shafiq Syed auto driver: ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಈ ನಟ ಇಂದು ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರಿನ ಸ್ಲಮ್‌ಗಳಲ್ಲಿ ಆಟೋ ಓಡಿಸುತ್ತಿದ್ದಾರೆ. ಯಾರು ಗೊತ್ತಾ?
1/9shafiq Syed: ಸಿನಿಮಾಗಳು ಮನರಂಜನೆಯ ಮೂಲ, ಕೆಲವರು ಲವ್ ಸ್ಟೋರಿ ಸಿನಿಮಾ ಇಷ್ಟ ಪಟ್ಟರೆ ಇನ್ನೂ ಕೆಲವರು ಥ್ರಿಲ್ಲರ್ ಸ್ಟೋರಿಗಳ್ನು ಇಷ್ಟ ಪಡುತ್ತಾರೆ.
2/91988ರಲ್ಲಿ ತೆರೆ ಕಂಡಿದ್ದ ಒಂದು ಸಿನಿಮಾ ನೈಜ ಘಟನೆಯ ಆಧಾರವಾಗಿತ್ತು, ಈ ಸಿನಿಮಾ ಅಷ್ಟು ದೊಡ್ಡ ಸಕ್ಸಸ್ ಕಂಡಿಲ್ಲವಾದರೂ, ಈ ಸಿನಿಮಾದಲ್ಲಿ ನಟಿಸಿದ್ದ ಪುಟ್ಟ ಬಾಲಕ ಎಲ್ಲರ ಮನಸ್ಸು ಗೆದ್ದಿದ್ದ.
3/9ಈ 12ವರ್ಷ ವಯಸ್ಸಿನ ಪುಟ್ಟ ಬಾಲಕನ ನಟನೆ ಕಂಡು ನೆಟ್ಟಿಗರು ದಂಗಾಗಿದ್ದರು, ಈತನ ನಟನೆ ಪ್ರೇಕ್ಷಕರಿಗೆ ನೈಜ ಘಟನೆ ತಮ್ಮ ಕಣ್ಣ ಮುಂದೆ ಕಟ್ಟಿದಂತೆ ತೋರಿಸಿಕೊಟ್ಟಿತ್ತು.
4/9ಆ ಬಾಲ ಕಲಾವಿದನ ಹೆಸರು ಶಫೀಕ್ ಸೈಯದ್. 12 ನೇ ವಯಸ್ಸಿನಲ್ಲಿ ಇವರು ಬಾಲ ಕಲಾವಿದನಾಗಿ ಶಾರ್ಟ್ ಫಿಲಿಂನಲ್ಲಿ ನಟಿಸಿದ್ದರು.ಇದು 1988ರಲ್ಲಿ ರಿಲೀಸ್ ಆಗಿತ್ತು.
5/9ನಾನಾ ಪಾಟೇಕರ್, ರಘುವೀರ್ ಯಾದವ್, ಇರ್ಫಾನ್ ಖಾನ್ ಮತ್ತು ಅನಿತಾ ಕನ್ವರ್ ನಟಿಸಿದ್ದ ಈ ಸಿನಿಮಾದಲ್ಲಿ ಶಫೀಕ್ ಸೈಯದ್ ಅವರಿಗೂ ಒಂದು ವಿಶೇಷ ಪಾತ್ರ ಸಿಕ್ಕಿತ್ತು. ಈ ಸಿನಿಮಾದ ನಂತರ ಅವರು ಪತ್ತೆ ಇಲ್ಲದಂತೆ ಕಾಣೆಯಾಗಿದ್ದರು.
6/9ಮಾಧ್ಯಮ ವರದಿಗಳ ಪ್ರಕಾರ, ಮನೆ ಬಿಟ್ಟು ಶಫೀಕ್ ಸೈಯದ್ ತನ್ನ ಸ್ನೇಹಿತರೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದರು. ಶಫೀಕ್ ಚರ್ಚ್‌ಗೇಟ್ ರೈಲ್ವೆ ನಿಲ್ದಾಣದ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದ ಅವರಿಗೆ ನಿರ್ದೇಶಕಿ ಮೀರಾ ದಿನಕ್ಕೆ 20 ರೂ. ನೀಡುವ ಒಪ್ಪಂದದಲ್ಲಿ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದರು.
7/9ಮಾಡಿದ್ದ ಒಂದೇ ಒಂದು ಸಿನಿಮಾದಿಂದಲೇ, ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿತ್ತು, ಆ ಸಿನಿಮಾದ ನಂತರ ಅವರು ಮತ್ತೆಂದೂ ಸಿನಿಮಾ ಮಾಡಲೇ ಇಲ್ಲ, ಬಣ್ಣದ ಲೋಕ ತೊರೆದು ಅವರು ಬೆಂಗಳೂರಿಗೆ ಬಂದಿದ್ದರು.
8/9ಮಾಡಿದ್ದ ಮೊದಲ ಸಿನಿಮಾದಲ್ಲೇ ಅವರ ಹೆಸರು ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದ್ದರು. ಇದೀಗ ಈ ನಟ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ.
9/9ಇಂದು ವಿವಾಹಿತ ವ್ಯಕ್ತಿಯಾಗಿರುವ ಇವರು, ಇಂದು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಸ್ಲಾಮ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.