Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರಲ್ಲಿ ಚಂದ್ರನ ರಾಶಿಚಕ್ರದಲ್ಲಿ ದೇವಗುರು ಬೃಹಸ್ಪತಿ ಗುರು ಸಂಚಾರದಿಂದ ಹಂಸ ಮಹಾಪುರುಷ ರಾಜಯೋಗದ ಜೊತೆಗೆ ಕೇಂದ್ರ ತ್ರಿಕೋನ ರಾಜಯೋಗವೂ ಸೃಷ್ಟಿಯಾಗಲಿದೆ. ಇದರೊಂದಿಗೆ ಸುಮಾರು 12 ವರ್ಷಗಳ ಬಳಿಕ ಕೆಲವರ ಬಾಳಲ್ಲಿ ಗುರು ದೆಸೆಯೂ ಆರಂಭವಾಗಲಿದೆ. 2026ರ ಲಕ್ಕಿ ರಾಶಿಗಳು ಯಾವುವೆಂದು ತಿಳಿಯೋಣ...
ವೈದಿಕ ಜ್ಯೋತಿಷ್ಯದ 2026ರಲ್ಲಿ ಗುರು ತನ್ನ ಉತ್ಕೃಷ್ಟ ರಾಶಿಚಕ್ರ ಕಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಚಂದ್ರನ ರಾಶಿಯಲ್ಲಿ ಗುರು ಸಂಚಾರದಿಂದ ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಹಂಸ ಮಹಾಪುರುಷ ರಾಜಯೋಗದಂತಹ ಡಬಲ್ ರಾಜಯೋಗಗಳು ಸೃಷ್ಟಿಯಾಗಲಿವೆ.
2026ರಲ್ಲಿ ಗುರು ಗೋಚಾರದೊಂದಿಗೆ ಸುಮಾರು 12 ವರ್ಷಗಳ ನಂತರ ಕೆಲವು ರಾಶಿಯವರ ಬದುಕಿನಲ್ಲಿ ಗುರು ಬಲ ಆರಂಭವಾಗಲಿದೆ.
2026ರಲ್ಲಿ ಗುರು ಗೋಚಾರವು ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. ಆದರೂ, ಗುರು ಬಲ ಅಥವಾ ಗುರು ಮಹಾದಶದೊಂದಿಗೆ ಮೂರು ರಾಶಿಯವರಿಗೆ ವೃತ್ತಿ, ವ್ಯವಹಾರ, ವೈಯಕ್ತಿಕ ಬದುಕಿನಲ್ಲಿ ಸಕಲವೂ ಸಿದ್ಧಿಯಾಗಲಿದೆ ಎನ್ನಲಾಗುತ್ತಿದೆ.
ಗುರು ಈ ರಾಶಿಯಲ್ಲಿಯೇ ಸಂಚರಿಸುವುದರಿಂದ ಇವರಿಗೆ ಎಲ್ಲಾ ರೀತಿಯಿಂದಲೂ ಅದೃಷ್ಟ, ಕೇಂದ್ರ ತ್ರಿಕೋನ ಮತ್ತು ಹಂಸ ರಾಜಯೋಗದಿಂದ ವೃತ್ತಿ ಬದುಕಿನಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಜೊತೆಗೆ ವೈಯಕ್ತಿಕ ಬದುಕಿನಲ್ಲಿಯೂ ಸಕಾರಾತ್ಮಕ ಫಲಗಳು ಲಭಿಸಲಿವೆ. ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಲಿದೆ.
ಈ ರಾಶಿಯವರಿಗೆ ಗುರು ಬಲ ಪ್ರಭಾವದಿಂದ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ವೃತ್ತಿಯಲ್ಲಿ ಬಡ್ತಿ, ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಖ್ಯಾತಿ, ಗೌರವ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ದಿಢೀರ್ ಧನಾಗಮನವು ನಿಮ್ಮನ್ನು ಸಾಲದ ಸುಳಿಯಿಂದ ಹೊರತರಲಿದೆ. ಇನ್ನೂ ವಿವಾಹವಾಗದ ನಿಮ್ಮ ಸಹೋದರ ವರ್ಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
ಗುರು ಮಹಾದಶದೊಂದಿಗೆ ಡಬಲ್ ರಾಜಯೋಗವು ನಿಮ್ಮ ಅದೃಷ್ಟ ಹೊಳೆಯುವಂತೆ ಮಾಡಲಿದೆ. ಉದ್ಯೋಗಿಗಳಿಗೆ ವೇತನ ಹೆಚ್ಚಳದ ಜೊತೆಗೆ ವೃತ್ತಿ ಬದುಕಿನಲ್ಲಿ ಪ್ರಮುಖ ತಿರುವನ್ನು ಕಾಣುವ ಅವಕಾಶವಿದೆ. ಮಕ್ಕಳ ಮದುವೆ ಸಂಭ್ರಮ ಮನೆಮಾಡಲಿದೆ. ಹಣಕಾಸಿನ ವಿಚಾರದಲ್ಲಿ ಧನಾತ್ಮಕತೆ ತುಂಬಲಿದೆ. ಪೂರ್ವಿಕರ ಆಸ್ತಿಯಿಂದ ಭರ್ಜರಿ ಲಾಭವಾಗಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.