ಹೇರ್ ಡೈ, ಹೆನ್ನಾ ಬೇಡವೇ ಬೇಡ: ತೆಂಗಿನೆಣ್ಣೆಯಲ್ಲಿ ಕರಿಬೇವಿನ ಸೊಪ್ಪನ್ನು ಹೀಗೆ ಬಳಸಿದರೆ ಬೆಳ್ಳಗಿರುವ ಕೂದಲು ಕಪ್ಪಾಗೋದು ಪಕ್ಕಾ!

Written ByYashaswini V
Published: Oct 01, 2025, 07:59 AM IST|Updated: Oct 01, 2025, 07:59 AM IST

White Hair Remedies: ಬದಲಾದ ವಾತಾವರಣ, ಹವಾಮಾನ ಮಾತ್ರವಲ್ಲದೆ ದೇಹದಲ್ಲಿ ವಿಟಮಿನ್'ಗಳ ಕೊರತೆಯಿಂದಲೂ ಕೂದಲು ಬೆಳ್ಳಗಾಗುತ್ತದೆ. ಆದರೆ, ಇದಕ್ಕಾಗಿ ಹೇರ್ ಡೈ, ಮೆಹಂದಿಯನ್ನು ಬಳಸುವ ತಪ್ಪನ್ನು ಮಾಡಬೇಡಿ. ಬದಲಿದೆ, ಮನೆಯಲ್ಲಿರುವ ತೆಂಗಿನ ಎಣ್ಣೆಯಿಂದಲೇ ಬಿಳಿ ಕೂದಲನ್ನು ಗಾಢ ಕಪ್ಪಾಗಿಸಬಹುದು. 

White Hair Remedies1/6

ಬಿಳಿ ಕೂದಲಿಗೆ ಮನೆಮದ್ದು

ಬೆಳ್ಳಗಿರುವ ಕೂದಲನ್ನು ಕಪ್ಪಾಗಿಸಲು ದುಬಾರಿ ಹೇರ್ ಡೈ, ಮೆಹಂದಿಯನ್ನೇ ಬಳಸಬೇಕು ಎಂದೇನಿಲ್ಲ. ನಿಮ್ಮ ಮನೆಯಲ್ಲಿರುವ ತೆಂಗಿನೆಣ್ಣೆಯಲ್ಲಿ ಕರಿಬೇವಿನ ಸೊಪ್ಪನ್ನು ಬೆರೆಸಿ ಹಚ್ಚಿದರೂ ಬೆಳ್ಳಗಿರುವ ಕೂದಲು ಮರಳಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ, ಇದಕ್ಕಾಗಿ ತೆಂಗಿನೆಣ್ಣೆ- ಕರಿಬೇವಿನ ಸೊಪ್ಪನ್ನು ಬಳಸುವ ಸರಿಯಾದ ಮಾರ್ಗವನ್ನು ಅನುಸರಿಸಬೇಕು. 

White Hair Remedies2/6

ಬಿಳಿ ಕೂದಲಿಗೆ ತೆಂಗಿನೆಣ್ಣೆ

ತೆಂಗಿನೆಣ್ಣೆಯಲ್ಲಿರುವ ಪೋಷಕಾಂಶಗಳು ಕೂದಲಿನ ಕಿರುಚೀಲಗಳನ್ನು ಪೋಷಿಸಿ, ಕೂದಲಿಗೆ ಬೇರುಗಳಿಂದ ಶಕ್ತಿ ನೀಡುತ್ತವೆ. ಜೊತೆಗೆ ಆರೋಗ್ಯಕರ ಕಪ್ಪಾದ ಉದ್ದ ಕೂದಲನ್ನು ಪಡೆಯಲು ಕೂಡ ಇದು ಸಹಕಾರಿ ಆಗಿದೆ. 

White Hair Remedies3/6

ಬಿಳಿ ಕೂದಲಿಗೆ ಕರಿಬೇವಿನ ಸೊಪ್ಪು

ಕರಿಬೇವಿನ ಸೊಪ್ಪು ಬೀಟಾ-ಕೆರಾಟಿನ್ ನ ಸಮೃದ್ಧ ಮೂಲ. ಇದಲ್ಲದೆ, ಇದರಲ್ಲಿ ಕೂದಲಿನ ಕಿರುಚೀಲಗಳಲ್ಲಿ ಮೆಲನಿನ್ ಪುನಃಸ್ಥಾಪಿಸಿ ಬಿಳಿ ಕೂದಲನ್ನು ತಡೆಯುವ ಶಕ್ತಿಯಿರುವ ವಿಟಮಿನ್ ಬಿ ಹೇರಳವಾಗಿದೆ. 

White Hair Remedies4/6

ಬಿಳಿ ಕೂದಲಿಗೆ ಹೇರ್ ಆಯಿಲ್

ಒಂದು ಬಟ್ಟಲು ತೆಂಗಿನೆಣ್ಣೆಯಲ್ಲಿ ಅಷ್ಟೇ ಪ್ರಮಾಣದ ಕರಿಬೇವಿನ ಎಲೆಗಳನ್ನೂ ಹಾಕಿ ಅದು ಕಪ್ಪಾಗುವವರೆಗೂ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಎಣ್ಣೆ ತಣ್ಣಗಾದ ಬಳಿಕ ಅದನ್ನು ಸೋಸಿ ಒಂದು ಗಾಜಿನ ಸೀಸೆಯಲ್ಲಿ ಸಂಗ್ರಹಿಸಿ ಇಡಿ. 

White Hair Remedies5/6

ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ

ಕರಿಬೇವಿನ ಎಲೆಗಳೊಂದಿಗೆ ಕುದಿಸಿ ಸೋಸಿಟ್ಟ ತೆಂಗಿನೆಣ್ಣೆಯನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಹಾಕಿ ಕೂದಲಿಗೆ ಲಘುವಾಗಿ ಮಸಾಜ್ ಮಾಡಿ.  

White Hair Remedies6/6

ಬಿಳಿ ಕೂದಲಿಗೆ ಪರಿಹಾರ

ತೆಂಗಿನೆಣ್ಣೆ ಕರಿಬೇವಿನ ಸೊಪ್ಪಿನ ಮಿಶ್ರಣದ ಈ ಹೇರ್ ಆಯಿಲ್ ಆನ್ನು ರಾತ್ರಿ ಮಲಗುವ ಮೊದಲು ಕೂದಲಿಗೆ ಹಚ್ಚಿ ಮರುದಿನ ಸೌಮ್ಯ ಶಾಂಪೂ ಬಳಸಿ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.