Silver Lucky Zodiac Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಲೋಹಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ. ಹಾಗಾಗಿ, ಅದರ ಬಳಕೆಯು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
Silver Lucky Zodiac Sign: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಲೋಹಗಳು ಕೂಡ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
1/6ಪ್ರಸ್ತುತ, ಕಾಲಮಾನದಲ್ಲಿ ಚಿನ್ನ ಬಲು ದುಬಾರಿ ಲೋಹವಾಗಿದೆ. ಹಾಗಾಗಿಯೇ, ಇದನ್ನು ಅತ್ಯುತ್ತಮ ಹೂಡಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ, ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನ ಅಲ್ಲ ಬದಲಿಗೆ ಬೆಳ್ಳಿ ಅದೃಷ್ಟವನ್ನು ಬದಲಾಯಿಸುತ್ತದೆ.
2/6ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು ಚಿನ್ನವನ್ನು ಆಳುವ ಗ್ರಹವಾಗಿದ್ದರೆ, ಬೆಳ್ಳಿ ಆಳ್ವಿಕೆಯ ಗ್ರಹ ಚಂದ್ರ. ಹಾಗಾಗಿಯೇ, ಕೆಲವು ರಾಶಿಯವರಿಗೆ ಬೆಳ್ಳಿಯಿಂದ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ. ಆ ಅದೃಷ್ಟದ ರಾಶಿಗಳೆಂದರೆ...
3/6ಆದಾಗ್ಯೂ, ಚಂದ್ರನ ಆಳ್ವಿಕೆಯ ರಾಶಿಗಳಾದ ಮೇಷ, ಸಿಂಹ ಮತ್ತು ಧನು ರಾಶಿಯವರಿಗೆ ಬೆಳ್ಳಿ ಧಾರಣೆ ಅಷ್ಟು ಉತ್ತಮವಲ್ಲ. ಬದಲಿಗೆ ಇತರ ಮೂರು ರಾಶಿಯವರಿಗೆ ಬೆಳ್ಳಿಯಿಂದ ಭಾರೀ ಅದೃಷ್ಟ, ಕೋಟ್ಯಾಧಿಪತಿ ಯೋಗ ಬರಲಿದೆ. ಅಂತಹ ಅದೃಷ್ಟದ ರಾಶಿಗಳೆಂದರೆ...
4/6ಶುಕ್ರವಾರದ ದಿನ ಈ ರಾಶಿಯವರು ಬೆಳ್ಳಿ ಉಂಗುರ ಅಥವಾ ಲಾಕೆಟ್ ಧಾರಣೆ ಮಾಡುವುದರಿಂದ ಈ ರಾಶಿಯವರಿಗೆ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯುವುದರ ಜೊತೆಗೆ ದಿಢೀರ್ ಧನಲಾಭವಾಗಲಿದೆ.
5/6ಕಟಕ ರಾಶಿಯವರು ಬೆಳ್ಳಿ ಧರಿಸುವುರರಿಂದ ಅದರಲ್ಲೂ ಶಿವ ಸಮರ್ಪಿತವಾದ ಸೋಮವಾರದ ದಿನ ಬೆಳ್ಳಿ ಉಂಗುರ ಧರಿಸುವುದರಿಂದ ಜೀವನದಲ್ಲಿ ಕೆಟ್ಟ ಸಮಯ ಕಳೆದು ಒಳ್ಳೆಯ ದಿನಗಳು ಆರಂಭವಾಗಲಿವೆ.
6/6ಈ ರಾಶಿಯವರಿಗೆ ಬೆಳ್ಳಿಯ ಆಭರಣ ಧರಿಸುವುದರಿಂದ ಇವರ ಅಂತಃಶಕ್ತಿ ಜಾಗೃತಗೊಳ್ಳುತ್ತದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಪ್ರಗತಿಯ ಹಾದಿಗಳು ತೆರೆಯಲಿದ್ದು ಹೆಜ್ಜೆ ಹೆಜ್ಜೆಗೂ ಅದೃಷ್ಟ ಕೈ ಹಿಡಿಯಲಿದ್ದು, ಕೋಟ್ಯಾಧಿಪತಿಗಳಾಗುವ ಯೋಗವಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.