ಪ್ರಭಾವಿ ರಾಜಕಾರಣಿಗಳ ಜೊತೆ ಡೇಟಿಂಗ್​ ಬರುವಂತೆ ನಟಿ ನಮ್ರತಾ ಗೌಡಗೆ ಕಿರುಕುಳ

Namratha Gowda : ನಟಿ ನಮ್ರತಾ ಗೌಡ ಅವರಿಗೆ ರಾಜಕಾರಣಿಗಳ ಜೊತೆ ಡೇಟಿಂಗ್‌ ಬರುವಂತೆ ಆಫರ್‌ ನೀಡಲಾಗಿದೆ. ಇದಕ್ಕೆ ಒತ್ತಾಯಿಸಿ ಮೆಸೇಜ್‌ ಕೂಡ ಮಾಡಲಾಗಿದೆ. 

Namratha Gowda : Namratha Gowda : ನಟಿ ನಮ್ರತಾ ಗೌಡ ಕಿರುತೆರೆಯ ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ʻಹಿಮʼ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದರು. ಆ ಬಳಿಕ ಹಲವಾರು ಧಾರಾವಾಹಿಗಳಲ್ಲಿ ನಮ್ರತಾ ನಟಿಸಿದ್ದು, ಬಿಗ್‌ ಬಾಸ್‌ ಕನ್ನಡ ಸ್ಪರ್ಧಿ ಕೂಡ ಆಗಿದ್ದರು. 

1 /9

ನಮ್ರತಾ ಗೌಡಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ಡೇಟಿಂಗ್‌ ಹೋಗುವಂತೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. 

2 /9

ರಾಜಕಾರಣಿಗಳು, ವಿಐಪಿಗಳ ಜೊತೆ ಡೇಟೀಂಗ್‌ ಹೋಗಲು ಒತ್ತಾಯಿಸಿ ಸಂದೇಶ ಕಳಿಸಿದ್ದಾರೆ. ಇದಕ್ಕಾಗಿ ಕೇಳಿದಷ್ಟು ಹಣವನ್ನು ಕೊಡುವುದಾಗಿಯೂ ಆ ವ್ಯಕ್ತಿ ಆಮಿಷ ಒಡ್ಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

3 /9

ಮಾಜಿ ಬಿಗ್​ಬಾಸ್ ಸ್ಪರ್ಧಿ, ನಟಿ ನಮ್ರತಾ ಗೌಡ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಕಿರುಕುಳ ನೀಡಲಾಗಿದೆ. ರೋಷನ್ ಎಂಬ ಹೆಸರಿನ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ ಅವರಿಗೆ ಮೆಸೇಜ್‌ ಕಳಿಸಿದ್ದಾರ.ಈ ವ್ಯಕ್ತಿಯೇ ರಾಜಕಾರಣಿಗಳ ಜೊತೆ ಡೇಟಿಂಗ್‌ ಮಾಡಲು ಬನ್ನಿ ಎಂದು ಒತ್ತಾಯಿಸಿದ್ದಾನೆ.

4 /9

ಪದೇ ಪದೇ ಸಂದೇಶ ಕಳಿಸಿ ನಮ್ರತಾ ಗೌಡಗೆ ಕಿರುಕುಳ ನೀಡಿದ್ದಾನೆ. ರೋಷನ್ ತಮಗೆ ಕಳಿಸಿರುವ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ನಮ್ರತಾ ಗೌಡ ಅದನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ಹಾಕಿದ್ದಾರೆ. ರೋಷನ್ ಎಂಬಾತ ರಾಕಿ ಜಿ43 (Rocky.g43) ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಿಂದ ನಮ್ರತಾಗೆ ಮೆಸೇಜ್‌ ಮಾಡಿದ್ದಾನೆ. 

5 /9

ರೋಷನ್ ಪ್ರೊಫೈಲ್ ಪಿಕ್ಚರ್​ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ತೆಗೆಸಿಕೊಂಡಿರುವ ಫೋಟೊ ಹಾಕಿಕೊಂಡಿದ್ದಾನೆ. ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆ ನಂಟಿದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್‌ ಬರಲು ಇಚ್ಛೆ ಇದೆಯಾ? ಎಂದು ಮೆಸೇಜ್‌ ಕಳಿಸಿದ್ದಾರೆ.

6 /9

ಡೇಟಿಂಗ್​ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳಿ. ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್‌ ಅರೇಂಜ್ ಮಾಡುತ್ತೇನೆ ಎಂದು ಮೆಸೇಜ್‌ ಮಾಡಿದ್ದಾನೆ.

7 /9

ನೀವು ಪೇಯ್ಡ್ ಡೇಟಿಂಗ್​ಗೆ ಬರಲು ಇಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ. ನಿಮ್ಮ ಮೊಬೈಲ್ ನಂಬರ್ ಅಥವಾ ಫೋಟೋಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ ಎಂದು ಕೆಟ್ಟದಾಗಿ ಮೆಸೇಜ್‌ ಮಾಡಿದ್ದಾನೆ.

8 /9

200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವ ರೀತಿಯ ವಿಚಾರವೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ನಿಮ್ಮ ಮಾಹಿತಿ ಹಂಚಿಕೊಳ್ಳಿ ಎಂದು ನಮ್ರತಾಗೆ ರೋಷನ್ ಮೆಸೇಜ್‌ ಮಾಡಿದ್ದಾನೆ.

9 /9

ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾ ಅವರಿಗೆ ರೋಷನ್ ಕಳಿಸಿದ್ದು, ಈ ಎಲ್ಲ ಸ್ಕ್ರೀನ್‌ ಶಾಟ್‌ಗಳನ್ನು ನಮ್ರತಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಅಲ್ಲದೇ ಇಲ್ಲಿಗೆ ಇದನ್ನು ನಿಲ್ಲಿಸಿ ಸಾಕು.. ಎಂದು ಬರೆದಿದ್ದಾರೆ.