ಕೇಂದ್ರ ಸರ್ಕಾರಿ ನೌಕರರಿಗೆ ವೇತನ ರಚನೆಯನ್ನು ಸೂಚಿಸುವ ಮತ್ತು ಅದನ್ನು ಪರಿಶೀಲಿಸುವ ಸಲುವಾಗಿ ಸರ್ಕಾರದಿಂದ ರಚಿಸಲ್ಪಟ್ಟ ಸಂಸ್ಥೆಯೇ ವೇತನ ಆಯೋಗ. ಇಲ್ಲಿಯವರೆಗೆ ಒಟ್ಟು 7 ವೇತನ ಆಯೋಗಗಳನ್ನು ರಚಿಸಲಾಗಿದೆ. ಪ್ರತಿ ಹತ್ತು ವರ್ಷಗಳ ನಂತರ ಹೊಸ ವೇತನ ಆಯೋಗ ಜಾರಿಗೆ ಬರುತ್ತದೆ. ಈ ಆಯೋಗಗಳ ಶಿಫಾರಸುಗಳು ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರ ಜೀವನ ಮಟ್ಟ ಮತ್ತು ಆದಾಯದ ಮೇಲೆ ಪರಿಣಾಮ ಬೀರುತ್ತವೆ.
1/78ನೇ ವೇತನ ಆಯೋಗ 2026 ರಿಂದ ಜಾರಿಗೆ ಬರಲಿದೆ. ಹೊಸ ವೇತನ ಆಯೋಗ ಜಾರಿಯಾದ ಬಳಿಕ ದೊಡ್ಡ ಮಟ್ಟದಲ್ಲಿ ವೇತನ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಸರ್ಕಾರಿ ನೌಕರರು.
2/7ಆದರೆ ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳು ಹೊಸ ವವೇತನ ಆಯೋಗ ರಚನೆಯಾದರೂ ವೇತನ ಹೆಚ್ಚಳಕ್ಕೆ ಸರ್ಕಾರ ಬೇರೆಯದ್ದೇ ನಿಯಮವನ್ನು ಅನುಸರಿಸಲಿದೆ ಎನ್ನುತ್ತಾರೆ.
3/7ಹೊಸ ವೇತನ ಆಯೋಗ ರಚನೆಯಾದ ಬಳಿಕ ನೌಕರರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನವನ್ನು ಹೆಚ್ಚಳ ಮಾಡಲಾಗುವುದು ಎನ್ನಲಾಗಿದೆ.
4/7ಅಂದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ವೇತನ ಹೆಚ್ಚಳ ಮಾಡುವ ಬದಲು ಅವರವರ ಕಾರ್ಯಕ್ಷಮತೆಗೆ ತಕ್ಕಂತೆ ವೇತನ ಹೆಚ್ಚಳವಾಗುವುದು. ಹೀಗಾದಾಗ ಸರ್ಕಾರಿ ನೌಕರರಾಗಿದ್ದರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಮಾತ್ರ ವೇತನ ಹೆಚ್ಚಳ.
5/7ತುಟ್ಟಿಭತ್ಯೆ ಈಗಾಗಲೇ 55 ಶೇ. ಆಗಿದ್ದು, ಇನ್ನು ಏಳನೇ ವೇತನ ಆಯೋಗದ ಕೊನೆಯ ಡಿಎ 3 ಶೇ. ಆದರೂ ಒಟ್ಟು ತುಟ್ಟಿಭತ್ಯೆ 58 ಶೇ.ಕ್ಕೆ ಏರಿಕೆಯಾಗುತ್ತದೆ. ಇದನ್ನು ಮೂಲ ವೇತನಕ್ಕೆ ಸೇರಿಸಿದರೆ ಸರ್ಕಾರದ ಮೇಲೆ ಭಾರೀ ಹೊರೆ ಬಿದ್ದಂತೆ ಆಗುವುದು.
6/7ಹಾಗಾಗಿ ಇನ್ನು ಮುಂದೆ ಸರ್ಕಾರವೇ ವೇತನ ಹೆಚ್ಚಳಕ್ಕೆ ಹೊಸ ವ್ಯವಸ್ಥೆ ಜಾರಿಗೆ ತರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
7/7ಈ ವ್ಯವಸ್ಥೆ ಜಾರಿಗೆ ಬಂದರೆ ನಿಯಮಿತ ವೇತನ ಹೊಂದಾಣಿಕೆಗೆ 10 ವರ್ಷ ಕಾಯಬೇಕಾಗಿಲ್ಲ. ಪ್ರತಿ ವರ್ಷ ನೌಕರರ ವೇತನದಲ್ಲಿ ಏರಿಕೆಯಾಗುವುದು. ಆದರೆ, ಸದ್ಯಕ್ಕೆ ಈ ಬಗ್ಗೆ ಅಧಿಕೃತ ಅಥವಾ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.