ತೂಕ ನಷ್ಟಕ್ಕೆ ಈ ಪೊಟ್ಯಾಸಿಯಮ್-ಭರಿತ ಆಹಾರಗಳನ್ನು ತಪ್ಪದೇ ಸೇವಿಸಿ
ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಅಗಸೆ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು.
ಮೀನುಗಳು ಪೊಟ್ಯಾಸಿಯಮ್ ಮಾತ್ರವಲ್ಲ, ಉತ್ತಮ ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳ ಮೂಲವೂ ಹೌದು. ಇದೂ ಸಹ ತೂಕ ಇಳಿಕೆಗೆ ತುಂಬಾ ಸಹಾಯಕವಾಗಿದೆ.
ತೂಕ ಇಳಿಕೆಗಾಗಿ ಬಾಳೆಹಣ್ಣನ್ನು ಕೂಡ ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಕಿಡ್ನಿ ಬೀನ್ಸ್ ಎಂದು ಕರೆಯಲ್ಪಡುವ ರಾಜ್ಮಾ ಕೂಡ ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ನಿಂದ ತುಂಬಿರುತ್ತದೆ. ಇದೂ ಕೂಡ ತೂಕ ಇಳಿಕೆಗೆ ಸಹಕಾರಿ ಎಂದು ಹೇಳಲಾಗುತ್ತದೆ.
ಕಾಬೂಲ್ ಕಡಲೆ ಕೂಡ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಆರೋಗ್ಯಕರ ತೂಕ ನಷ್ಟಕ್ಕೆ ಇದು ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.