ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆ ಮತ್ತೆ ಸದ್ದು ಮಾಡುತ್ತಿದೆ.
ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರ ಕುಟುಂಬದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲಿ, ಮುಂಬೈನಲ್ಲಿರುವ ಅವರ ಮನೆ ಆಂಟಿಲಿಯಾ ಚರ್ಚೆಯ ವಿಷಯವಾಗಿರುತ್ತದೆ.
ಟಾಪ್ 10 ದುಬಾರಿ ಮನೆಗಳಲ್ಲಿ ಆಂಟಿಲಿಯಾ ಮೊದಲ ಸ್ಥಾನದಲ್ಲಿದೆ. ಇದು 27 ಅಂತಸ್ತಿನ ಮನೆಯಾಗಿದ್ದು, ಇದರ ನಿರ್ಮಾಣಕ್ಕೆ ತಗುಲಿರುವ ವೆಚ್ಚಅಂದಾಜು 15,000 ಕೋಟಿ ರೂ
ಆಂಟಿಲಿಯಾ ಅರಮನೆಗಿಂತ ಕಡಿಮೆಯಿಲ್ಲ.ಇದು 4,00,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಇಲ್ಲಿ 600 ಮಂದಿ ಕೆಲಸ ಮಾಡುತ್ತಾರೆ.
ಮುಖೇಶ್ ಅಂಬಾನಿಯ ಮನೆಯ ವಿಶೇಷತೆಗಳಲ್ಲಿ ಅದರ ಹೆಸರೂ ಒಂದು.ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಪೌರಾಣಿಕ ದ್ವೀಪದ ಆಧಾರದ ಮೇಲೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ.
ಕಮುಖೇಶ್ ಅಂಬಾನಿ ತಮ್ಮ ಇಡೀ ಕುಟುಂಬದೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ವಿವಿಧ ಮಹಡಿಗಳನ್ನು ಹೊಂದಿದೆ.
ಕಟ್ಟಡವನ್ನು 2010ರಲ್ಲಿ ಪೂರ್ಣಗೊಳಿಸಲಾಯಿತು.ಚಿಕಾಗೋ ಮೂಲದ ವಾಸ್ತುಶಿಲ್ಪಿ ಪರ್ಕಿನ್ಸ್ ಈ ಮನೆಯ ನ್ನು ವಿನ್ಯಾಸಗೊಳಿಸಿದರು. ಆದರೆ ನಿರ್ಮಾಣವನ್ನು ಆಸ್ಟ್ರೇಲಿಯಾದ ಕಂಪನಿ ಲ್ಯಾಂಗ್ಟನ್ ಹೋಲ್ಡಿಂಗ್ಸ್ ಮಾಡಿದರು.
ಈ ಮನೆಯ ವಿನ್ಯಾಸವು 8ರ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತಿದೆ.
ಆಂಟಿಲಿಯಾದ 27 ಮಹಡಿಗಳಲ್ಲಿ 6 ಮಹಡಿಗಳನ್ನು ಪಾರ್ಕಿಂಗ್‌ಗಾಗಿಯೇ ಮೀಸಲಿಡಲಾಗಿದೆ.ಅಂಬಾನಿ ಕುಟುಂಬದ ರೋಲ್ಸ್ ರಾಯ್ಸ್ ನಂತಹ ಎಲ್ಲಾ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ನಿಲ್ಲಿಸಲಾಗಿದೆ.
ಪಾರ್ಕಿಂಗ್ ಸ್ಥಳದ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಇದೆ.ಅದರ ಮೇಲೆ ಹೊರಾಂಗಣ ಉದ್ಯಾನವಿದೆ.ಇದರೊಂದಿಗೆ ಈ ಕಟ್ಟಡದಲ್ಲಿ 3 ಹೆಲಿಪ್ಯಾಡ್‌ಗಳನ್ನು ಒದಗಿಸಲಾಗಿದೆ.
ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ,ಇದು ಯೋಗ ಸ್ಟುಡಿಯೋ, ಐಸ್ ಕ್ರೀಮ್ ರೂಂ ಮತ್ತು ಮೂರಕ್ಕೂ ಹೆಚ್ಚು ಈಜುಕೊಳಗಳನ್ನು ಹೊಂದಿದೆ. ಮನೆಯಲ್ಲಿ 9 ಲಿಫ್ಟ್‌ಗಳಿದ್ದು,ಸ್ಪಾ ಮತ್ತು ದೇವಸ್ಥಾನವೂ ಇದೆ.