White Hair Remedies: ಸುಂದರ ಕಪ್ಪು, ಕರಿಮಣಿಯಂತಹ ಕೂದಲನ್ನು ಹೊಂದುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಆದರೆ, ಈ ಒತ್ತಡ ಭರಿತ ಜೀವನಶೈಲಿಯಲ್ಲಿ ತುಂಬಾ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಸರ್ವೇ ಸಾಮಾನ್ಯವಾಗಿದೆ.
White Hair Remedies: ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಹುತೇಕ ಜನರು ಮೆಹಂದಿ ಬಳಸಿದರೆ, ಕೆಲವರು ತ್ವರಿತ ಪರಿಹಾರಕ್ಕಾಗಿ ಹೇರ್ ಡೈ ಬಳಸುತ್ತಾರೆ. ಆದರೆ, ಹೇರ್ ಡೈಗಳ ಬಳಕೆಯಿಂದ ಕೆಲವರಲ್ಲಿ ಕೂದಲು ಉದುರುವಿಕೆ ಹೆಚ್ಚಾದರೆ, ಇನ್ನೂ ಕೆಲವರಲ್ಲಿ ಚರ್ಮದ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಲಾಭದಾಯಕವಾಗಿವೆ.
1/6ಬಿಳಿ ಕೂದಲಿಗೆ ಹೆನ್ನಾ/ಮೆಹಂದಿ ಅಥವಾ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹೇರ್ ಡೈ ಗಳನ್ನು ಬಳಸುವ ಅವಶ್ಯಕತೆಯೇ ಇಲ್ಲ. ಬದಲಿಗ್ ನಿಮ್ಮ ಮನೆಯಲ್ಲಿರುವ ಚಹಾಪುಡಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯಕವಾಗಿದೆ.
2/6ಕೆಫೀನ್'ನಲ್ಲಿ ಸಮೃದ್ಧವಾಗಿರುವ ಬ್ಲಾಕ್ ಟೀ ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಕೂಡ ಹೇರಳವಾಗಿವೆ.
3/6ಒಂದು ಕಪ್ ನೀರಿಗೆ 2 ಸ್ಪೂನ್ ಬ್ಲಾಕ್ ಟೀ ಹಾಕಿ ಹೆಚ್ಚಾಗಿ ಕುದಿಸಿ. ನೀರಿನ ಬಣ್ಣ ಗಾಢವಾಗುವವರೆಗೂ ಸಣ್ಣ ಉರಿಯಲ್ಲಿ ಚಹಾವನ್ನು ಕುದಿಸಿ.
4/6ಕುದಿಸಿಟ್ಟ ಬ್ಲಾಕ್ ಟೀ ಅನ್ನು ಶೋಧಿಸಿ ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಒಂದು ಸ್ಪ್ರೇ ಬಾಟಲಿನಲ್ಲಿ ಹಾಕಿ.
5/6ತಲೆಗೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಮ್ಬುದಕ್ಕೆ ಬ್ಲಾಕ್ ಟೀ ದ್ರವವನ್ನು ಸ್ಪ್ರೇ ಮಾಡಿ. ನಂತರ ಲಘು ಮಸಾಜ್ ಮಾಡಿ.
6/6ಉಳಿದ ಬ್ಲಾಕ್ ಟೀಯಲ್ಲಿ ನೀವು ಬಳಸುವ ಶಾಂಪೂ ಬೇರೆಸ್ ಅದರಿಂದ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಜೊತೆಗೆ ಹೆಚ್ಚು ಕಾಂತಿಯುತವೂ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.