೃತಿಕ್ ಮತ್ತು ಸುಸೇನ್ ಖಾನ್ ವಿಚ್ಛೇದನ ತುಂಬಾ ದುಬಾರಿ ಡಿವೋರ್ಸ್ ಆಗಿದೆ.
ಹೃತಿಕ್ ಸುಸೇನ್ ಖಾನ್‌ಗೆ ಭಾರೀ ಮೊತ್ತದ ಜೀವನಾಂಶ ಕೊಟ್ಟಿದ್ದು, ಇದನ್ನು ಸಿನಿರಂಗದ ದುಬಾರಿ ವಿಚ್ಛೇದನ ಎಂದೇ ಬಿಂಬಿಸಲಾಗಿದೆ. ಹೃತಿಕ್ ಸುಸೇನ್ ಖಾನ್‌ಗೆ ನೂರಾರು ಕೋಟಿ ಜೀವನಾಂಶ ನೀಡಿದ್ದರು.
ಹೃತಿಕ್ ರೋಷನ್ ಬಳಿ ಮಾಜಿ ಪತ್ನಿ ಸುಸೇನ್ ಖಾನ್ 400 ಕೋಟಿ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತದೆ.
ಆದರೆ ಹೃತಿಕ್ ರೋಷನ್ 380 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎನ್ನಲಾಗುತ್ತದೆ. ಹೃತಿಕ್ ರೋಷನ್ ವಿಚ್ಛೇದನದ ನಂತರ ತಮ್ಮ ಮಕ್ಕಳ ಸಲುವಾಗಿ ಸಾಂದರ್ಭಿಕವಾಗಿ ಭೇಟಿಯಾಗುತ್ತಾರೆ.